ಶಿವಮೊಗ್ಗ: 110/11 ಕೆವಿವಿ ವಿದ್ಯುತ್ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ 11 ಕೆವಿ ಫೀಡರ್‌ಗಳಿಗೆ ಜನವರಿ.18ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಮೆಸ್ಕಾಂ, ದಿನಾಂಕ:18.01.2026 ರಂದು ಸೊರಬ ಪಟ್ಟಣದಲ್ಲಿ ಟೌನ್ ಫೀಡರ್‌ನ ಬೇರ್ಪಡಿಸುವ ಕಾಮಗಾರಿಯನ್ನು ತುರ್ತಾಗಿ ನಡೆಸಲಾಗುತ್ತಿದೆ. ಹೀಗಾಗಿ ಜನವರಿ.18ರಂದು ಸೊರಬ ಶಾಖಾ ವ್ಯಾಪ್ತಿಗೆ ಒಳಪಡುವ ಎಫ್-21 ಸೊರಬ ಪಟ್ಟಣ ಸೇರಿದಂತೆ ಎಫ್-2 ಸಾರೇಕೊಪ್ಪ, ಎಫ್-3 ಬಳ್ಳಿಬೈಲು, ಎಫ್-4 ಓಟೂರು, ಎಫ್-5 ಚಿಕ್ಕಾವಲಿ, ಎಫ್-6 ಹಾಲಗಳಲೆ, ಎಫ್-7 ತಳೇಬೈಲು, ಎಫ್-8 ಕುಪ್ಪೆ, ಎಫ್15 ಕಲ್ಲಂಬಿ ಎನ್‌ಜೆವೆ, ಎಫ್-16 ಕಡಸೂರು ಎನ್‌ಜೆವ್, ಎಫ್-17 ಯಲವಳ್ಳಿ ಎನ್‌ಜೆವ್ರ, ಎಫ್-9 ಬಿಳಾಗಿ, ಎಫ್10 ಕುಂದಗಸವಿ ಕರೆಂಟ್ ಇರೋದಿಲ್ಲ ಎಂದಿದೆ.
ಎಫ್-11 ಮಂಚಿ, ಎಫ್-12 ಉರಗನಹಳ್ಳಿ, ಎಫ್-13 ಅಂಡಿಗೆ, ಎಫ್-14 ಕೊಡಕಣಿ, ಎಫ್-23 ತಾವರೆಹಳ್ಳಿ, ಎಫ್-24 ಕಕ್ಕರಸಿ, ಎಫ್25 ನಡಹಳ್ಳಿ ಮತ್ತು ಎಫ್26 ಸೊರಬ ಇಂಡಸ್ಟ್ರೀಯಲ್ ಫೀಡರ್‌ಗಳ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು/ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು
ಜಿಯೋ ಪ್ಲಾಟ್‌ಫಾರ್ಮ್ಸ್ ಮೂರನೇ ತ್ರೈಮಾಸಿಕ ಲಾಭ ರೂ. 7,629 ಕೋಟಿಗೆ ಜಿಗಿತ
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








