ಶಿವಮೊಗ್ಗ: ವ್ಯಕ್ತಿಯೊಬ್ಬರಿಂದ 2000 ಲಂಚ ಸ್ವೀಕರಿಸುತ್ತಿದ್ದಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಲೋಕಾಯುಕ್ತದಿಂದ ಮಾಹಿತಿ ಹಂಚಿಕೊಂಡಿದ್ದು, ಪತ್ರಿಕಾ ಪ್ರಕಟಣೆ ಪಿರಾದುದಾರರಾದ ಅಸೀಬ್ ಚಿನ್ ಬಸೀರ್, 32 ವರ್ಷ ವಾಸ ಎಸ್.ಎನ್ ನಗರ, ಸಾಗರ ಟೌನ್ ರವರ ಸ್ನೇಹಿತರಾದ ತೋಹಿದ್ ಅಬ್ದುಲ್ ರವರಿಗೆ ಸೇರಿದ ಸಾಗರ ತಾಲ್ಲೂಕ್ ಕಸಬಾ ಹೋಬಳ ಬಳಸಗೋಡು ಗ್ರಾಮದ ಜಮೀನಿನ ಆರ್.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಗರ ತಾಲ್ಲೂಕ್ ಕಛೇರಿಯ ಭೂಮಿ ಕೇಂದ್ರಕ್ಕೆ ಹೋಗಿ 1999 ರಿಂದ 2001 ರ ವರೆಗೆ ಕೈ ಬರಹದ ಪಹಣಿಯನ್ನು ತೆಗೆಸಿಕೊಂಡು ಬರಲು ಪಿಕ್ಯಾದಿಗೆ ತಿಳಿಸಿದ್ದರಿಂದ ವಿದ್ಯಾದಿ ಅವರ ಸ್ನೇಹಿತರಾದ ನವೀನ.ಜೆ ರವರೊಂದಿಗೆ ದಿನಾಂಕ: 05/06/2024 ರಂದು ಸಾಗರ ತಾಲ್ಲೂಕ್ ಕಛೇರಿಯ ದಾಖಲಾತಿ ವಿಭಾಗಕ್ಕೆ ಹೋಗಿ ದಾಖಲಾತಿಗಳನ್ನು ನೀಡಲು ಅರ್ಜಿಯನ್ನು ಸಲ್ಲಿಸಿರುತ್ತಾರೆ ಎಂದು ತಿಳಿಸಿದೆ.
ಅಟೆಂಡರ್ ಬಸವರಾಜ್ ಎಲ್ಲಾ ದಾಖಲಾತಿಗಳನ್ನು ಜೆರಾಕ್ಸ್ ಮಾಡಿಸಬೇಕು. ಚಲನ್ ಕಟ್ಟಬೇಕು ಖರ್ಚು ಇದೆ ಎಂದು ಪಿರಾದಿಯಿಂದ ಒಟ್ಟು 1500/- ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಅದೇ ದಿವಸ ಮದ್ಯಾಹ್ನ 1,500/-ಗಳನ್ನು ಪಿರಾದಿಯಿಂದ ಲಂಚದ ಹಣವನ್ನು ಪಡೆದಿರುತ್ತಾರೆ. ಮನಃ ಅಟೆಂಡರ್ ಬಸವರಾಜ್ ಪಿಲ್ಯಾದಿ ಬಳಿ ನೀನು ಕೊಟ್ಟದ್ದು ಶೀರಸ್ತೇದಾರರಿಗೆ ಕೊಟ್ಟು ಪಹಣಿಗೆ ಸಹಿ ಮಾಡಿಸ್ತೀನಿ ನನಗೆ ನೀನು 2000/- ರೂಗಳನ್ನು ಕೊಡಬೇಕು ಅಂತ ಮತ್ತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆಂದು. ಸದರಿ ಎರಡೂ ಘಟನೆಗಳನ್ನು ಪಿದ್ಯಾದಿ ಸ್ನೇಹಿತ ನವೀನ್ ಜೆ ರವರು ಅವರ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಸದರಿ ಸಾಗರ ತಾಲ್ಲೂಕ್ ಕಛೇರಿಯ ದಾಖಲಾತಿ ವಿಭಾಗದ ಅಟೆಂಡರ್ ಬಸವರಾಜ್ ರವರ ವಿರುದ್ಧ ಈ ದಿವಸ ದಿನಾಂಕ:06/06/2024 ರಂದು ಪ್ರಕರಣ ದಾಖಲಾಗಿರುತ್ತದೆ ಎಂದು ಹೇಳಿದೆ.
ಅದರಂತೆ ಈ ದಿವಸ ದಿನಾಂಕ:-06/06/2024 ರಂದು ಸಂಜೆ 4 ಗಂಟೆಗೆ ಅಪಾದಿತ ಬಸವರಾಜ್ ಜಿ ಬಿನ್ ಲೇಟ್ ಗುತ್ಯಪ್ಪ 57 ವರ್ಷ, ಅಟೆಂಡರ್, ಆರ್.ಆರ್.ಟಿ ಶಾಖೆ, ದಾಖಲಾತಿ ವಿಭಾಗ, ಸಾಗರ ತಾಲ್ಲೂಕ್ ಕಛೇರಿ, ಸಾಗರ ಇವರು ಅವರ ಕಛೇರಿಯಲ್ಲಿ ಪಿರಾದುದಾರರಿಂದ ಲಂಚದ ಹಣ ರೂ 2000/- ಪಡೆದಿರುತ್ತಾರೆ ಈ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ ಎಂದು ತಿಳಿಸಿದೆ.
ಅಪಾದಿತರನ್ನು ಬಂದಿಸಿ ಮುಂದಿನ ತನಿಖೆಯನ್ನು ಹೆಚ್.ಎಸ್ ಸುರೇಶ್ ಪೊಲೀಸ್ ನಿರೀಕ್ಷಕರು, ಕ.ಲೋ ಶಿವಮೊಗ್ಗ ಇವರು ಕೈಗೊಂಡಿದ್ದು ಇರುತ್ತದೆ. ಕರ್ನಾಟಕ ಲೋಕಾಯುಕ್ತ ಶಿವಮೊಗ್ಗದ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್. ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಅಸಿ ಅಪಾದಿತನನ್ನು ಬಂದಿಸಲಾಗಿರುತ್ತದೆ ಎಂದು ಹೇಳಿದೆ.
ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಅಧಿಕಾರಿಗಳಾದ ಉಮೇಶ್ ಈಶ್ವರ ನಾಯ್ಕ ಪೊಲೀಸ್ ಉಪಾಧೀಕ್ಷಕರು, ಕಲೋ ಶಿವಮೊಗ್ಗ. ಸಿಬ್ಬಂದಿಗಳಾದ ಯೋಗೇಶ್ ಸಿ.ಹೆಚ್.ಸಿ, ಸುರೇಂದ್ರ ಹೆಚ್.ಜಿ .ಸಿ.ಹೆಚ್.ಸಿ, ಬಿ.ಐ ಚನ್ನೇಶ, ಸಿ.ಪಿ.ಸಿ ರಘುನಾಯ್ಕ ಸಿ.ಪಿ.ಸಿ, ಪುಟ್ಟಮ್ಮ ಮ.ಪಿ.ಸಿ ಗಂಗಾಧರ ಎ.ಪಿ.ಸಿ ಪ್ರದೀಪ್ ಎ.ಪಿ.ಸಿ, ಜಯಂತ್ ಎ.ಪಿ.ಸಿ ಇವರುಗಳು ಹಾಜರಿದ್ದರು ಎಂದು ತಿಳಿಸಿದೆ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ: ಎಂ.ಕೆ ವಿಶಾಲಾಕ್ಷಿ ಮಾಹಿತಿ
CISF ಮಹಿಳಾ ಪೇದೆ ‘ನಟಿ ಕಂಗನಾ ರಣಾವತ್’ಗೆ ‘ಕಪಾಳಮೋಕ್ಷ’ ಮಾಡಿದ್ದು ಯಾಕೆ ಗಾತ್ತಾ? | Kangana Ranaut Slapped