ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ: 16.03.2025ರ ಭಾನುವಾರದ ನಾಳೆ ಎಫ್-17 ಎಸ್.ಎನ್ ನಗರ 11ಕೆ.ವಿ ಮಾರ್ಗದ ವಾಹಕ ಬದಲಾವಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ನಾಳೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾಗರ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಅಂತ ತಿಳಿಸಿದೆ.
ನಾಳೆ ಸಾಗರ ತಾಲ್ಲೂಕಿನ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ
ವಿನೋಬನಗರ, ಮಂಕಳಲೆ, ನೆಹರುನಗರ, ಅರಳೀಕೊಪ್ಪ, ಜನ್ನತ್‌ನಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಜೋಸೆಫ್ ನಗರ, ಕೃಷ್ಣ ಗ್ಯಾರೇಜ್, ಎಲ್.ಐ.ಸಿ ಆಫೀಸ್ ಹತ್ತಿರ ಮತ್ತು ಎಫ್-17 ಎಸ್.ಎನ್ ನಗರ ಫೀಡರ್ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಗಾಂಧೀನಗರ, ಬಿ.ಕೆ ರಸ್ತೆ, ರಾಮನಗರ, ಹೆಗಡೆ ಫಾರಂನಲ್ಲಿ ಪವರ್ ಕಟ್ ಆಗಲಿದೆ.
ಎಸ್.ಎನ್ ನಗರ, ಕಂಬಳಿಕೊಪ್ಪ, ಚಿಪ್ಪಿ ಮತ್ತು ಆಧಿಶಕ್ತಿನಗರ ಪ್ರದೇಶಗಳಲ್ಲಿ ಬೆಳಗ್ಗೆ: 10:00 ಘಂಟೆಯಿಂದ ಸಂಜೆ: 05:00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬ ವಿಷಯವನ್ನು ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
ವರದಿ: ವಸಂತ ಬಿ ಈಶ್ವರಗೆರೆ
BREAKING: ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಾ.18, 19ರಂದು ಬಿಸಿಗಾಳಿ ಹೆಚ್ಚಳ: ಯೆಲ್ಲೋ ಅಲರ್ಟ್ ಘೋಷಣೆ
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!