ದ್ವಾರಕಾ: ದ್ವಾರಕಾದ ಭಿದ್ಭಂಜನ್ ಭವಾನೀಶ್ವರ್ ಮಹಾದೇವ್ ದೇವಸ್ಥಾನದಿಂದ ಶಿವಲಿಂಗವನ್ನು ಬುಧವಾರ ಕಳವು ಮಾಡಲಾಗಿದೆ ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ .
ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳು ತಂಡಗಳನ್ನು ರಚಿಸಿದ್ದಾರೆ. ಅಪರಾಧಿಗಳು ಶಿವಲಿಂಗವನ್ನು ಹತ್ತಿರದ ಸಮುದ್ರದಲ್ಲಿ ಅಡಗಿಸಿಟ್ಟಿರಬಹುದು ಎಂಬ ಊಹಾಪೋಹಗಳಿವೆ, ಮತ್ತು ಶೋಧವನ್ನು ತೀವ್ರಗೊಳಿಸಲು ಪರಿಣಿತ ಸ್ಕೂಬಾ ಡೈವರ್ಗಳು ಮತ್ತು ಈಜುಗಾರರನ್ನು ಕರೆಸಲಾಗಿದೆ.
ದ್ವಾರಕಾ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಪಾಂಡೆ ಮಾತನಾಡಿ, “ಭಿದ್ಭಂಜನ್ ಭವಾನೀಶ್ವರ್ ಮಹಾದೇವ್ ದೇವಾಲಯದ ಅರ್ಚಕರು ದೇವಾಲಯದಿಂದ ‘ಶಿವಲಿಂಗ’ವನ್ನು ಯಾರೋ ಕದ್ದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಂಡಗಳನ್ನು ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಯಾರಾದರೂ ಶಿವಲಿಂಗವನ್ನು ಸಮುದ್ರದಲ್ಲಿ ಅಡಗಿಸಿಟ್ಟಿರುವ ಸಾಧ್ಯತೆಯಿದೆ, ಆದ್ದರಿಂದ ನಾವು ಪರಿಣಿತ ಸ್ಕೂಬಾ ಡೈವರ್ಗಳು ಮತ್ತು ಈಜುಗಾರರನ್ನು ಕರೆದಿದ್ದೇವೆ ” ಎಂದರು.