ಶಿವಮೊಗ್ಗ: ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಈ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹತ್ವದ ಕ್ರಮವನ್ನು ಕೈಗೊಂಡಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ದಿನಾಂಕ: 26-08-2025 ರಂದು ಪೋಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆಯಲ್ಲಿ ಈ ಕೆಳಕಂಡ ಪ್ರಮುಖ ಮತ್ತು ಅತೀ ಸೂಕ್ಷ್ಮತೆಯಿಂದ ಕೂಡಿರುವ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧ ನಗರ/ಪಟ್ಟಣ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮಧ್ಯ ತಯಾರಿಕೆ, ಮಾರಾಟ, ಸರಬರಾಜು ಮತ್ತು ಸಾಗಾಟಗಳನ್ನು ನಿಷೇಧಿಸಿ ಪಾನನಿರೋಧ “ಶುಷ್ಕ ದಿನ” ಗಳೆಂದು ಮತ್ತು ಎಲ್ಲಾ ವಿವಿಧ ಮಧ್ಯದ ಸನ್ನದು ಮಾರಾಟ ಮಳಿಗೆಗಳನ್ನು ಮದ್ಯ ಮಾರಾಟ ಡಿಪೋಗಳನ್ನು ಹಾಗೂ ಮಧ್ಯ ತಯಾರಿಕಾ ಘಟಕಗಳನ್ನು ಮುಚ್ಚಲು ಆದೇಶ ಹೊರಡಿಸಬೇಕಾಗಿ ಕೋರಿರುತ್ತಾರೆ. ಪೋಲಿಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ರವರ ಕೋರಿಕೆ ಮೇರೆಗೆ ಈ ಕೆಳಕಂಡಂತೆ ಸೂಚಿಸಿರುವ ದಿನಾಂಕಗಳಂದು ಮತ್ತು ಸಮಯದಲ್ಲಿ “ಶುಷ್ಕ ದಿನ” ಘೋಷಿಸಬಹುದಾಗಿದ್ದು, ಈ ಕೆಳಕಂಡ ಆದೇಶಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆ-1965 ರ ಕಲಂ 21(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಗುರುದತ್ತ ಹೆಗಡೆ, ಭಾ.ಆ.ಸೇ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಪೋಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಇವರ ಶಿಫಾರಸ್ಸನ್ನು ಪರಿಗಣಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕೆಳಕಂಡ ಪ್ರಮುಖ ಮತ್ತು ಅತೀ ಸೂಕ್ಷ್ಮತೆಯಿಂದ ಕೂಡಿರುವ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ದೃಷ್ಟಿಯಿಂದ ಈ ಕೆಳಗೆ ನಮೂದಿಸಿರುವ ನಗರ/ಪಟ್ಟಣ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಸೂಚಿಸಿರುವ ದಿನಾಂಕಗಳಂದು ಮತ್ತು ಸಮಯದಲ್ಲಿ ಎಲ್ಲಾ ರೀತಿಯ ಮಧ್ಯ ತಯಾರಿಕೆ, ಮಾರಾಟ, ಸರಬರಾಜು ಮತ್ತು ಸಾಗಾಟಗಳನ್ನು ನಿಷೇಧಿಸಿ ಪಾನನಿರೋಧ “ಶುಷ್ಕ ದಿನ” ಗಳೆಂದು ಆದೇಶಿಸಿದ್ದೇನೆ. ಈ ದಿನಗಳಂದು ಸದರಿ ಪ್ರದೇಶಗಳಲ್ಲಿ ಯಾವುದೇ ರೀತಿಯ ಮದ್ಯ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿದ್ದಾರೆ.
ಹೀಗಿದೆ ಇಂದು ಸಿಎಂ ಸಿದ್ಧರಾಮಯ್ಯ ಅಧ್ಯಕ್ಷತೆಯ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್
BIG NEWS: ಆತ್ಮಹತ್ಯೆಗೆ ಮುಂದಾದ ವ್ಯಕ್ತಿ ಬದುಕಿಸಿದ ಕಾರ್ಗಲ್ ಠಾಣೆ PSI ನಾಗರಾಜ್: ಹೇಗೆ ಗೊತ್ತಾ?