ಶಿವಮೊಗ್ಗ: ಶಿವಮೊಗ್ಗ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಂಸಿಎಫ್-18 ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ಮಾ.23 ರಂದು ಬೆಳಿಗ್ಗೆ 10.00 ರಿಂದ ಸಂಜೆ 6 ರವರೆಗೆ ಹೊನ್ನವಿಲೆ, ನವುಲೆಬಸವಾಪುರ, ಅಮರಾವತಿ ಕ್ಯಾಂಪ್, ಹಳೆ ಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ ಹಾಗೂ ಸುತ್ತಮುತ್ತನಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ
ಶಿವಮೊಗ್ಗ: ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಮೈಸೂರಿನ ಫುಡ್ ಕ್ರಾಫ್ಟ್ ಇನ್ಸಿಟ್ಯೂಟ್ ಮತ್ತು ಬೆಂಗಳೂರಿನ ಇನ್ಸಿಟ್ಯೂಟ್ ಆಪ್ ಹೋಟೆಲ್ ಮ್ಯಾನೇಜ್‌ಮೆಂಟ್ ಮೂಲಕ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪ.ಜಾ/ ಪ.ಪಂ.ಗಳ ಅಭ್ಯರ್ಥಿಗಳಿಗೆ 2ನೇ ಹಂತದ ಕೌಶಲ್ಯಾಭಿವೃದ್ಧಿ ತರಬೇತಿ ಆಯೋಜಿಸಲಾಗಿದ್ದು, 20-45 ವರ್ಷದೊಳಗಿನ ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
8ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳಿಗೆ ಮಲ್ಟಿ ಕುಸಿನ್ ಕುಕ್ ಕುರಿತು 5 ತಿಂಗಳ ತರಬೇತಿ ಹಾಗೂ 10ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳಿಗೆ ಫುಡ್ ಆಂಡ್ ಬೆವರೇಜ್ ಸರ್ವಿಸ್ ಸ್ಟೀವರ್ಡ್ ಕುರಿತು 4 ತಿಂಗಳ ತರಬೇತಿ ನೀಡಲಾಗುತ್ತಿದ್ದು, ನಿಗದಿತ ನಮೂನೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆದಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 03/04/2025 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಗುರುದತ್ತ ಹೆಗಡೆರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.:08182-251444 ನ್ನು ಸಂಪರ್ಕಿಸುವುದು.
ಮುಸ್ಲಿಮರಿಗೆ ಮೀಸಲಾತಿ ವಿರುದ್ಧ ಬಿಜೆಪಿ- ಜೆಡಿಎಸ್ ಜನಾಂದೋಲನ: ಬಿವೈ ವಿಜಯೇಂದ್ರ
BREAKING : `ಹನಿಟ್ರ್ಯಾಪ್’ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ : CM ಸಿದ್ದರಾಮಯ್ಯ ಘೋಷಣೆ | Honeytrap cace