ಶಿವಮೊಗ್ಗ: ಮದುವೆ ವೈಷ್ಯಮ್ಯದ ಹಿನ್ನಲೆಯಲ್ಲಿ ಮನೆಯೊಂದರ ಕಾಂಪೌಂಡ್ ಒಳಗಡೆ ಗಾಂಜಾ ಎಸೆದು, ಹುಡುಗಿಯ ತಂದೆಯನ್ನು ಗಾಂಜಾ ಕೇಸಲ್ಲಿ ಸಿಕ್ಕಿ ಹಾಕಿಸಲು ಮಾಡಿದಂತ ಪ್ಲಾನ್ ಉಲ್ಟಾ ಆಗಿದೆ. ಈಗ ಯುವತಿಯ ಮನೆಯವರನ್ನು ಗಾಂಜಾ ಕೇಸಲ್ಲಿ ಸಿಕ್ಕಿ ಹಾಕಿಸಲು ಹೋಗಿ, ಮೆಸ್ಕಾಂ ಇಂಜಿನಿಯರ್ ತಾನೇ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿರುವಂತ ಘಟನೆ ಸಾಗರದಲ್ಲಿ ನಡೆದಿದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹುಲ್ಲತ್ತಿ ಗ್ರಾಮದ ಜತೇಂದ್ರ ರವರ ಮನೆಯ ಕಾಂಪೌಂಡ್ ಒಳಭಾಗದಲ್ಲಿ ದಿ:13-07-2024 ರಂದು ರಾತ್ರಿ ಸಮಯದಲ್ಲಿ ಯಾರೋ ಒಬ್ಬ ಅಸಾಮಿಯು ಗಾಂಜಾ ಪ್ಯಾಕೇಟ್ ಗಳನ್ನು ಹಾಕಿದ್ದು, ಈ ಕೃತ್ಯವನ್ನು ಶಾಂತಕುಮಾರ್ ಸ್ವಾಮಿ ಅವರು ಮಾಡಿರಬಹುದೆಂಬ ಅನುಮಾನ ಇರುವುದಾಗಿ ದೂರು ನೀಡಿರುತ್ತಾರೆ ಎಂದಿದೆ.
ಈ ದೂರಿನ ಮೇರೆಗೆ ದಿ: 16-07-2024 ರಂದು ಸಾಗರ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2024 ಕಲಂ 20(ಬಿ) (ii)(ಎ),8(ಸಿ) ರೀತ್ಯಾ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆ ಬಗ್ಗೆ ಮಿಥುನ್ ಕುಮಾರ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮಾರೆಡ್ಡಿ 1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ 2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅವರ ಮಾರ್ಗದರ್ಶದಲ್ಲಿ ಗೋಪಾಲಕೃಷ್ಣ ನಾಯ್ಕ ಟಿ. ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಸಾರಥ್ಯದಲ್ಲಿ ವಿಶೇಷ ತಂಡವನ್ನು ರಚಿಸಿರುತ್ತಾರೆ ಎಂದು ಹೇಳಿದೆ.
ಆ ವಿಶೇಷ ತಂಡದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಮಹಾಬಲೇಶ್ವರ ಎಸ್.ಎನ್, ಪಿಎಸ್‌ಐ ಸಿದ್ದರಾಮಪ್ಪ ಹೆಚ್ ಹಾಗೂ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಸಿಹೆಚ್ 299 ಷೇಖ್ ಫೈರೋಜ್ ಅಹಮದ್ ಸಿಪಿಸಿ 1361 ರವಿಕುಮಾರ್, ಸಿಪಿಸಿ 1282 ಗುರುಬಸವರಾಜ್, ಜೀಪ್ ಚಾಲಕರಾದ ಎ.ಹೆಚ್.ಸಿ 124 ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ಸಿಬ್ಬಂಧಿಗಳಾದ ಗುರುರಾಜ, ಇಂದ್ರೇಶ್ ಮತ್ತು ವಿಜಯ್ ಕುಮಾರ್ ಈ ಪ್ರಕರಣದ ಜಾಡನ್ನು ಪತ್ತೆ ಹಚ್ಚಿರುತ್ತಾರೆ ಎಂದು ತಿಳಿಸಿದೆ.
ಈ ಪ್ರಕರಣದ ಪ್ರಮುಖ ಆರೋಪಿಯಾದ ಶಾಂತಕುಮಾರ್ ತಂದೆ ಲೇಟ್ ಗುರುಸ್ವಾಮಿ, 33 ವರ್ಷ, ಜಂಗಮ ಜಾತಿ, ಆನಂದಪುರ ಮೆಸ್ಕಾಂ ಇಲಾಖೆಯಲ್ಲಿ ಇಂಜಿನಿಯರ್ ವೃತ್ತಿ, ವಾಸ ಬೈರಾಪುರ ಗ್ರಾಮ, ಶಿಕಾರಿಪುರ ತಾಲ್ಲೂಕ್ ಹಾಗೂ ಸನಾವುಲ್ಲಾ @ ಸನಾ ತಂದೆ ದಾದೂಸಾಬ್, 48 ವರ್ಷ, ಲಗೇಜ್ ಆಟೋ ಚಾಲಕ, ವಾಸ ಅಣಲೆಕೊಪ್ಪ ಶಿರುವಾಳ ರಸ್ತೆ, ಸಾಗರ ಟೌನ್ ಅವರನ್ನು ದಿ: 26-07-2024 ರಂದು ವಶಕ್ಕೆ ಪಡೆದು ದಸ್ತಗಿರಿ ಮಾಡಿರುತ್ತದೆ ಎಂದು ಹೇಳಿದೆ.
ಎ.1 ಆರೋಪಿತನಾದ ಶಾಂತಕುಮಾರ್ ಮೇಲೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಸಿಆರ್ ನಂ 194/2023 ಕಲಂ 354,354(ಡಿ), 509, 465 ಐಪಿಸಿ, ಸಾಗರ ಪೇಟೆ ಠಾಣೆಯಲ್ಲಿ ಸಿಆರ್ ನಂ 110/2023 ಕಲಂ 323,354(ಬಿ),504,506 ಐಪಿಸಿ, ರೀತ್ಯಾ ದೂರು ದಾಖಲಾಗಿರುತ್ತದೆ ಎಂದು ತಿಳಿಸಿದೆ.
ಈ ಆರೋಪಿತಗಳಿಂದ ಕೃತ್ಯಕ್ಕೆ ಬಳಸಿದ ಕೆಎ 18 ಎಂ 8303 ರ ಮಾರುತಿ 800 ಕಾರ್, ಒಂದು ವಿವೋ ಕಂಪನಿಯ ಮೊಬೈಲ್ ಫೋನ್, ಒಂದು ಪೆನ್ ಡ್ರೈವ್ ಅಮಾನತ್ತುಪಡಿಸಿಕೊಂಡು ಆರೋಪಿತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ ಎಂದಿದ್ದಾರೆ. ಈ ಮೂಲಕ ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಅವರು ಜೈಲುಪಾಲಾಗಿದ್ದಾರೆ.
BREAKING: ದೆಹಲಿ ಕೋಚಿಂಗ್ ಸೆಂಟರ್ ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಲೆಫ್ಟಿನೆಂಟ್ ಗವರ್ನರ್