ಶಿವಮೊಗ್ಗ : ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ ಪ್ರಿಯಾಂಕ ಬಡಾವಣೆ ಮುಖ್ಯರಸ್ತೆಯಲ್ಲಿರುವ ಹಳೆಯ ಕಂಬ ಬದಲಿಸುವ ಕಾಮಗಾರಿ ಇರುವುದರಿಂದ ಪ್ರಿಯಾಂಕ ಬಡಾವಣೆ ಮತ್ತು ಪಂಡಿತ್ ಬಡಾವಣೆಯಲ್ಲಿ ಹಾಗೂ ಘಟಕ-3ರ ವ್ಯಾಪ್ತಿಯಲ್ಲಿ ಹೆಚ್ಚುವರಿ ಪರಿವರ್ತಕ ಅಳವಡಿಸುವ ಕಾಮಗಾರಿ ಇರುವುದರಿಂದ ಹಳೆ ಬೊಮ್ಮನಕಟ್ಟೆ, ಮಮತಾನಗರ, ದೇವಂಗಿ 2ನೇ ಹಂತದ ಬಡಾವಣೆ, ಪಾರ್ವತಮ್ಮ ಬಡಾವಣೆ ಹಾಗೂ ಮಹಾರಾಣಿ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು.16 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಖಾಲಿ ಇರುವ ಐಟಿಐ ಸೀಟ್‍ಗಳ ನೇರ ಪ್ರವೇಶಕ್ಕೆ ಅರ್ಜಿ ಆಹ್ವಾನ
ಸೊರಬ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯು 2024-25ನೇ ಸಾಲಿನ ಖಾಲಿ ಇರುವ ಸೀಟ್‍ಗಳ ನೇರ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ನೇರ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಎಲೆಕ್ಟ್ರಾನಿಕ್ ಮೆಕ್ಯಾನಿಕ್-5, ಫಿಟ್ಟರ್-10, ಇನ್ಫಾರ್ಮೇಶನ್ ಮತ್ತು ಕಮ್ಯೂನಿಕೇಶನ್ ಟೆಕ್ನಾಲಜಿ ಸಿಟ್ಟಮ್ ಮೇಂಟೇನೆನ್ಸ್-24 ಹಾಗೂ ಮೆಕ್ಯಾನಿಕ್ ಮೋಟಾರ್ ವೆಹಿಕಲ್-5 ವೃತ್ತಿಗಳ 2 ವರ್ಷಗಳ ತರಬೇತಿಗಾಗಿ ಒಟ್ಟು ಖಾಲಿ ಇರುವ 44 ಸೀಟ್‍ಗಳ ಪ್ರವೇಶಕ್ಕೆ ನೇರವಾಗಿ ಅರ್ಜಿ ಸಲ್ಲಿಸಿ, ದಾಖಲಾತಿ ಪರಿಶೀಲನೆ ಮಾಡಿಸಿಕೊಂಡು ಪ್ರವೇಶ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08184-270005 ನ್ನು ಸಂಪರ್ಕಿಸುವುದು.
Good News: ಶೀಘ್ರದಲ್ಲಿಯೇ ‘400 ಪಶು ವೈದ್ಯ’ರ ನೇಮಕ: ಸಚಿವ ಕೆ.ವೆಂಕಟೇಶ್
HD ಕುಮಾರಸ್ವಾಮಿ ಸರ್ವಪಕ್ಷ ಸಭೆಗೆ ಬರದೇ ‘ಬಾಡೂಟಕ್ಕೆ’ ಹೋಗಿದ್ದು ದುರಂತ : ಸಚಿವ ಚೆಲುವರಾಯಸ್ವಾಮಿ