ಶಿವಮೊಗ್ಗ: ಭಾರತೀಯ ಆಯುರ್ವೇದ ಪರಂಪರೆಯಲ್ಲಿ ರುದ್ರಾಕ್ಷಿ ಗೆ ಅತ್ಯಂತ ಮಹತ್ವವಿದೆ ಎಂದು ಸಾರಲಾಗಿದೆ ಎಂದು ಜಡೆ ಸಂಸ್ಥಾನ ಮಠ ಮತ್ತು ಸೊರಬ ಮುರುಘಾ ಮಠದ ಪೂಜ್ಯರಾದ ಡಾ.ಮಹಾಂತ ಮಹಾ ಸ್ವಾಮೀಜಿ ನುಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ನಗರದ ಸಾರ್ವಜನಿಕ ಆಸ್ಪತ್ರೆಯ ಉದ್ಯಾನವನದಲ್ಲಿ ವೈದ್ಯ ದಿನಾಚರಣೆ ಅಂಗವಾಗಿ ರುದ್ರಾಕ್ಷಿ ಗಿಡ ನೆಟ್ಟು ಅವರು ಮಾತನಾಡಿದರು.
ಭಾರತೀಯ ಆಯುರ್ವೇದ ಔಷಧ ಪರಂಪರೆಯ ಇತಿಹಾಸದಲ್ಲಿ ರುದ್ರಾಕ್ಷಿ ಗಿಡಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಲೋಕದ ಕಲ್ಯಾಣಕ್ಕಾಗಿ ಭಗವಂತನ ಕಣ್ಣೀರಿನ ಹನಿಯಿಂದ ರುದ್ರಾಕ್ಷಿ ಗಿಡ ಉದ್ಭವವಾಗಿದೆ ಎಂಬ ಪ್ರತೀತಿ ಇದೆ ಎಂದರು.
ಜಗತ್ತಿನಲ್ಲಿ ಸ್ವಾರ್ಥ ಗುಣಗಳನ್ನು ಹೊಂದಿದವರನ್ನು ಕಾಣುತ್ತೇವೆ. ಅದರೆ ಮರ, ಗಿಡ, ಬಳ್ಳಿ ,ತರು ಲತೆಗಳಿಗೆ ಸ್ವಾರ್ಥ ಗುಣಗಳಿಲ್ಲ. ಜೊತೆಗೆ ಅವು ಪರೋಪಕಾರ ಗುಣಗಳನ್ನು ಹೊಂದಿರುತ್ತವೆ. ದೇಹದ ವಿವಿಧ ಕಾಯಿಲೆಗಳಿಗೆ, ಚರ್ಮ ರೋಗ ಪೀಡಿದರು ರುದ್ರಾಕ್ಷಿ ಧರಿಸುವುದರಿಂದ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಲ್ಲಿ ಅಧ್ಯಯನದ ಆಸಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ ಎಂದರು.
ಸೊರಬ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ.ಪ್ರಭು ಕೆ.ಸಾಹುಕಾರ್ ಮಾತನಾಡಿ ವೈದ್ಯರ ಯಶಸ್ಸಿನಲ್ಲಿ ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಯ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಇದು ನಿರಂತರವಾಗಿ ನಡೆಯಲಿ. ಆಸ್ಪತ್ರೆಯ ಶ್ರೇಯೋಭಿವೃದ್ಧಿಗೆ, ರೋಗಿಗಳ ಸೇವೆಗೆ ಮತ್ತಷ್ಟು ತೆರೆದುಕೊಳ್ಳುವಂತಾಗಲಿ ಎಂದರು.
ವೈದ್ಯ ಡಾ.ಸತೀಶ್ ನಾಯಕ್ ಮಾತನಾಡಿ, ವೈದ್ಯರ ಜೊತೆಗೆ ಬೆನ್ನೆಲುಬಾಗಿ ನಿಂತಿರುವ ಸಮಸ್ತ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಚಿರಋಣಿಯಾಗಿ ಇರುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಜುಲೈ.1ರ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸುದ್ದಿಗಾಗಿ ತೆರಳಿದ್ದಂತ ಪತ್ರಕರ್ತರನ್ನು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಭು ಕೆ ಸಾಹುಕಾರ್ ಅವರು, ಪತ್ರಕರ್ತರೊಂದಿಗೆ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಿ, ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಡಾ.ಮಹಾದೇವ್ ಜಯರಾಂ ಪವಾರ್, ಡಾ.ಲೋಹಿತ್, ಡಾ.ಅಭಿಷೇಕ್, ಸಮಾಜ ಸೇವಕ, ಉದ್ಯಮಿ ನಾಗರಾಜ್ ಗುತ್ತಿ, ವೇಣುಗೋಪಾಲ್, ಮಹೇಶ್ ಪಾಟೀಲ್, ಸೊರಬ ಸಾರ್ವಜನಿಕ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಶಿಲ್ಪಾ ಬೋರ್ಕರ್, ಚನ್ನಪ್ಪ, ರವಿ, ಅಭಿಷೇಕ್, ಗುರು, ಜಿಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನನ್ನ ಬಗ್ಗೆ ಎಷ್ಟೇ ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಕೂಡ ಮಾಡುವುದಿಲ್ಲ: ಸಿಎಂ ಸಿದ್ಧರಾಮಯ್ಯ