ಶಿವಮೊಗ್ಗ: 2023-24ನೇ ಸಾಲಿನ ಪ್ರಥಮ ಸೆಮಿಸ್ಟರ್ ಬಿಇಡಿ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯುವುದಕ್ಕೆ ಕುವೆಂಪು ವಿಶ್ವವಿದ್ಯಾಲಯವು ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿದು ಬಂದಿದೆ.
NCTEಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಉಳ್ಳೂರಿನಲ್ಲಿರುವಂತ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ದಿನಾಂಕ 14-12-2023ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ಸಂಯೋಜನೆಯನ್ನು ಮುಂದಿನ ಆದೇಶದವರೆಗೂ ರದ್ದುಪಡಿಸಲಾಗಿದೆ ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಇದಷ್ಟೇ ಅಲ್ಲದೇ 2023-24ನೇ ಸಾಲಿನಿಂದ ಬಿ.ಎಡ್ ಗೆ ಹೊಸ ದಾಖಲಾತಿಗಳನ್ನು ಮಾಡಿಕೊಳ್ಳಲು ಅವಕಾಶವಿಲ್ಲ. ಕುವೆಂಪು ವಿವಿಯ ಅಭಿವೃದ್ಧಿ ಪರಿಷತ್ ಕಾರ್ಯಾಲಯವು 2023-24ನೇ ಸಾಲಿನ ಸಂಯೋಜನೆಯನ್ನು ಹಿಂಪಡೆಯಲಾಗಿದೆ ಎಂಬುದಾಗಿಯೂ ಸ್ಪಷ್ಟವಾಗಿ ತಿಳಿಸಿತ್ತು.
ಆದರೇ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿಯು ಈ ವಿಷಯವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಸಾಗರ ಗಂಗೋತ್ರಿಯ ಮನವಿಯನ್ನು ಪುರಸ್ಕರಿಸಿ, ಎನ್ ಸಿ ಟಿ ಇಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ದಿನಾಂಕ 06-02-2024ರಂದು ಸೂಚಿಸಿತ್ತು.
NCTEಯ ಅಫೀಲ್ ಕಮಿಟಿ ಹಾಗೂ ಪ್ರಾದೇಶಿಕ ಸಮಿತಿಯು ಚರ್ಚಿಸಿ, ಕರ್ನಾಟಕ ಹೈಕೋರ್ಟ್ ಆದೇಶವನ್ನು ಪುರಸ್ಕರಿಸಿತ್ತು. ಅಲ್ಲದೇ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿತ್ತು. ಆದರೇ ಸೂಕ್ತ ದಾಖಲೆಗಳನ್ನು ಆಡಳಿತ ಮಂಡಳಿ ಸಲ್ಲಿಸದ ಕಾರಣ, ಮಾನ್ಯತೆ ನೀಡಲು ನಿರಾಕರಿಸಿತ್ತು.
ಹೀಗಾಗಿ ಮತ್ತೆ ಮತ್ತೆ ಕರ್ನಾಟಕ ಹೈಕೋರ್ಟ್ ಗೆ ಸಾಗರ ಗಂಗೋತ್ರಿ ಶಿಕ್ಷಣ ಮಹಾ ವಿದ್ಯಾಲಯದ ಆಡಳಿತ ಮಂಡಳಿಯು ಮೇಲ್ಮನವಿಯನ್ನು ಸಲ್ಲಿಸಿತ್ತು. ದಿನಾಂಕ 08-08-2024ರಂದು ಹೈಕೋರ್ಟ್ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಅದರಲ್ಲಿ 2023-24ನೇ ಸಾಲಿನ ಸಾಗರ ಗಂಗೋತ್ರಿ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಹಾಗೂ ಪ್ರಥಮ ಸೆಮಿಸ್ಟರ್ ಬಿಎಡ್ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮಧ್ಯಂತ ಆದೇಶವನ್ನು ಮಾಡಿತ್ತು. ಅಲ್ಲೇ ಮುಂದಿನ ಅಂತಿಮ ಆದೇಶಕ್ಕೆ ಒಳಪಡುವ ಷರತ್ತು ವಿಧಿಸಿತ್ತು.
ಕೋರ್ಟ್ ಆದೇಶದ ಕಾರಣ ಕುವೆಂಪು ವಿವಿಯಿಂದ ಮೊದಲ ಸೆಮಿಸ್ಟರ್ ಬಿಎಡ್ ಪರೀಕ್ಷೆಗೆ ಅವಕಾಶ ನೀಡುಲಾಗುತ್ತಿದೆ. ಅಲ್ಲದೇ ಆಗಸ್ಟ್.16ರಿಂದ ಆರಂಭಗೊಳ್ಳುತ್ತಿರುವಂತ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡುತ್ತಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಕುವೆಂಪು ವಿವಿಯ ರಿಜಿಸ್ಟರ್ ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವರನ್ನು ಅವರನ್ನು ಕನ್ನಡ ನ್ಯೂಸ್ ನೌ ಸಂಪರ್ಕಿಸಿತು. ಅವರು ಹೈಕೋರ್ಟ್ ಆದೇಶವಿದೆ. ಅದರಂತೆ ಕುವೆಂಪು ವಿಶ್ವವಿದ್ಯಾಲಯದಿಂದ ಸಾಗರ ಗಂಗೋತ್ರಿ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸೆಮಿಸ್ಟರ್ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಡುತ್ತಿರುವುದಾಗಿ ಮೌಖಿಕವಾಗಿ ಸ್ಪಷ್ಟ ಪಡಿಸಿದ್ದಾರೆ.
ಸದ್ಯಕ್ಕೆ ತಾತ್ಕಾಲಿಕವಾಗಿ ಸಾಗರ ಗಂಗೋತ್ರಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳಿಗೆ, ಆಡಳಿತ ಮಂಡಳಿಗೆ ರಿಲೀಫ್ ಸಿಕ್ಕಂತೆ ಆಗಿದೆ. ಆದರೇ ಪರೀಕ್ಷೆಯನ್ನು ಬರೆದಂತ ವಿದ್ಯಾರ್ಥಿಗಳ ಫಲಿತಾಂಶವನ್ನು ಕುವೆಂಪು ವಿವಿ ಪ್ರಕಟಿಸುತ್ತೋ ಇಲ್ಲವೋ ಗೊತ್ತಿಲ್ಲ. ಕಾರಣ ಹೈಕೋರ್ಟ್ ಸೂಚನೆ ಪರೀಕ್ಷೆಗೆ ಪೀಸ್ ಕಟ್ಟಿಸಿಕೊಂಡು, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಮಾತ್ರವೇ ಸೂಚಿಸಲಾಗಿದೆ. ಇದರ ನಡುವೆ ಇನ್ನುಳಿದಂತ ಸಾಗರ ಗಂಗೋತ್ರಿ ಶಿಕ್ಷಣ ಮಹಾ ವಿದ್ಯಾಲಯದ ಬಿಎಡ್ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್ ಪರೀಕ್ಷೆಗಳಿಗೆ ಅವಕಾಶ ನೀಡುತ್ತೋ ಇಲ್ಲವೋ ಎಂಬ ಡೋಲಾಯಮಾನ ಸ್ಥಿತಿಯಂತೂ ಮುಂದುವರೆದಿದೆ.
ಇನ್ನೂ ಒಂದಂತೂ ಸತ್ಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯವು NCTEಯಿಂದ ಮಾನ್ಯತೆಯನ್ನು ಪಡೆದಿಲ್ಲ. ಕುವೆಂಪು ವಿಶ್ವವಿದ್ಯಾಲಯದಿಂದ ಸಂಯೋಜನೆಯನ್ನು ನೀಡಲಾಗಿಲ್ಲ. ಇದು ದೊರೆತಾಗ ಮಾತ್ರವೇ 2023-24ನೇ ಸಾಲಿಗೆ ಬಿಎಡ್ ವ್ಯಾಸಂಗಕ್ಕೆ ದಾಖಲಾಗಿರುವಂತ ವಿದ್ಯಾರ್ಥಿಗಳು ನಿರಾಳವಾಗುವಂತೆ ಆಗಲಿದೆ. ಇಲ್ಲವಾದಲ್ಲಿ ಮುಂದೆಯೂ ಅತಂತ್ರ ಸ್ಥಿತಿಯಂತೂ ಮುಂದುವರೆಯೋದು ಗ್ಯಾರಂಟಿ.
ವರದಿ: ಉಮೇಶ್ ಮೊಗವೀರ, ಸಾಗರ
BREAKING: BJP ಹಿರಿಯ ನಾಯಕ, ಮಾಜಿ ಶಾಸಕ ಎ.ಎಸ್ ಬಸವರಾಜು ವಿಧಿವಶ | A.S Basavaraju No More
GOOD NEWS : 545 ‘PSI’ ಅಭ್ಯರ್ಥಿಗಳಿಗೆ ಶೀಘ್ರ ನೇಮಕಾತಿ ಆದೇಶ ಪತ್ರ ವಿತರಣೆ : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ