ಶಿವಮೊಗ್ಗ : ಜಿಲ್ಲೆಯ ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕಂತನಹಳ್ಳಿ ಗ್ರಾಮದ ಸ.ನಂ:08 ರ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿತಲೆ ಪ್ರಕರಣ ಸಂಬಂಧ ಸೊರಬ ವಲಯದ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ದಾಳಿ ನೆಡಸಿ ಮೂವರನ್ನು ಬಂಧಿಸಿದ್ದಾರೆ.
ಈ ಕುರಿತು ಸೊರಬ ವಲಯ ಅರಣ್ಯಾಧಿಕಾರಿ ಜಾವೆದ್ ಬಾಷ ಅಂಗಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೆರೆಗೆ ಸೊರಬ ವಲಯದ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ದಾಳಿ ನೆಡಸಿ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಮರ ಕಡಿತಲೆ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಸ್ಥಳದಲ್ಲೆ 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
1ನೇ ಆರೋಪಿಯಾದ ಕೃಷ್ಣಮೂರ್ತಿ ಬಿನ್ ಶ್ರೀಕಾಂತ್ ಗುಂಜನೂರು ಗ್ರಾಮ ಸೊರಬ (ತಾ), 2ನೇ ಆರೋಪಿಯಾದ ಅನೀಲ್ ಕುಮಾರ್ ಬಿನ್ ಚಂದ್ರಪ್ಪ ಗುಂಜನೂರು ಗ್ರಾಮ ಸೊರಬ (ತಾ) ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಲಾಗಿದೆ. ಸದರಿ ಬಂಧಿತರು ನೀಡಿದ ಮಾಹಿತಿಯ ಮೇರೆಗೆ ಮತ್ತೋರ್ವ 03 ನೇ ಆರೋಪಿಯಾದ ಪುಟ್ಟರಾಜ ಗೌಡ ಬಿನ್ ಬಾಲಚಂದ್ರ ಗುಂಜನೂರು ಗ್ರಾಮ ಸೊರಬ (ತಾ), ಜೆ.ಎಂ.ಎಪ್,ಸಿ ವ್ಯವಹಾರಿಕ ನ್ಯಾಯಾಲಯ ಸೊರಬರಿಂದ ಅನುಮತಿ ಪಡೆದು ಸದರಿಯವರ ಮೇಲೆ ಅರಣ್ಯ ಮೊಕದ್ದಮೆ ಸಂಖ್ಯೆ:40/2024-25 ದಿನಾಂಕ:23.01.2025 ಅನ್ನು ದಾಖಲಿಸಿ. ಬಂದಿತರಿಂದ 02 ಮರ ಕುಯ್ಯುವ ಯಂತ್ರಗಳನ್ನು ಹಾಗೂ 22 ನಾಟಾ ತುಂಡುಗಳಿಂದ=2.976 ಅಂದಾಂಜು ಮೊತ್ತ ರೂ. 47,000 ಹಾಗೂ ಸೌದೆ= 5.000ಎಂ3 ಅಂದಾಜು ಮೊತ್ತ ರೂ. 3,000 ಒಟ್ಟು ಮೊತ್ತ ರೂ. 50,000 ಇಲಾಖಾ ಪರ ಜಪ್ತು ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸದರಿ ಪ್ರದೇಶವು ಇಲಾಖಾ ವಶದಲ್ಲಿದ್ದು ಒತ್ತುವರಿ ತಡೆಯುವ ದೃಷ್ಟಿಯಿಂದ ಜಾನುವಾರು ನಿರೋಧಕ ಕಂದಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಇನ್ನೂ ಕೆಲವು ಜನರು ಬಾಗಿಯಾಗಿರಬಹುದಾದ ಸಂಶಯವಿದ್ದು ವಲಯ ಅರಣ್ಯಾಧಿಕಾರಿಯವರಿಂದ ತನಿಖೆ ನಡೆಸಲಾಗುತ್ತಿದೆ. ಕಂತನಹಳ್ಳಿ ಕಿರು ಅರಣ್ಯ ಪ್ರದೇಶವಾಗಿದ್ದು, ಸದರಿ ಪ್ರದೇಶದಲ್ಲಿ ಈಗಾಗಲೆ ಕೆಲವರಿಗೆ ಅಕ್ರಮ ಮಂಜೂರಾತಿಯಾಗಿದ್ದು, ಅಕ್ರಮ ಮಂಜುರಾತಿಯನ್ನು ರದ್ದುಗೊಳಿಸುವಂತೆ ಮಾನ್ಯ ಉಪ ವಿಭಾಗಾಧಿಕಾರಿಗಳು ಸಾಗರ ಉಪ ವಿಭಾಗ, ಸಾಗರ ಅವರಿಗೆ ಮೇಲ್ಮನವಿ ಸಲ್ಲಿಸಲಾಗಿರುತ್ತದೆ ಎಂದು ಹೇಳುತ್ತಾರೆ.
ಉಳಿದ ಒತ್ತುವರಿದಾರರ ವಿರುದ್ಧ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸೊರಬ ಉಪ ವಿಭಾಗ ಸೊರಬರವರಿಗೆ ಒತ್ತುವರಿ ತೆರವುಗೊಳಿಸಲು 64 (ಎ)ರಡಿ ವಿಚಾರಣೆ ನೆಡೆಸಿ ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನ ಸಲ್ಲಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸದರಿ ಪ್ರಕರಣವನ್ನು ಪತ್ತೇಹಚ್ಚುವಲ್ಲಿ ಮೋಹನ್ ಕುಮಾರ್ ಡಿ.,(ಭಾ.ಅ.ಸೇ) ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಗರ ವಿಭಾಗ, ಸಾಗರ ಮತ್ತು ಸುರೇಶ್ ಅರ್ಜುನ್ ಕುಳೊಳ್ಳಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಸೊರಬ ಉಪ ವಿಭಾಗ ಸೊರಬರವರ ಮಾರ್ಗದರ್ಶನದಲ್ಲಿ, ಜಾವೆದ್ ಬಾಷಾ ಅಂಗಡಿ, ವಲಯ ಅರಣ್ಯಾಧಿಕಾರಿಗಳು, ಸೊರಬ ವಲಯ, ಸೊರಬರವರ ಮುಂದಾಳತ್ವದಲ್ಲಿ ಗುಂಜನೂರು ಶಾಖಾ ಉಪ ವಲಯ ಅರಣ್ಯಾಧಿಕಾರಿಯಾದ ಶರಣಪ್ಪ ಎಂ. ವೈ., ಆನಂದ ಗಸ್ತು ಅರಣ್ಯ ಪಾಲಕ, ಹರೀಶ.ವಿ., ಗಸ್ತು ಅರಣ್ಯ ಪಾಲಕ ಮುಂತಾದವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು