ಶಿವಮೊಗ್ಗ: ವಿದ್ಯುತ್ ನಿರ್ವಹಣ ಕಾಮಗಾರಿಯ ಹಿನ್ನಲೆಯಲ್ಲಿ ಫೆಬ್ರವರಿ.28ರಂದು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಎಂ.ಆರ್.ಎಸ್. 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 110 ಕೆವಿ ಭದ್ರಾವತಿ ವಿವಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆ. 28 ರಂದು ಬೆಳಗ್ಗೆ 9.30 ರಿಂದ ಸಂ. 3.30ರವರೆಗೆ ಮಾಚೇನಹಳ್ಳಿ ವಿವಿ ಕೇಂದ್ರದ ವ್ಯಾಪ್ತಿಯ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್ ಕರೆಂಟ್ ಇರೋದಿಲ್ಲ ಅಂತ ತಿಳಿಸಿದೆ.
ಇನ್ನೂ ದುಮ್ಮಳ್ಳಿ, ಶುಗರ್ಕಾಲೋನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆ, ಮೇ||ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐ.ಟಿ.ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ.ಕಾಲೋನಿ, ನವುಲೆಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀಭದ್ರಕಾಲೋನಿ, ಸದಾಶಿವಪುರ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ, ಹಾರೋಬೆನವಳ್ಳಿ, ತಾಂಡ, ಗೌಡನಾಯಕನಹಳ್ಳಿ, ಬಿ.ಬೀರನಹಳ್ಳಿ, ತರಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಪಾನ್ನ ‘SLIM ಮೂನ್ ಲ್ಯಾಂಡರ್’ 2 ವಾರಗಳ ಚಂದ್ರನ ರಾತ್ರಿಯ ನಂತರ ‘ಮತ್ತೆ ಜೀವಂತ: ವಿಜ್ಞಾನಿಗಳಿಗೆ ಅಚ್ಚರಿ
ತೀರ್ಥ, ಪ್ರಸಾದ ಬೇಡ ‘ಬಸ್’ ಕೊಡಿ ಎಂದು ಸಿಎಂಗೆ ‘ವಿದ್ಯಾರ್ಥಿನಿ ಪತ್ರ’: ಈ ಸ್ಪಷ್ಟನೆ ಕೊಟ್ಟ ‘BMTC’