ಶಿವಮೊಗ್ಗ: ಜಿಲ್ಲೆಯ ವಾರ್ತಾಧಿಕಾರಿಯಾಗಿದ್ದಂತ ಮಾರುತಿ.ಆರ್ ಅವರನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಲಾಗಿತ್ತು. ಅಲ್ಲದೇ ಶಿವಮೊಗ್ಗ ನೂತನ ವಾರ್ತಾಧಿಕಾರಿಯಾಗಿ ಧನಂಜಯ ಅವರನ್ನು ನೇಮಕ ಮಾಡಲಾಗಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಮಾರುತಿ.ಆರ್ ಅವರು ಕೆಎಟಿ ಮೊರೆ ಹೋಗಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದಂತ ಕೋರ್ಟ್ ಸರ್ಕಾದ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಅಲ್ಲದೇ ಶಿವಮೊಗ್ಗ ವಾರ್ತಾಧಿಕಾರಿಯಾಗಿಯೇ ಮುಂದುವರಿಕೆ ಆದೇಶ ಮಾಡಿದೆ.
ಆಗಸ್ಟ್.22ರಂದು ವಾರ್ತಾ ಇಲಾಖೆಯ ಅಧೀನ ಕಾರ್ಯದರ್ಶಿಯವರು ಶಿವಮೊಗ್ಗ ವಾರ್ತಾಧಿಕಾರಿಯಾಗಿದ್ದಂತ ಮಾರುತಿ.ಆರ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದ್ದರು. ಈ ಆದೇಶದ ಕಾರಣ ಅಂದೇ ವಾರ್ತಾ ಇಲಾಖೆಯ ಆಯುಕ್ತರು ಮಾರುತಿ.ಆರ್ ಅವರನ್ನು ವರ್ಗಾವಣೆಗೊಳಿಸಿ ಚಾಲನಾದೇಶವನ್ನು ಮಾಡಿದ್ದರು. ಮಾರುತಿ.ಆರ್ ಅವರ ಸ್ಥಾನಕ್ಕೆ ದಾವಣಗೆರೆಯ ವಾರ್ತಾಧಿಕಾರಿಯಾಗಿದ್ದಂತ ಧನಂಜಯ ಅವರನ್ನು ನೇಮಕ ಮಾಡಲಾಗಿತ್ತು.
ರಾಜ್ಯ ಸರ್ಕಾರದ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಆಗಸ್ಟ್.23ರಂದು ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್ ಅವರು ಕೆಎಟಿ ಮೊರೆ ಹೋಗಿದ್ದರು. ಕೆಎಟಿಯಲ್ಲಿ OA A.No.3832/2025 ರಡಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದಂತ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಆಗಸ್ಟ್.25ರಂದು ವಾರ್ತಾಧಿಕಾರಿ ಮಾರುತಿ.ಆರ್ ಅವರ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಮೂಲಕ ಶಿವಮೊಗ್ಗ ವಾರ್ತಾಧಿಕಾರಿಯಾಗಿಯೇ ಮುಂದುವರೆಸಿ ಕೆಎಟಿ ಆದೇಶಿಸಿದೆ. ಹೀಗಾಗಿ ಇದೀಗ ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಮಾರುತಿ.ಆರ್ ಅವರು ಮುಂದುವರೆದಂತೆ ಆಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು