ಶಿವಮೊಗ್ಗ: ಜಿಲ್ಲೆಯ ಸಾಗರದ ತಾಲ್ಲೂಕಿನ ಮಡಸೂರು ಬಳಿಯಲ್ಲಿ ಕಳೆದ ಐದು ದಿನಗಳಿಂದ ಪತ್ತೆಯಾಗದ ಎರಡು ಆಸೆಗಳು ಡ್ರೋನ್ ಕ್ಯಾಮರಾ ಹದ್ದಿನ ಕಣ್ಣಿನಲ್ಲಿ ಪತ್ತೆಯಾಗಿವೆ.
ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಆನೆಗಳು ಇಂದಿನ ಥರ್ಮಲ್ ಸ್ಕ್ಯಾನ್ ಡ್ರೋನ್ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿವೆ. ಇದೀಗ ರಸ್ತೆ ಸಂಚಾರ ಬಂದ್ ಮಾಡಿ ಶೆಟ್ಟಿಹಳ್ಳಿ ಕಡೆಗೆ ಓಡಿಸೋದಕ್ಕ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.
ಸಾರ್ವಜನಿಕರಲ್ಲಿ ಈ ಮನವಿ ಮಾಡಿದ ಡಿಎಫ್ಓ ಮೋಹನ್ ಕುಮಾರ್
ಈ ಕುರಿತು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್ ಅವರು, ಸಾಗರ ತಾಲೂಕಿನ ಮಡಸೂರು ಬಳಿಯ ಕಾಡಿನಲ್ಲಿ ಗಂಡು ಹಾಗೂ ಹೆಣ್ಣು ಆನೆಗಳು ಪತ್ತೆ ಆಗಿದ್ದಾವೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಕೃಷಿ ಕೆಲಸದಲ್ಲಿ ತೊಡಗಿದ್ದರೇ ಆನೆ ಕಾಣಿಸಿಕೊಂಡಿರುವ ವ್ಯಾಪ್ತಿಯಿಂದ ದೂರ ತೆರಳಬೇಕು. ರಾತ್ರಿ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.
ಇಂದಿನ ಥರ್ಮಲ್ ಡ್ರೋನ್ ಸ್ಕ್ಯಾನ್ ಕಾರ್ಯಾಚರಣೆ ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್, ವೈಡ್ ಲೈಫ್ ಡಿಎಫ್ಓ ಪ್ರಸನ್ನ ಪಟ್ಟೆಗಾರ್, ಎಸಿಎಫ್ ವಿಜಯ್ ಕಾಳಪ್ಪನವರ್, ಸೊರಬ ಎಸಿಎಫ್ ಸುರೇಶ್ ಕುಳ್ಳಳ್ಳಿ, ಸಾಗರ ಆರ್ ಎಫ್ ಓ ಅಣ್ಣಪ್ಪ, ಸೊರಬ ಆರ್ ಎಫ್ ಓ ಶ್ರೀಪಾದ್ ನಾಯ್ಕ್, ಅರಣ್ಯ ವೀಕ್ಷಕರು ಹಾಗೂ ಡ್ರೋನ್ ಆಪರೇಟರ್ ಗೋಪಿ, ಡಿ ಆರ್ ಎಫ್ ಓ, ಗಸ್ತು ಅರಣ್ಯ ಪಾಲಕರು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು, ಕನ್ನಡ ನ್ಯೂಸ್ ನೌ-9738123234








