ನವದೆಹಲಿ: ಚಿನಿವಾರ ಪೇಟೆಯಲ್ಲಿ ಇಂದು ಮತ್ತೆ ಚಿನ್ನದ ದರ ಏರಿಕೆ ಕಂಡು, ಆಭರಣ ಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ. ಚಿನ್ನದ ದರವು 10 ಗ್ರಾಂಗೆ ರೂ.2,200 ಏರಿಕೆಯಾಗಿ ಬರೋಬ್ಬರಿ 1,25,600ಕ್ಕೆ ಏರಿಕೆಯಾಗಿದೆ.
ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಮಾಹಿತಿ ನೀಡಿದ್ದು, ಶೇ.99.9ರಷ್ಟು ಪರಿಶುದ್ಧ 10 ಗ್ರಾಂ ಚಿನ್ನದ ದರವು 2,200 ಏರಿಕೆಯಾಗುವ ಮೂಲಕ 1,25,600ಕ್ಕೆ ಏರಿಕೆಯಾಗಿದೆ. ಇದು ನಿನ್ನೆಯ ಗುರುವಾರದಂದು 10 ಗ್ರಾಂಗೆ ರೂ.1,23,400 ಇತ್ತು ಎಂಬುದಾಗಿ ತಿಳಿಸಿದೆ.
ಆಭರಣ ಚಿನ್ನದ ದರ ಅಂದರೆ ಶೇ.99.5ರಷ್ಟು ಪರಿಶುದ್ಧತೆ ಹೊಂದಿರೋದು ರೂ.2,200 ಏರಿಕೆಯಾಗುವ ಮೂಲಕ 10 ಗ್ರಾಂಗೆ ರೂ.1,25,000ಕ್ಕೆ ಮಾರಾಟವಾಗಿದೆ. ಗುರುವಾರದಂದು ಆಭರಣ ಚಿನ್ನವು 10 ಗ್ರಾಂಗೆ ರೂ.1,22,800 ಇತ್ತು ಎಂದಿದೆ.
ಇನ್ನೂ ಬೆಳ್ಳಿಯ ಬೆಲೆ ಕೊಂಚ ಇಳಿಕೆಯಾಗಿದೆ. ಇಂದು ಕೆಜಿ ಬೆಳ್ಳಿಗೆ 2000 ರೂಪಾಯಿ ಇಳಿಕೆಯಾಗಿದೆ. ಹೀಗಾಗಿ ಒಂದು ಕೆಜಿ ಬೆಳ್ಳಿಗೆ 1,53,000 ರೂ ತಲುಪಿದೆ. ಇಂದು ಗುರುವಾರದ ನಿನ್ನೆಯಂದು 1,55,000 ಇತ್ತು.
BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ ನಿಗದಿ
‘ಗ್ರಾಮ ಪಂಚಾಯ್ತಿ ಚುನಾವಣೆ’ಗೆ ‘ನಾಮಪತ್ರ’ದೊಂದಿಗೆ ಸಲ್ಲಿಸಬೇಕಾದ ‘ಅಗತ್ಯ ದಾಖಲೆ’ಗಳಿವು
 
		



 




