ಶಿವಮೊಗ್ಗ: ದಿನಾಂಕ: 11.04.2025ರ ಶುಕ್ರವಾರದ ನಾಳೆ, ಸಾಗರದ ಬಿ.ಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಮೆಸ್ಕಾಂನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 11.04.2025 ರಂದು ಸಾಗರ ಪಟ್ಟಣ ವ್ಯಾಪ್ತಿಯ ಎಫ್-1 ಸಾಗರ ಟೌನ್ ಫೀಡರ್ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಎಲ್.ಬಿ ಕಾಲೇಜು, ಅಂಬಾಪುರ, ಲೋಹಿಯಾನಗರ, ಪ್ರಗತಿನಗರ, ವಿನೋಬನಗರ, ಮಂಕಳಲೆ, ನೆಹರುನಗರ, ಅರಳೀಕೊಪ್ಪ, ಜನ್ನತ್‌ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಜೋಸೆಫ್ ನಗರ, ಕೃಷ್ಣ ಗ್ಯಾರೇಜ್ ಕರೆಂಟ್ ಇರೋದಿಲ್ಲ ಎಂದಿದೆ.
ಎಲ್.ಐ.ಸಿ ಆಫೀಸ್ ಹತ್ತಿರ ಮತ್ತು ಎಫ್-17 ಎಸ್.ಎನ್ ನಗರ ಫೀಡರ್ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಗಾಂಧೀನಗರ, ವಿಜಯನಗರ, ಬಿ.ಕೆ ರಸ್ತೆ, ರಾಮನಗರ, ಹೆಗಡೆ ಫಾರಂ, ಎಸ್.ಎನ್ ನಗರ, ಕಂಬಳಿಕೊಪ್ಪ, ಚಿಪ್ಪಿ ಮತ್ತು ಆಧಿಶಕ್ತಿನಗರ ಪ್ರದೇಶಗಳಲ್ಲಿ ಬೆಳಗ್ಗೆ: 10:00 ಘಂಟೆಯಿಂದ ಸಂಜೆ: 06:00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.