ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ದೂಗೂರಿಗೆ ಮೂರು ಕಾಡಾನೆಗಳು ಎಂಟ್ರಿಯಾಗಿವೆ. ಮೊನ್ನೆಯಷ್ಟೇ ಕಾನಹಳ್ಳಿಯಲ್ಲಿದ್ದಂತ ಈ ಆನೆಗಳು, ಈಗ ದೂಗೂರು ಕಾಡಿಗೆ ಆಗಮಿಸಿದ್ದಾವೆ. ಕಾಡಾನೆಗಳ ಆಗಮನದಿಂದ ರೈತರು ಬೆಳೆ ನಾಶದ ಆತಂಕಕ್ಕೆ ಒಳಗಾಗಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಎರಡು ಜೋಡಿ ಕಾಡಾನೆಗಳು ಉಳವಿ, ಕೈಸೋಡಿ, ಕಾನಹಳ್ಳಿ, ದೂಗೂರು, ಬರಗಿಗೆ ಬಂದಿದ್ದವು. ಅಲ್ಲಲ್ಲಿ ರೈತರ ಫಲಸು ತಿಂದು ನಾಶಪಡಿಸಿದ್ದವು. ಇದೀಗ ಮತ್ತೆ ಕಾಡಾನೆಗಳು ರಿಟರ್ನ್ ಆಗಿದ್ದಾವೆ. ಈಗ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಕಾಡಾನೆಗಳು ದೂಗೂರು ವ್ಯಾಪ್ತಿಯ ಕಾಡಲ್ಲಿ ಕಾಣಿಸಿಕೊಂಡಿರೋದಾಗಿ ಅರಣ್ಯ ಇಲಾಖೆಯ ಮೂಲಗಳ ಮಾಹಿತಿಯಾಗಿದೆ.
ಕಳೆದ ಒಂದೆರಡು ದಿನಗಳ ಹಿಂದೆ ಕಾನಹಳ್ಳಿಯಲ್ಲಿ ರೈತರೊಬ್ಬರ ತೋಟಕ್ಕೆ ನುಗ್ಗಿದ್ದಂತ ಇವೇ ಕಾಡಾನೆಗಳು, ರೈತನ ಅಡಿಕೆ ಮರಗಳನ್ನು ಮುರಿದು ಹಾಕಿದ್ದರೇ, ಬೆಳೆಯನ್ನು ತಿಂದು ಹಾಕಿ ನಾಶ ಪಡಿಸಿದ್ದವು. ಅಡಿಕೆ, ಬಾಳಿ ಗಿಡಗಳ ನಾಶದಿಂದ ರೈತ ಕಂಗಾಲಾಗಿದ್ದನು.
ಇದೀಗ ಕಾನಹಳ್ಳಿ ಕಡೆಯಿಂದ ಮೂರು ಕಾಡಾನೆಗಳು ದೂಗೂರಿಗೆ ಎಂಟ್ರಿಯಾಗಿವೆ. ದೂಗೂರು ಕಾಡಿನಲ್ಲಿ ಮೂರು ಕಾಡಾನೆಗಳು ಬೀಡು ಬಿಟ್ಟಿವೆ ಎನ್ನಲಾಗುತ್ತಿದೆ. ಆದರೇ ಅವುಗಳನ್ನು ಕಂಡವರಿಲ್ಲ. ಹೆಜ್ಜೆ ಗುರುತಿನ ಮೇಲೆ ಮೂರು ಕಾಡಾನೆಗಳು ಬಂದಿರಬಹುದು ಎಂಬುದು ಅರಣ್ಯ ಇಲಾಖೆ ಮೂಲಗಳ ಮಾಹಿತಿಯಾಗಿದೆ. ಅವುಗಳನ್ನು ಮುಂದೆ ಸಾಗದಂತೆ ತಡೆದು, ಬಂದ ದಾರಿಯಲ್ಲೇ ಓಡಿಸೋ ಕಾರ್ಯಾಚರಣೆಗೆ ಉಳವಿ, ನಿಸ್ಸರಾಣಿ ವ್ಯಾಪ್ತಿಯ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ಇಳಿದಿದ್ದಾರೆ ಎನ್ನಲಾಗುತ್ತಿದೆ. ಆ ಕೆಲಸವನ್ನು ತ್ವರಿತವಾಗಿ ಮಾಡಿ, ರೈತರ ಬೆಳೆ ನಾಶ ಪಡಿಸೋ ಮುನ್ನವೇ ಕಾಡಿಗೆ ಓಡಿಸಲಿ ಎಂಬುದು ಸಾರ್ವಜನಿಕರ ಒತ್ತಾಯ, ಆಗ್ರಹವಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…..
BIG NEWS: ರಾಜ್ಯದ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿ ಸರ್ಕಾರ ಆದೇಶ
BIG NEWS: ರಾಜ್ಯಾಧ್ಯಂತ ಇ-ಸ್ವತ್ತು ತಂತ್ರಾಂಶದಡಿ 1,14,907 ಅರ್ಜಿಗಳನ್ನು ಅನುಮೋದನೆ








