ಶಿವಮೊಗ್ಗ: ನಾಳೆ ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದೆ. ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದಿಂದ ಮಾರಿಕಾಂಬಾ ಜಾತ್ರೆ, ಸಂಘದ ಚುನಾವಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ 20-09-2025ರ ಶನಿವಾರದ ನಾಳೆ ಸಾಗರದ ಆರ್ಯ ಈಡಿಗರ ಕಲ್ಯಾಣ ಮಂದಿರ, ವರದಹಳ್ಳಿ ರಸ್ತೆಯಲ್ಲಿ ಸರ್ವ ಸದಸ್ಯರ ಸಭೆಯನ್ನು ನಿಗದಿ ಪಡಿಸಲಾಗಿದೆ. ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್ ನಾಗೇಂದ್ರ ಅಧ್ಯಕ್ಷತೆಯಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಸರ್ವ ಸದಸ್ಯ ಸಾಮಾನ್ಯ ಸಭೆ ನಡೆಯಲಿದೆ ಎಂದು ತಿಳಿಸಿದೆ.
ಈ ಸಭೆಯಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಸಾಗರ-ಹೊಸನಗರ ತಾಲ್ಲೂಕು ಶಾಸಕರಾದಂತ ಗೋಪಾಲಕೃಷ್ಣ ಬೇಳೂರು ಇವರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಸದಸ್ಯರೆಲ್ಲರೂ ಹಾಜರಿರುವಂತೆ ಕೋರಲಾಗಿದೆ.
ಇನ್ನೂ ಶ್ರೀ ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ಸದಸ್ಯರುಗಳಿಗೆ ಈಗಾಗಲೇ ಸಭೆಯ ನೋಟಿಸ್ ಅನ್ನು ಅವರವರ ವಿಳಾಸಕ್ಕೆ ಕಳುಹಿಸಲಾಗಿದೆ. ಒಂದು ವೇಳೆ ನೋಟಿಸ್ ತಲುಪದೇ ಇದ್ದವರು ಇದೇ ನೋಟಿಸ್ ಎಂದು ಭಾವಿಸುವಂತೆಯೂ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನ ಮನವಿ ಮಾಡಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ನಾವು ಜಾತಿಗಣತಿ ಸಮೀಕ್ಷೆಯನ್ನು ಮುಂದೂಡಲ್ಲ: ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
BREAKING: ನಾವು ಜಾತಿಗಣತಿ ಸಮೀಕ್ಷೆಯನ್ನು ಮುಂದೂಡಲ್ಲ: ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ