ಶಿವಮೊಗ್ಗ: ಜೂನ್.5ರ ವಿಶ್ವ ಪರಿಸರ ದಿನಾಚರಣೆಯ ಸಲುವಾಗಿ ಸೊರಬ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ಡಿಹೆಚ್ಓ ಡಾ.ನಟರಾಜ್ ಕೆ.ಎಸ್ ಅವರು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಬಳಿಕ ಮಾತನಾಡಿದಂತ ಅವರು ಪರಿಸರ ಉಳಿಸೋದು ನಮ್ಮ ನಿಮ್ಮೆಲ್ಲ ಕರ್ತವ್ಯವಾಗಿದೆ. ಗಿಡಮರ ಬೆಳೆಸಿದ್ರೆ ನಾವು ನೀವೆಲ್ಲ ಆರೋಗ್ಯವಂತರಾಗಿರುತ್ತೇವೆ ಅಂತ ಹೇಳಿದ್ರು.
ಈ ಕಾರ್ಯಕ್ರಮದಲ್ಲಿ ಡಾ.ಗುಡದಪ್ಪ ಕಸವಿ, ಡಿವಿಬಿಡಿಸಿಪಿ ಆಫೀಸರ್, ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ, ಸೊರಬ ತಾಲ್ಲೂಕು ವೈದ್ಯಾಧಿಕಾರಿಗಳು ಡಾ.ವಿನಯ್ ಪಾಟೀಲ್, ಡಾ.ಭರತ್, ಡಾ.ಲೋಹಿತ್, ಡಾ.ಸತೀಶ್, ಡಾ.ಆಕಾಶ್, ಡಾ.ಅಮಿತಾ, ಡಾ.ಅಭಿಷೇಕ್ ಹಾಗೂ ಶಿಲ್ಪಾ ಬೋರ್ಕರ್, ಶುಶ್ರೂಷಾಧೀಕ್ಷಕರು ಸೇರಿದಂತೆ ಇತರೆ ಸಿಬ್ಬಂದಿಗಳು ಹಾಜರಿದ್ದರು.
ನಿವೃತ್ತ ನೌಕರರಿಗೆ ಬೀಳ್ಕೊಡುಗೆ
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಹಿರಿಯ ಕ್ಷಕಿರಣ ತಜ್ಞರಾದಂತ ಗಣಪತಿ, ಗೀತಾ ಹಾಗೂ ತಾಲ್ಲೂಕು LHV ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಕುಸುಮ ಅವರಿಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸೊರಬದ ವತಿಯಿಂದ ಪೇಟ ತೊಡಿಸಿ, ಶಾಲು ಹೊದಿಸಿ, ಫಲಪುಷ್ಪ ನೀಡಿ ಬೀಳ್ಕೊಡುಗೆ ನೀಡಲಾಯಿತು.
ರಾಜ್ಯ ರೈತರಿಗೆ ಸಂತಸದ ಸುದ್ದಿ: ಕೃಷಿಕರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ
BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸ್ಥಾನಕ್ಕೆ ‘ದೇವೇಂದ್ರ ಫಡ್ನವೀಸ್’ ರಾಜೀನಾಮೆ