ಶಿವಮೊಗ್ಗ : ಇತ್ತೀಚಿಗೆ ಅಗ್ರಾದಲ್ಲಿ ತರಬೇತಿ ವೇಳೆ ನಿಧನರಾಗಿದ್ದ ಭಾರತೀಯ ವಾಯುಸೇನೆಯ ಪ್ಯಾರಾಜೆಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿ ಮಂಜುನಾಥ್ ಅವರ ಹೊಸನಗರ ತಾಲೂಕು ಸಂಕೂರಿನ ಮನೆಗೆ ಸಚಿವ ಮಧು ಬಂಗಾರಪ್ಪ ಅವರು ತೆರಳಿ ಯೋಧನ ಪತ್ನಿ, ಪೋಷಕರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಮದವರೊಂದಿಗೆ ಸಚಿವ ಎಸ್. ಮಧು ಬಂಗಾರಪ್ಪ ಅವರು ಮಾತನಾಡಿ, ಕುಟುಂಬದ ಪ್ರಮುಖ ಶಕ್ತಿಯಾಗಿದ್ದ ಮಂಜುನಾಥ್ ಅವರ ನಿಧನದಿಂದ ಅವರ ಇಡೀ ಕುಟುಂಬ ವರ್ಗಕ್ಕೆ ಕತ್ತಲು ಅವರಿಸಿದಂತಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಪರವಾಗಿ ನೇರವಾಗುವುದಾಗಿ ತಿಳಿಸಿದ ಅವರು, ದೇಶ ಕಾಯುವ ಪವಿತ್ರ ಕಾರ್ಯದಲ್ಲಿ ಸಕ್ರಿಯವಾಗಿದ್ದ ಮಂಜುನಾಥ್ ಅವರ ಆಕಸ್ಮಿಕ ನಿರ್ಗಮನ ಅತೀವ ದುಃಖ ತಂದಿದೆ. ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.
ಯೋಧ ಮಂಜುನಾಥ್ ಅವರು ಪ್ರಾಥಮಿಕ ವ್ಯಾಸಂಗ ಮಾಡಿದ್ದ ಸಂಕುರಿನ ಶಾಲೆಯ ಸರ್ವಾoಗಿನ ವಿಕಾಸಕ್ಕೆ ಸ್ಥಳೀಯರು ಮನವಿ ಮಾಡಿಕೊಂಡಿದ್ದು, ಅವರ ಕೋರಿಕೆಯಂತೆ ಮುಂದಿನ ಒಂದು 15 ದಿನಗಳೊಳಗಾಗಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.
ಅಲ್ಲದೆ ಸ್ಥಳೀಯರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯೋಧನ ಪುತ್ತಳಿ ಅನಾವರಣಗೊಳಿಸುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಅನುಮತಿಗಾಗಿ ಕೊರಿದ್ದಾರೆ. ಪುತ್ತಳಿಯ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ರಾಜ್ಯದ ಪ್ರತಿ ಮನೆಯಲ್ಲಿಯೂ ಘನ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿದ್ದಾರೆ. ಗೃಹಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ ಯೋಜನೆಯ ಲಾಭ ಪಡೆದುಕೊಂಡು, ನಾಯಕರಿಗೆ ಶುಭ ಹಾರೈಸಿದ್ದಾರೆ ಎಂದ ಅವರು, ಸರ್ಕಾರವು ತಮ್ಮ ಮನೆಯ ಸದಸ್ಯನಂತೆ ಸಹಾಯಕ್ಕೆ ನಿಂತಿದೆ ಎಂದರು.
ಹಸಿದ ಒಡಲಿಗೆ ಅನ್ನ ನೀಡುವ ಅನ್ನಭಾಗ್ಯ, ಮನೆಬೆಳಗುವ ಗೃಹಜ್ಯೋತಿ, ಮಹಿಳೆಯರ ನೆಮ್ಮದಿಯx ಬದುಕಿಗೆ ಗೃಹಲಕ್ಷ್ಮಿ, ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಮತ್ತಿತರ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿವೆ ಎಂದರು.
ಪ್ರಸಕ್ತ ಸಾಲಿನಲ್ಲಿ 500ಕೆ. ಪಿ. ಎಸ್. ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇರುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಸಮರ್ಪಕ ವಿದ್ಯುತ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸಂಭಂದಿಸಿದ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದರು.
ಸ್ಮಾರ್ಟ್ಸಿಟಿ ಯೋಜನೆ ಅನುಸ್ತಾನದಲ್ಲಿ ಹಲವು ನ್ಯೂನತೆಗಳಿದ್ದು, ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಭದ್ರಾವತಿಯಲ್ಲಿ ನಡೆದ ಘಟನೆಗೆ ಸಂಭಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಮಹಿಳೆಯ ಸುರಕ್ಷತೆಗೆ ಸರ್ಕಾರ ಬದ್ದವಾಗಿದ್ದು, ತಪ್ಪೇಸಗಿದವರ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದರು.
BREAKING : ‘ಮುಡಾ’ ಅಕ್ರಮ ಹಗರಣ : ಲೋಕಾಯುಕ್ತ ಎಸ್.ಪಿ ಇಂದ ಐಜಿಪಿಗೆ ಅಂತಿಮ ತನಿಖಾ ವರದಿ ಸಲ್ಲಿಕೆ
ರಾಜ್ಯದ `SSLC’ ವಿದ್ಯಾರ್ಥಿಗಳೇ ಗಮನಿಸಿ : `ಪೂರ್ವ ಸಿದ್ಧತಾ ಪರೀಕ್ಷೆ’ಯ ಸಮಯ ಬದಲಾವಣೆ.!