ಶಿವಮೊಗ್ಗ : ಅಲ್ಪಸಂಖ್ಯಾತ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳು ಇಂಜಿನಿಯರ್, ವೈದ್ಯರು ಅಗಿ ಸಮಾಜದ ಉನ್ನತ ಸ್ಥಾನಕ್ಕೆ ತಲುಪುವ ವಾತಾವರಣ ಸೃಷ್ಟಿಸಿ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಂಬುದಾಗಿ ಕರೆ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗ್ರೀನ್ ಎಂಬೆಸ್ಸಿ ಕಟ್ಟಡದಲ್ಲಿ ಸೋಮವಾರ ಅಂಜುಮನ್ ಎ ಸಾಗರ ಸಂಸ್ಥೆ ವತಿಯಿಂದ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಸರ್ಕಾರ ಅನುದಾನ ಕೊಡುವುದು ಸ್ವಲ್ಪ ವಿಳಂಬವಾಗಬಹುದು. ಆದರೆ ನಿಮ್ಮ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಿರುವವರು ಇಂತಹ ತರಬೇತಿ ಸಂಸ್ಥೆಗಳಿಗೆ ಸಹಕಾರ ನೀಡಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿ ಸಂಸ್ಥೆಗಳು ಶೇ.100ರಷ್ಟು ಫಲಿತಾಂಶ ಪಡೆಯುತ್ತಿರುವುದು ಗಮನಾರ್ಹ ಸಂಗತಿ ಎಂದರು.
ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ಮೊಟಕುಗೊಳಿಸಬೇಡಿ. ನಾನು ಜಾತಿಮತ ಪಂಥ ನೋಡಿ ರಾಜಕೀಯ ಮಾಡುವವನಲ್ಲ. ನನ್ನದು ಮಾನವ ಧರ್ಮಕ್ಕೆ ಆದ್ಯತೆ. ನಿಮ್ಮ ಸಂಸ್ಥೆಗೆ, ಶೈಕ್ಷಣಿಕ ಅಭಿವೃದ್ದಿಗೆ ಬೇಕಾದ ಅಗತ್ಯ ಸಹಕಾರ ನೀಡುತ್ತೇವೆ ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಈ ಬಗ್ಗೆ ಪ್ರತಿಯೊಬ್ಬರು ಗಮನಹರಿಸಿ ಎಂಬುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಮಾತನಾಡಿ, ಅನ್ನದಾನಕ್ಕಿಂತ ಶ್ರೇಷ್ಟದಾನ ವಿದ್ಯಾದಾನವಾಗಿದೆ. ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರದೆ ಹೋದಲ್ಲಿ ನಿಮ್ಮನ್ನು ಮನುಷ್ಯ ಎಂದು ಗುರುತಿಸಲು ಸಾಧ್ಯವಿಲ್ಲ. ವಿದ್ಯೆ ಇಲ್ಲದಿದ್ದರೆ ಮನುಷ್ಯ ಮೂರ್ಖನಾಗುತ್ತಾನೆ ಎಂದು ಧರ್ಮಗ್ರಂಥಗಳು ಹೇಳುತ್ತದೆ. ಸರ್ಕಾರದ ಸಹಕಾರ ಪಡೆಯದೆ ಸುಸಜ್ಜಿತವಾದ ಕಂಪ್ಯೂಟರ್ ತರಬೇತಿ ಕೇಂದ್ರ ಸ್ಥಾಪಿಸಿರುವುದು ಅನುಕರಣೀಯ ಎಂದರು.
ಹಣ ಇದ್ದವರು ರಂಜಾನ್ ತಿಂಗಳಿನಲ್ಲಿ ಮಾತ್ರ ದಾನಧರ್ಮ ಮಾಡದೆ ಇತರೆ ತಿಂಗಳುಗಳಲ್ಲಿಯೂ ಇಂತಹ ಸತ್ಕಾರ್ಯಕ್ಕೆ ಉದಾರ ದೇಣಿಗೆ ನೀಡಬೇಕು ರಾಜ್ಯದಲ್ಲಿ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮುನ್ನಡೆಸುವಲ್ಲಿ ಪೋಷಕರು ಪಾಲಕರು ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಸೈಯದ್ ಇಕ್ಬಾಲ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಕ್ಬೂಲ್ ಸಾಬ್, ಎಸ್.ಎಚ್.ಮಹ್ಮದ್ ಸಾಬ್, ಖಾನ್ ಖಾಲೀದ್, ಅಬ್ದುಲ್ ಜಬ್ಬಾರ್. ಸೈಯದ್ ಜಾಕೀರ್ ಮಹ್ಮದ್ ಖಾಸಿಂ, ನಿಸಾರ್ ಅಹ್ಮದ್ ಸೇರಿದಂತೆ ಇತರರು ಹಾಜರಿದ್ದರು.
ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಹಿತರಕ್ಷಣಾ ಸಮಿತಿ ಭರ್ಜರಿ ತಯಾರಿ: 33 ಅಭ್ಯರ್ಥಿಗಳು ಕಣಕ್ಕೆ
ಸೂರ್ಯನ ಮೇಲೆ ಬೀಳುವಂತೆ ಕಾಣುವ ಸ್ಕೈಡೈವರ್ ಚಿತ್ರ ಸೆರೆಹಿಡಿದ ಖಗೋಳ ಛಾಯಾಗ್ರಾಹಕ: ಪೋಟೋ ವೈರಲ್








