ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಉಳವಿಯಲ್ಲಿ ನಾಳೆ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಸೊರಬ, ವಕೀಲರ ಸಂಘ ಸೊರಬ, ತಾಲೂಕು ಪಂಚಾಯ್ತಿ ಸೊರಬ, ಗ್ರಾಮ ಪಂಚಾಯ್ತಿ ಉಳವಿ ಇವರ ಸಂಯುಕ್ತ ಆಶ್ರಯದಲ್ಲಿ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಳೆ ಬೆಳಿಗ್ಗೆ 9 ಗಂಟೆಗೆ ಉಳವಿಯ ಅಂಬೇಡ್ಕರ್ ಸಭಾಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪ್ರಭಾಕರ ರಾವ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಅಧ್ಯಕ್ಷರು, ತಾಲೂಕು ಕಾನೂನು ಸೇವಾ ಸಮಿತಿ, ಸೊರಬ ಇವರು ನೆರವೇರಿಸಲಿದ್ದಾರೆ.
ಇನ್ನೂ ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಉಪಾಧ್ಯೆ, ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ, ಸೊರಬ ಭಾಗಿಯಾಗಲಿದ್ದಾರೆ. ಅಲ್ಲದೇ ಸೊರಬ ವಕೀಲ ಸಂಘದ ಅಧ್ಯಕ್ಷರಾದಂತ ಅಶೋಕ್ ಸಿ.ವೈ, ಕಾರ್ಯದರ್ಶಿ ಅರುಣ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದಂತ ಪ್ರದೀಪ್ ಕುಮಾರ್ ಕೂಡ ಉಪಸ್ಥಿತರಾಗಿ ಇರಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳವಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ ಸರಸ್ವತಿ ವಹಿಸಿಕೊಳ್ಳಲಿದ್ದಾರೆ. ಪಿಡಿಒ ರವೀಚಂದ್ರ, ಉಳವಿಯ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
BREAKING : ಅಮೆರಿಕದಲ್ಲಿ ಕಳೆದ 2 ವಾರಗಳಲ್ಲಿ ಭಾರತ ಮೂಲದ ಐವರು ಯುವಕರ ಸಾವು : ಕೇಂದ್ರ ಸರ್ಕಾರ ಕಳವಳ
BREAKING : ‘UPSC ESE ಪರೀಕ್ಷೆ’ಗೆ ದಿನಾಂಕ ಪ್ರಕಟ : ಇಲ್ಲಿದೆ, ಡಿಟೈಲ್ಸ್