ಶಿವಮೊಗ್ಗ: ಆಲ್ಕೋಳ. ವಿ.ವಿ.ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ. 12 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಸ್.ವಿ.ಬಡಾವಣೆ ಎ ಯಿಂದ ಎಫ್ ಬ್ಲಾಖ್, ಸ್ವಿಮಿಂಗ್ ಫೂಲ್‌ನ ಸುತ್ತಮುತ್ ಮಹಿಳಾ ಪಾಲಿಟೆಕ್ನಿಕ್, ರಾಮಕೃಷ್ಣ ಐಟಿಐ ಕಾಲೇಜ್, ಸ್ನೇಹ ಅಪಾರ್ಟ್ಮೆಂಟ್, ಚಂದನ ಪಾರ್ಕ್, ಗಾಡಿಕೊಪ್ಪ ಜ್ಞಾನಗಂಗಾ ಶಾಲೆ, ಕಾಳಿದಾಸ ಬಡಾವಣೆ, ನಂಜಪ್ಪ ಲೈಫ್ ಕೇರ್, ಸಂಭ್ರಮ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಘ-ಸಂಸ್ಥೆಗಳ ನೋಂದಣಿ ನವೀಕರಿಸಲು ಸೂಚನೆ
ಶಿವಮೊಗ್ಗ ಜಿಲ್ಲೆಯ ಸಹಕಾರ ಇಲಾಖೆಯು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960 ಕಲಂ 13 ರಂತೆ ನೋಂದಣಿಯಾದ ಪ್ರತಿಯೊಂದು ಸಂಘ-ಸಂಸ್ಥೆಗಳು ಪ್ರತಿವರ್ಷ ನವೀಕರಣಗೊಳಿಸಿಕೊಳ್ಳುವುದು ಕಡ್ಡಾಯ. ಅನೇಕ ಸಂಘ-ಸಂಸ್ಥೆಗಳು 5 ವರ್ಷಗಳಿಗೂ ಮೇಲ್ಪಟ್ಟು ನವೀಕರಿಸದೇ ಇರುವುದರಿಂದ ಇಂತಹ ಸಂಘ-ಸಂಸ್ಥೆಗಳ ಹಿತದೃಷ್ಠಿಯಿಂದ ಕೂಡಲೇ ಪ್ರತಿ ವರ್ಷಕ್ಕೆ ರೂ. 3,000/-ಗಳ ದಂಡ ಪಾವತಿಸಿ ನವೀಕರಿಸಿಕೊಳ್ಳುವುದು.
ಇಂತಹ ಸಂಘ ಸಂಸ್ಥೆಗಳು ದಿ: 31/12/2025 ರೊಳಗಾಗಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ಸೂಕ್ತ ದಾಖಲೆ ಮತ್ತು ಮಾಹಿತಿಗಳೊಂದಿಗೆ ಫೈಲಿಂಗ್ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.