ಶಿವಮೊಗ್ಗ : ಅಧಿಕಾರಿಗಳು ಜಾತಿ ಗಣತಿಗೆ ಬಂದಾಗ ಜಿಲ್ಲೆಯ ಈಡಿಗ ಕುಲ ಬಾಂಧವರು ಜಾತಿ ಕಾಲಂನಲ್ಲಿ ಈಡಿಗ ಎಂದು ಉಪ ಜಾತಿ ಕಾಲಂನಲ್ಲಿ ದೀವರು ಎಂದು ನಮೂದಿಸುವಂತೆ ಸಾಗರದ ಈಡಿಗ ಸಮಾಜದ ಮುಖಂಡ ಆನಂದ ಜನ್ನೆಹಕ್ಲು ಮನವಿ ಮಾಡಿದ್ದಾರೆ.
ನಮ್ಮ ಹಿರಿಯರು ಶೈಕ್ಷಣಿಕ ಸೇರಿದಂತೆ ಅಗತ್ಯ ಮಾಹಿತಿ ನೀಡುವ ಸಂದರ್ಭದಲ್ಲಿ ಈಡಿಗ ಜಾತಿ ಎಂದು ನಮೂದಿಸಿರುತ್ತಾರೆ. ಅದನ್ನು ನಮ್ಮ ಪೀಳಿಗೆಯವರು ಮುಂದುವರೆಸಿಕೊಂಡು ಹೋಗಬೇಕು. ಈಡಿಗ ಬದಲು ದೀವರು ಇನ್ನಿತ್ಯಾದಿ ಜಾತಿ ನಮೂದಿಸಿದರೆ ಮುಂದೆ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ತೊಡಕುಂಟಾಗಬಹುದು.
ಈ ಹಿನ್ನೆಲೆಯಲ್ಲಿ ಜಾತಿಗಣತಿಗೆ ಬಂದಾಗ ಕಡ್ಡಾಯವಾಗಿ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಈಡಿಗ ಎಂದೂ, ಉಪ ಜಾತಿ ಕಾಲಂನಲ್ಲಿ ದೀವರೆಂದು ನಮೂದಿಸಲು ತಮ್ಮಲ್ಲಿ ಸಮಾಜದ ಪ್ರಮುಖರ ಪರವಾಗಿ ವಿನಂತಿ ಮಾಡಿತ್ತಿದ್ದೇನೆ ಎಂದು ಆನಂದ್ ಜನ್ನೆಹಕ್ಲು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಜಾತಿ ಗಣತಿ ಮುಂದಕ್ಕೆ ಹಾಕಿ ಇಲ್ಲವೇ ವಿಸ್ತರಿಸಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
19 ವರ್ಷದ ಯುವಕನನ್ನು ಮದುವೆಯಾದ 19 ವರ್ಷದ ಯುವತಿ ವಿರುದ್ಧ ಕೇಸ್ ದಾಖಲು