ಶಿವಮೊಗ್ಗ: ಜಿಲ್ಲೆಯಲ್ಲಿ ಮೆಸ್ಕಾಂ ಇಲಾಖೆಯಿಂದ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಸೆಪ್ಟೆಂಬರ್.24ರ ನಾಳೆ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಶಿವಮೊಗ್ಗ ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಸೆ. 24 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ನವುಲೆ, ಎಲ್.ಬಿ.ಎಸ್.ನಗರ, ಅಶ್ವತ್ನಗರ, ಕೀರ್ತಿನಗರ, ಸವಳಂಗರಸ್ತೆ, ಬಸವೇಶ್ವರ ನಗರ, ಕೃಷಿನಗರ, ರಾಯಲ್ ಬಡಾವಣೆ, ಅನೂಪ್ ಪಾಟೀಲ್, ಕುವೆಂಪುನಗರ, ರೆಡ್ಡಿ ಲೇಔಟ್, ಜ್ಯೋತಿನಗರ, ಜೆ.ಎನ್.ಎನ್.ಸಿ. ಕಾಲೇಜ್, ಶಿವಬಸವನಗರ, ಬೊಮ್ಮನಕಟ್ಟೆ ಎ ರಿಂದ ಹೆಚ್ ಬ್ಲಾಕ್ವರೆಗೆ, ಹಳೆ ಬೊಮ್ಮನಕಟ್ಟೆ, ಶಾಂತಿನಗರ, ತಾವರೆಚಟ್ನಹಳ್ಳಿ, ಹೊನ್ನಾಳಿರಸ್ತೆ, ಗುಂಡಪ್ಪ ಶೆಡ್, ಶಂಕರಮಠರಸ್ತೆ, ಮಲ್ಲೇಶ್ವರನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ನಾಳೆ ಸಾಗರ ಗ್ರಾಮೀಣ ಉಪ ವಿಭಾಗ ಕಚೇರಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ
ಶಿವಮೊಗ್ಗ ಜಿಲ್ಲೆಯ ಮೆಸ್ಕಾಂ ಸಾಗರ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ದಿನಾಂಕ 26.09.2024 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9480880595.
BREAKING : ಬೆಂಗಳೂರಲ್ಲಿ ‘CCB’ ಭರ್ಜರಿ ಬೇಟೆ : 1 ಕೋಟಿಗು ಅಧಿಕ ಮೌಲ್ಯದ ‘ಡ್ರಗ್ಸ್’ ಜೊತೆ ದಂಪತಿಗಳು ಅರೆಸ್ಟ್!