ಶಿವಮೊಗ್ಗ: ಉಡುಪಿಯಲ್ಲಿ ರಂಗಭೂಮಿ ( ರಿ) ಉಡುಪಿ ಸಂಸ್ಥೆ ಏರ್ಪಡಿಸಿದ್ದ 46 ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಸಾಗರದ ಸ್ಪಂದನ ರಂಗತಂಡ ಮಂಜುನಾಥ್ ಎಲ್ ಬಡಿಗೇರ ಅವರ ನಿರ್ದೇಶನದಲ್ಲಿ ಅಭಿನಯಿಸಿದ ಪ್ರಾಣಪದ್ಮಿನಿ ನಾಟಕಕ್ಕೆ ತೃತೀಯ ಶ್ರೇಷ್ಠ ನಾಟಕ ಬಹುಮಾನ ಲಭಿಸಿದೆ.
ಈ ನಾಟಕದ ರಂಗಬೆಳಕು ವಿಭಾಗದಲ್ಲಿ ಜೀವನ್ ಕುಮಾರ್ ಬಿ ಹೆಗ್ಗೋಡು- ಪ್ರಥಮ.
ಸಂಗೀತ ವಿಭಾಗದಲ್ಲಿ ಭಾರ್ಗವ ಹೆಗ್ಗೋಡು , ಅರುಣ್ ಕುಮಾರ್ ದ್ವಿತೀಯ
ಶ್ರೇಷ್ಠ ನಟಿ ವಿಭಾಗದಲ್ಲಿ ಭೂಮಿ ತೃತೀಯ
ಶ್ರೇಷ್ಠ ನಟ ವಿಭಾಗದಲ್ಲಿ ಕಾರ್ತಿಕ್ ಕೆ ತೃತೀಯ
ಮೆಚ್ಚುಗೆ ಬಹುಮಾನ ವಿವೇಕ್ ನಾಯಕ್ ಎಂ ಬಿ ಪಡೆದಿದ್ದಾರೆ.
ನವೆಂಬರ್ 23 ರಿಂದ ಡಿಸೆಂಬರ್ 4 ರವರೆಗೆ ನಡೆದಿದ್ದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳ 12 ರಂಗತಂಡಗಳು ಭಾಗವಹಿಸಿದ್ದವು.
ತೀರ್ಪುಗಾರರಾಗಿ ಕೆ ಜಿ ಮಹಾಬಲೇಶ್ವರ್ , ನಟರಾಜ ಹೊನ್ನವಳ್ಳಿ , ರಾಮುರಂಗಾಯಣ, ಗಣೇಶ್ ಕುಮಾರ್ ಎಲ್ಲೂರು, ಶಶಿಕಲಾ ಜೋಷಿ ಕಾರ್ಯನಿರ್ವಹಿಸಿದ್ದರು.








