ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ವಿವಿಧೆಡೆಯಲ್ಲಿ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ಮೇ.25, 2025ರ ಭಾನುವಾರದ ನಾಳೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ಈ ಕುರಿತಂತೆ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ: 25.05.2025 ರ ಭಾನುವಾರದಂದು ಸಾಗರದ ಬಿ.ಹೆಚ್ ರಸ್ತೆ, ಅಗಲೀಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಸಾಗರ ಪಟ್ಟಣ ವ್ಯಾಪ್ತಿಯ ಈ ಕೆಳಕಂಡ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಅಂತ ತಿಳಿಸಿದೆ.
ನಾಳೆ ಸಾಗರ ತಾಲ್ಲೂಕಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲಿ
ಎಲ್.ಬಿ.ಕಾಲೇಜು, ಅಂಬಾಮರ, ಲೋಹಿಯಾನಗರ, ಪ್ರಗತಿನಗರ, ವಿನೋಬನಗರ, ಮಂಕಳಲೆ, ನೆಹರುನಗರ, ಅರಳಿಕೊಪ್ಪ ಜನ್ನತ್‌ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಜೋಸಫ್ ನಗರ, ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್, ಎಲ್.ಐ.ಸಿ ಆಫೀಸ್ ಹತ್ತಿರ ಪವರ್ ಕಟ್ ಆಗಲಿದೆ.
ಎಸ್.ಎನ್.ನಗರ ಫೀಡರ್ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಗಾಂಧೀನಗರ, ವಿಜಯನಗರ, ಬಿ.ಕೆ. ರಸ್ತೆ, ರಾಮನಗರ, ಹೆಗಡೆ ಫಾರಂ, ಎಸ್.ಎನ್ ನಗರ, ಕಂಬಳಿಕೊಪ್ಪ, ಚಿಪ್ಪಿ ಮತ್ತು ಆಧಿಶಕ್ತಿನಗರದಲ್ಲಿ ಕರೆಂಟ್ ಇರೋದಿಲ್ಲ.
ಯಲಗಳಲೆ, ಇಂಡಸ್ಟ್ರೀಯಲ್ ಏರಿಯಾ ಮತ್ತು ಗ್ರಾಮೀಣ ವ್ಯಾಪ್ತಿಯ ಎಫ್ ಹೆಗ್ಗೋಡು, ಆವಿನಹಳ್ಳಿ, ವರದಹಳ್ಳಿ, ಆವಿನಹಳ್ಳಿ, ಹೆಗ್ಗೋಡು, ಭೀಮನಕೋಣೆ, ಯಡಜಿಗಳಮನೆ, ಕಲ್ಕನೆ, ಗ್ರಾಮ ಪಂಚಾಯತಿ ವ್ಯಾಪ್ತಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಶೀಘ್ರವೇ ಬೆಂಗಳೂರಲ್ಲಿ 2 ಹಂತದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್: ಢಿಸಿಎಂ ಡಿ.ಕೆ ಶಿವಕುಮಾರ್
ಕಾನೂನು ವಿವಿ ಪರೀಕ್ಷಾ ವಿಧಾನ ಬಗ್ಗೆ ವ್ಯಾಪಕ ಮೆಚ್ಚುಗೆ: ಕುಲಪತಿ ಪ್ರೊ.ಬಸವರಾಜು ಸಂತಸ