ಬೆಂಗಳೂರು: ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಗೆ 6 ಆಪರೇಷನ್ ಮಾಡಲಾಗಿದೆ. 190 ಹೊಲಿಗೆ ಹಾಕಲಾಗಿದೆ. ಶಿವಣ್ಣ ತಲೆಯಲ್ಲಿ ಒಂದು ಸ್ಟಂಟ್ ಇದೆ. ಹೃದಯದಲ್ಲಿ ಒಂದು ಇದೆ. ಇದೇ ಜನವರಿ.25ರಂದು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ ಎಂಬುದಾಗಿ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಟ ಶಿವರಾಜ್ ಕುಮಾರ್ ಅವರಿಗೆ ಐದೂವರೆ ಗಂಟೆ ಆಪರೇಷನ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೇ ನಾಲ್ಕು ಮುಕ್ಕಾಲು ಗಂಟೆಯಲ್ಲಿ ಆಪರೇಷನ್ ಮುಗಿಯಿತು ಎಂದರು.
ಇದಕ್ಕೂ ಮೊದಲು ನಟ ಶಿವರಾಜ್ ಕುಮಾರ್ ಗೆ ಆಪರೇಷನ್ ಮ್ಯಾನುಯಲಿ ಮಾಡಬೇಕೋ ಅಥವಾ ರೋಬೋಟಿಕ್ ಮಾಡಬೇಕೋ ಅಂತನೂ ಚರ್ಚೆ ನಡೆಸಲಾಗಿತ್ತು. ಆದರೇ ಏಳೆಂಟು ಹೋಲ್ ಮಾಡಿ ದೇಹವನ್ನು ಉಲ್ಲಾ ಮಲಗಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕೊನೆಗೆ ಮ್ಯಾನುಯೆಲ್ ಸೂಕ್ತವೆಂದು ನಿರ್ಧರಿಸಿ ಆಪರೇಷನ್ ಮಾಡಲಾಗಿದೆ ಎಂದು ತಿಳಿಸಿದರು.
ಈಗ ಶಿವರಾಜ್ ಕುಮಾರ್ ಗೆ 63 ವರ್ಷ. ಅವರು ವಾಪಾಸ್ ಬಂದ ಮೇಲೆ 36ರ ರೀತಿ ಕಾಣಿಸ್ತಾರೆ. ವೈದ್ಯರು ನಮ್ಮ ತಂಡದ ಸದಸ್ಯರಂತೆಯೇ ಕೆಲಸ ಮಾಡಿದರು. ಅವರೆಲ್ಲರಿಗೂ ಧನ್ಯವಾದಗಳು ಅಂತ ಹೇಳಿದರು.
ಬೆಂಗಳೂರಿನ ಗೋಡೆಗಳ ಮೇಲೆ ಕಲಾವಿದರ ಕೈಚಳ: ಹಲವು ಕಥೆ ಹೇಳುತ್ತಿವೆ ಈ ಚಿತ್ರಗಳು
BREAKING : ‘ಪೂಜಾ ಖೇಡ್ಕರ್’ಗೆ ಬಿಗ್ ರಿಲೀಫ್ : ಬಂಧನಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ | Puja Khedkar