ಶಿವಮೊಗ್ಗ: ಇಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರು ಆರ್ಯ ಅಡಿಕೆ ಬೆಳಗಾರರು ಮತ್ತು ವ್ಯಾಪಾರಸ್ಥರು(ಆಗ್ಮಾ)ದಿಂದ ನೂತನವಾಗಿ ಪ್ರಾರಂಭಿಸಲಾದಂತ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರಿ ಕೇಂದ್ರವನ್ನು ಉದ್ಘಾಟಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಎಪಿಎಂಸಿ ಆವರಣದ ನಂ.12ರಲ್ಲಿ ಆರ್ಯ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಸ್ಥರು(ಆಗ್ಮಾ) ಅಡಿಯ ನೂತನವಾಗಿ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಒಂದು ಸಂಸ್ಥೆ ಕಟ್ಟೋದು ಮುಖ್ಯವಾಗಲ್ಲ. ಅದನ್ನು ಉತ್ತಮ ರೀತಿಯಲ್ಲಿ ಬೆಳಿಸಿಕೊಂಡು ಹೋಗಬೇಕು. ಅದಕ್ಕಾಗಿ ಸಂಸ್ಥೆಯಲ್ಲಿನ ಪ್ರತಿಯೊಬ್ಬರು ಶ್ರಮಿಸಬೇಕು. ಶ್ರಮವಹಿಸಿ ದುಡಿಯಬೇಕು. ಆಗ ಆ ಸಂಘ, ಸಂಸ್ಥೆ ದೊಡ್ಡಮಟ್ಟಕ್ಕೆ ಬೆಳೆಯಲು ಸಾಧ್ಯ ಎಂಬುದಾಗಿ ಅಭಿಪ್ರಾಯ ಪಟ್ಟರು.
ನನ್ನ ಕ್ಷೇತ್ರದಲ್ಲಿ ಇಂತದ್ದೊಂದು ಸಂಘ ಶುರುವಾಗಿದ್ದು, ಶುಭಾರಂಭ ಮಾಡಿದ್ದು ಸಂತಸ ತಂದಿದೆ. ಸಂಘ ಉನ್ನತ ಮಟ್ಟಕ್ಕೆ ಬೆಳೆಯಲಿ. ಅಡಿಕೆ ಬೆಳೆಯುವಂತ ರೈತರಿಗೆ ಈ ಸಂಘದ ಮೂಲಕ ಸಹಾಯವಾಗಲಿ ಎಂಬುದಾಗಿ ಆಶಿಸಿದರು.
ಅಡಿಕೆ ದಲ್ಲಾಳಿ ಮತ್ತು ವ್ಯಾಪಾರಿ ಕೇಂದ್ರದ ಉದ್ಘಾಟನೆಯ ನಂತ್ರ ಮಾತನಾಡಿದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರು, ಇದರಿಂದ ಅಡಿಕೆ ಬೆಳೆಗಾರ ರೈತರ ಏಳಿಗೆಗೆ, ಭವಿಷ್ಯವನ್ನು ರೂಪಿಸುವ ಕೆಲಸ ಆಗಬೇಕು. ಈ ಕೇಂದ್ರ ಯಶಸ್ಸು ಸಾಧಿಸಿ, ರೈತರ ಶ್ರೇಯೋಭಿವೃದ್ಧಿಯ ಕೆಲಸ ಮಾಡುವಂತಾಗಲಿ ಎಂಬುದಾಗಿ ಹಾರೈಸಿದರು.
ದಿವ್ಯ ಉಪಸ್ಥಿತಿ ವಹಿಸಿದ್ದಂತ ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಎಸ್ ರಾಮಪ್ಪ ಅವರು ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಉತ್ತಮವಾಗಿ ಈ ಕೇಂದ್ರ ನಡೆಯಲಿ. ಸಂಘ ಉತ್ತುಂಗಕ್ಕೆ ಏರಲಿ ಎಂದು ಆಶಿಸುತ್ತೇನೆ. ಸಿಂಗಧೂರು ಚೌಡೇಶ್ವರಿ ಕೃಷಾ ಕಟಾಕ್ಷ ಎಲ್ಲರ ಮೇಲಿರಲಿ ಎಂದರು.
ಈ ಬಳಿಕ ಮಾತನಾಡಿದಂತ ಶಿವಮೊಗ್ಗದ ಅಡಿಕೆ ಛೇಂಬರ್ಸ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಎಂ.ಎನ್ ಹೆಗ್ಡೆ ಅವರು, ಅಡಿಕೆ ಬೆಳೆಯುತ್ತಿರುವುದು ಶುಭ ಸೂಚನೆಯಾಗಿದೆ. ಗದ್ದೆ ತೆಗೆದು ಅಡಿಕೆ ಬೆಳೆಯುವುದು ಹೆಚ್ಚಾಗಿದೆ. ಅಡಿಕೆಯನ್ನು ರೈತರು ಹೆಚ್ಚು ಹೆಚ್ಚು ಬೆಳೆಯುವಂತೆ ಆಗಲಿ. ಆ ರೈತರಿಗೆ ಈ ದಲ್ಲಾಳಿ ಹಾಗೂ ವ್ಯಾಪಾರ ಕೇಂದ್ರದ ಮೂಲಕ ಉತ್ತಮ ಕೆಲಸವಾಗಲಿ ಎಂದು ಹೇಳಿದರು.
ಸಾಗರದ ಮಾಮ್ ಕೋಸ್ ನಿರ್ದೇಶಕ ದಿನೇಶ್ ಬರದವಳ್ಳಿ ಅವರು ಮಾತನಾಡಿ ಇದು ಖರೀದಿ ಮತ್ತು ಚಟುವಟಿಕೆಯನ್ನು ನಡೆಸುವಂತ ಕೇಂದ್ರವಾಗಿದೆ. ಸಾಗರದ ಅಡಿಕೆ ಬೆಳಾಗರರ ಯಶಸ್ವಿಗೆ ಕಾರಣವಾಗುವಂತ ಕೆಲಸ ಮಾಡಲಿ. ಬೆಳೆಗಾರರಿಗೆ ಶಕ್ತಿ ನೀಡುವ ಕಾರ್ಯ ಮಾಡಲಿ ಎಂದರು.
ಆ ನಂತ್ರ ಮಾತನಾಡಿದಂತ ಆಪ್ಸ್ ಕೋಸ್ ಸಾಗರ ಅಧ್ಯಕ್ಷರಾದಂತ ಇಂದೂಧರ ಗೌಡ ಅವರು, ಮಂಡಿಗಳನ್ನ ಮಾಡುವುದು ದೊಡ್ಡದಲ್ಲ. ಅದನ್ನು ಬೆಳೆಸುವುದು ತುಂಬಾ ಕಷ್ಟ. ಆ ಕೆಲಸ ಮಾಡುವ ನಿಟ್ಟಿನಲ್ಲಿ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರ ಕೇಂದ್ರ ಆರಂಭವಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗಲಿ. ದೊಡ್ಡ ಮಟ್ಟಕ್ಕೆ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರಿ ಕೇಂದ್ರ ಬೆಳೆಯಲಿ ಅಂತ ತಿಳಿಸಿದರು.
ಈ ಆರ್ಯ ಅಡಿಕೆ ಬೆಳಾಗರರು ಮತ್ತು ವ್ಯಾಪಾರಸ್ಥರು ಸಂಘದ ಆಶ್ರಯದಲ್ಲಿ ನೂತನವಾಗಿ ಆರಂಭಗೊಂಡ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಸಾಗರದ ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಿರಂಜನ ಕೋರಿ, ಸಾಗರ ಎಪಿಎಂಸಿ ಹೆಚ್ಚುವರಿ ನಿರ್ದೇಶಕರು ಮತ್ತು ಕಾರ್ಯದರ್ಶಿ ಮಂಜುನಾಥ್.ಬಿ, ಅಡಿಕೆ ದಲ್ಲಾಲರ ಸಂಘದ ಅಧ್ಯಕ್ಷ ಮೋಹನಗೌಡ ಸೇರಿದಂತೆ ಇತರರು ಉಪಸ್ಥಿತರಾಗಿದ್ದರು.
ಇದೇ ಸಂದರ್ಭದಲ್ಲಿ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರಿ ಕೇಂದ್ರದ ವ್ಯವಸ್ಥಾಪಕ ಪಾಲುದಾರ ವಿ.ಸಿ ಶಿವಪ್ಪ ಅವರು ನಿರೂಪಿಸಿದರು. ಈ ವೇಳೆ ಪಾಲುದಾರರಾದಂತ ಬಿಎಂ ಮಂಜಪ್ಪ ಮರಸ, ಪರಮೇಶ್ವರಪ್ಪ ಟಿ, ಶಿವಪ್ಪ ಕಲಸೆ, ರಾಮಪ್ಪ ಕಾಗೋಡು, ರವಿಕುಮಾರ್ ಹೆಚ್.ಆರ್, ವ್ಯವಸ್ಥಾಪಕರಾದಂತ ಮಹೇಶ್.ಕೆ ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
ರಾಜ್ಯದ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ಹೊಸದಾಗಿ ‘254 ನಮ್ಮ ಕ್ಲಿನಿಕ್’ ಆರಂಭ