ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಗೆ ಇಂದು “ಕನ್ನಡ ಜ್ಯೋತಿ ರಥಯಾತ್ರೆ” ಆಗಮಿತು. ಕನ್ನಡ ಸಾಹಿತ್ಯ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದಂತ ಉಳವಿಯ ಗ್ರಾಮಸ್ಥರು, ಆತ್ಮೀಯವಾಗಿ ಬೀಳ್ಕೊಡುಗೆ ಕೊಟ್ಟರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಗ್ರಾಮಕ್ಕೆ 87ನೇ ಅಖಿಲ ಭಾರತ ಕನ್ನ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾಧ್ಯಂತ ಸಂಚರಿಸುತ್ತಿರುವಂತ “ಕನ್ನಡ ಜ್ಯೋತಿ ರಥ ಯಾತ್ರೆಗೆ ಆಗಮಿಸಿತು.
ಉಳವಿ ಹಾಗೂ ದೂಗುರು ಗ್ರಾಮ ಪಂಚಾಯ್ತಿಯ ಅಧಿಕಾರಿಗಳು, ಸಿಬ್ಬಂದಿಗಳು, ಉಳವಿಯ ಗ್ರಾಮಸ್ಥರು ಸೇರಿ ಕನ್ನಡ ಜ್ಯೋತಿ ರಥಯಾತ್ರೆಗೆ ಪೂರ್ಣಕುಂಭದೊಂದಿಗೆ ಅದ್ದೂರಿ ಸ್ವಾಗತತವನ್ನು ಕೋರಿದರು.
ಈ ವೇಳೆ ಮಾತನಾಡಿದಂತ ಉಪನ್ಯಾಸಕ ಶಿವಕುಮಾರ್ ಅವರು, ಕನ್ನಡ ಭಾಷೆ, ಕನ್ನಡ ನಾಡು ಉಳಿಯಲು, ಬೆಳೆಯಲು, ನಿರಂತತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ವರ್ಷ ಮಂಡ್ಯದಲ್ಲಿ ನಡೆಯುವಂತಹ 87ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ “ಕನ್ನಡ ಜ್ಯೋತಿ ರಥ” ಉಳವಿ ಗ್ರಾಮಕ್ಕೆ ಬಂದಿದೆ. ಅದರನ್ನು ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದಂತ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಂತ ಮಂಜುನಾಥ್, ಸೊರಬ ತಹಶೀಲ್ದಾರ್ ಮಂಜುಳಾ, ಇಓ ಪ್ರದೀಪ್ ಕುಮಾರ್, ಸೊರಬ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದಂತ ಶಿವಾನಂದ ಪಾಣಿ, ತಾಲ್ಲೂಕು ಘಟಕದ ಸದಸ್ಯರು, ದೂಗುರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಫಯಾಜ್ ಅಹ್ಮದ್, ಪಿಡಿಓ ನಾಗರಾಜ್, ಸೊರಬ ತಾಲ್ಲೂಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ವಿನಾಯಕ ಕಾನಡೆ ಹಾಗೂ ರಮೇಶ್.ಬಿ, ಉಳವಿಯ ಮಂಜಪ್ಪ, ದೂಗೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಂಗಮ್ಮ, ಉಳವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದಂತ ವಿರೂಪಾಕ್ಷಪ್ಪ ಸೇರಿದಂತೆ ದೂಗೂರು-ಉಳವಿ ಗ್ರಾಮಯ ಎಲ್ಲಾ ಗ್ರಾಮಸ್ಥರಿಗೆ ಧನ್ಯವಾದಗಳನ್ನು ತಿಳಿಸಿದರು.
ಏನಿದು ಕನ್ನಡ ಜ್ಯೋತಿ ರಥ ಯಾತ್ರೆ?
ಮೈಸೂರು ರಾಜ್ಯವು ಕರ್ನಾಟಕವೆಂದು ಮರು ನಾಮಕರಣವಾಗಿ 2023ರ ನ.1ಕ್ಕೆ 50 ವರ್ಷ ಪೂರ್ಣಗೊಂಡ ಶುಭ ಸಂದರ್ಭಕ್ಕೆ ಸಿಎಂ ಸಿದ್ಧರಾಮಯ್ಯ, ಕಳೆದ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ಸಂಭ್ರಮ-50 ಘೋಷಿಸಿದ್ದರು. ಅದರಡಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಅದರ ಅಂಗವಾಗಿ ಕನ್ನಡ ಜ್ಯೋತಿ ರಥೆಯಾತ್ರೆ ನಡೆಯುತ್ತಿದೆ.
ಈ ರಥಯಾತ್ರೆಯು ರಾಜ್ಯದ 31 ಜಿಲ್ಲೆಗಳೂ ಸೇರಿದಂತೆ 6 ಬೇರೆ ಬೇರೆ ರಾಜ್ಯದ ಗಡಿ ಪ್ರದೇಶದಲ್ಲಿ ಸಂಚರಿಸಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವಂತ ಸಕ್ಕರೆ ನಾಡು ಮಂಡ್ಯ ತಲುಪಲಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು