ಶಿವಮೊಗ್ಗ: ಸಾಗರದಲ್ಲಿ ಮಹಿಳಾ ಪೌರ ಕಾರ್ಮಿಕರೊಬ್ಬರ ಮೇಲೆ ನಗರಸಭೆಯ ಮೇಸ್ತ್ರಿ ನಾಗರಾಜ ಎಂಬುವರು ಹಲ್ಲೆ ಮಾಡಿ, ಗೂಂಡಾಗಿರಿ ಪ್ರದರ್ಶನ ಮಾಡಿರುವಂತ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ಮೇಸ್ತ್ರಿ ನಾಗರಾಜ ಎಂಬುವರು ಮಹಿಳಾ ಪೌರ ಕಾರ್ಮಿಕರೊಬ್ಬರಿಗೆ ಟ್ರ್ಯಾಕ್ಟರ್ ಮೂಲಕ ಮಣ್ಣು ತುಂಬಿಕೊಂಡು ಬರುವಂತೆ ಮಣ್ಣು ಹೋರೋದಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಆದ್ರೇ ಇದಕ್ಕೆ ಮಹಿಳಾ ಪೌರಕಾರ್ಮಿಕರು ಒಪ್ಪಿಲ್ಲ.
ಇದೇ ವಿಚಾರವಾಗಿ ಮೇಸ್ತ್ರಿ ನಾಗರಾಜ ಹಾಗೂ ಮಹಿಳಾ ಪೌರ ಕಾರ್ಮಿಕರೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆಯಲ್ಲಿ ಮಹಿಳಾ ಪೌರಕಾರ್ಮಿಕೆ ತಾನು ಕಸಗುಡಿಸೋದು, ನಗರದ ಸ್ವಚ್ಛತೆಗಾಗಿ ನಿಯೋಜನೆಗೊಂಡಿದ್ದೇನೆ. ಟ್ರ್ಯಾಕ್ಟರ್ ಗೆ ಮಣ್ಣು ಹೊತ್ತಾಕೋ ಕೆಲಸಕ್ಕೆ ಅಲ್ಲ ಅಂತ ಹೇಳಿದ್ದಾರೆ.
ಮಹಿಳಾ ಪೌರ ಕಾರ್ಮಿಕೆಯ ಮಾತಿನಿಂದ ಸಿಟ್ಟಾದಂತ ಮೇಸ್ತ್ರಿ ನಾಗರಾಜ ಆಕೆಯ ಮೇಲೆ ಹಲ್ಲೆ ನಡೆಸಿ, ದರ್ಪ ತೋರಿರೋದಾಗಿ ಹೇಳಲಾಗುತ್ತಿದೆ. ಅಲ್ಲ ಸ್ವಾಮಿ ಸ್ವಚ್ಛತಾ ಕಾರ್ಯಗಳಿಗೆ ನಿಯೋಜಿಸಿರೋ ಪೌರ ಕಾರ್ಮಿಕರನ್ನು ಮಣ್ಣೋರೋದಕ್ಕೆ ಇಟ್ರೆ ಹೇಗೆ ಎಂಬುದು ಸಾಗರ ನಗರದ ಜನತೆಯ ಪ್ರಶ್ನೆಯಾಗಿದೆ. ಅಲ್ಲದೇ ಕೂಡಲೇ ಗೂಂಡಾ ವರ್ತನೆ ತೋರಿದಂತ ಮೇಸ್ತ್ರಿ ನಾಗರಾಜ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ತರಲಾಗಿ, ಮಹಿಳಾ ಪೌರ ಕಾರ್ಮಿಕರ ಮೇಲೆ ಹಲ್ಲೆ ಖಂಡನೀಯ, ನಗರಸಭೆ ಮೇಸ್ತ್ರಿ ನಾಗರಾಜ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಹಿಳಾ ಪೌರ ಕಾರ್ಮಿಕರ ಜೊತೆಗೆ ಸೌಜನ್ಯದಿಂದ ವರ್ತಿಸಬೇಕು. ಇಂತಹ ಗೂಂಡಾಗಿರಿಯನ್ನು ತಾನು ಸಹಿಸೋದಿಲ್ಲ ಎಂಬುದಾಗಿ ಹೇಳಿದ್ದಾರೆ.
ಪೌರಕಾರ್ಮಿಕರಿಗೆ ಗುಡ್ ನ್ಯೂಸ್: ವಾರಕ್ಕೆ ಒಂದು ದಿನ ರಜೆ ನೀಡಿ ರಾಜ್ಯ ಸರ್ಕಾರ ಆದೇಶ | Pourakarmikas
ಶೀಘ್ರವೇ ರಾಜ್ಯದಲ್ಲಿ ‘ಪೋಡಿ ಮುಕ್ತ ಗ್ರಾಮ ಅಭಿಯಾನ’ಕ್ಕೆ ಚಾಲನೆ: ಕಂದಾಯ ಸಚಿವ ಕೃಷ್ಣಭೈರೇಗೌಡ