Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : `8ನೇ ವೇತನ ಆಯೋಗ’ದ ವೇತನ ಹೆಚ್ಚಳದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

05/02/2026 12:12 PM

ಬೆಳಗಾವಿ : ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಪತಿ!

05/02/2026 12:09 PM

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ : ಕಾರಿನ ಮಿರರ್ ಮುರಿದು ಬೈಕ್ ಸವಾರ ಅಸಭ್ಯ ವರ್ತನೆ

05/02/2026 12:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಉಳ್ಳೂರಲ್ಲಿ KSRTC ಬಸ್ ನಿಲ್ಲಿಸುವಂತೆ ‘ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ’ ಮನವಿ
KARNATAKA

ಶಿವಮೊಗ್ಗ: ಉಳ್ಳೂರಲ್ಲಿ KSRTC ಬಸ್ ನಿಲ್ಲಿಸುವಂತೆ ‘ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ’ ಮನವಿ

By kannadanewsnow0918/09/2025 8:50 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮದಲ್ಲಿ ಸ್ಥಳೀಯವಾಗಿ ಸಾಗರ ಡಿಪೋ ವ್ಯಾಪ್ತಿಯಿಂದ ಹೊರಡುವ ಸರ್ಕಾರಿ ಬಸ್‌ಗಳನ್ನು ನಿಲ್ಲಿಸುವಂತೆ ಕೋರಿ ಸಾಗರದ ಡಿಪೋ ಮ್ಯಾನೇಜರ್ ಗೆ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ಅಧ್ಯಕ್ಷ ವಸೀಮ್ ಉಳ್ಳೂರು ಅವರು ಮನವಿ ಸಲ್ಲಿಸಿದರು.

ಈ ಸಂಬಂಧ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕೆ ಎಸ್ ಆರ್ ಟಿ ಸಿ ಡಿಪೋಗೆ ತೆರಳಿದಂತ ಅವರು, ಡಿಪೋ ಮ್ಯಾನೇಜರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ಸಾಗರ ಸಮೀಪದ ಉಳ್ಳೂರಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲುಗಡೆ ನೀಡುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.

ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ಮನವಿ ಏನು?

ಸಾಗರ ತಾಲ್ಲೂಕು ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಗ್ರಾಮವು ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದು ಈ ವ್ಯಾಪ್ತಿಯಲ್ಲಿ ಸುಮಾರು 700 ರಿಂದ 800 ಕುಟುಂಬಗಳು ವಾಸಿಸುತ್ತಿದ್ದು, ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರು, ರೈತಾಪಿ ವರ್ಗದವರು, ಮಹಿಳೆಯರು ವೃದ್ಧರು ಆಸ್ಪತ್ರೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ ಮಕ್ಕಳು ವಿದ್ಯಾಭ್ಯಾಸ ಸಲುವಾಗಿ ನಗರ ಪ್ರದೇಶಕ್ಕೆ ಸ್ಥಳೀಯವಾಗಿ ಮತ್ತು ಶಿವಮೊಗ್ಗ ಮಾರ್ಗವಾಗಿ ಚಲಿಸುವ ಸರ್ಕಾರಿ ಬಸ್ ಮುಖಾಂತರವಾಗಿಯೇ ತೆರಳುತ್ತಿದ್ದಾರೆ. ಆದರೆ ಸಾಗರದಿಂದ ಶಿವಮೊಗ್ಗ ಮತ್ತು ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಚಲಿಸುವ ಸರ್ಕಾರಿ ಬಸ್‌ಗಳು ಉಳ್ಳೂರು ಗ್ರಾಮದ ಕೆರೆಯ ಹತ್ತಿರ ಇರುವ ಬಸ್ ಸ್ಯಾಂಡ್ ನಲ್ಲಿ ಏರಿ ಹಾಗೂ ತಿರುವು ಇದೇ ಎಂಬ ಕಾರಣದಿಂದ ಸ್ಥಳೀಯ ಬಸ್ ಮತ್ತು ಮುಂಭಾಗ ಸರ್ಕಾರಿ ಬಸ್‌ಗಳು ನಿಲ್ಲಿಸದೇ, ಉಳ್ಳೂರು ಗ್ರಾಮದಿಂದ ದೂರವಿರುವ ಸಿಗಂಧೂರೇಶ್ವರಿ ಕಾಲೇಜ್ ನಿಲ್ಲಿಸುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ.

ಹೀಗೆ ಉಳ್ಳೂರು ಬಿಟ್ಟು, ಬೇರೆಡೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ಲಿಸುತ್ತಿರುವುದರಿಂದ ವೃದ್ದರು ಗರ್ಭಿಣಿಯರು ಹಾಗೂ ಮಹಿಳೆಯರು ಸಾರ್ವಜನಿಕರು ಸಿಗಂಧೂರೇಶ್ವರಿ ಕಾಲೇಜು ಬಳಿ ನಿಂತು ಬಸ್ ಹತ್ತುವುದು ಅಸಾಧ್ಯವಾಗಿದೆ. ಹೀಗಾಗಿ ಸರ್ಕಾರಿ ಬಸ್‌ಗಳನ್ನು ಉಳ್ಳೂರು ಗ್ರಾಮ ಬಿ.ಎಸ್.ಎನ್.ಎಲ್. ಕಛೇರಿ ಮುಂಭಾಗದಲ್ಲಿ ನಿಲ್ಲಿಸುವಂತೆ ಮನವಿ ಮಾಡಲಾಗಿದೆ. ಹೀಗೆ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ. ಈ ಹಿಂದೆ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‌ಗಳು ಈ ಸ್ಥಳದಲ್ಲಿ ನಿಲ್ಲಿಸುತ್ತಿದ್ದು, ಸಾರ್ವಜನಿಕರು ತೊಂದರೆ ಇಲ್ಲದೇ ನಗರ ಪ್ರದೇಶಗಳಿಗೆ ತೆರಳುತ್ತಿದ್ದರು ಎಂಬುದಾಗಿ ಮನವಿ ಪತ್ರದಲ್ಲಿ ಮನವರಿಕೆ ಮಾಡಿಕೊಡಲಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮದ ಬಿ.ಎಸ್.ಎನ್.ಎಲ್, ಕಛೇರಿ ಮುಂಭಾಗದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲುಗಡೆ ಮಾಡುವಂತೆ ಸಾಗರದ ಘಟಕ ವ್ಯವಸ್ಥಾಪಕರಿಗೆ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯ ಅಧ್ಯಕ್ಷ ವಸೀಮ್ ಉಳ್ಳೂರು ಮನವಿ ಮಾಡಿದ್ದಾರೆ.

ಈ ವೇಳೆಯಲ್ಲಿ ಶಿವಕುಮಾರ್ ಉಳ್ಳೂರು, ಇಂಮ್ತಿಯಾಜ್ ಹಾಜರಿದ್ದರು.

ಉಳ್ಳೂರು ಗ್ರಾಮ ಪಂಚಾಯ್ತಿಯಿಂದಲೂ ಈ ಹಿಂದೆ ಮನವಿ

ಅಂದಹಾಗೇ ಇಂದು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯಿಂದ ಉಳ್ಳೂರಲ್ಲಿ ಕೆ ಎಸ್ ಆರ್ ಟಿಸಿ ಬಸ್ ನಿಲ್ಲಿಸುವಂತೆ ಮನವಿ ಮಾಡಿದ್ದರೇ, ಇದಕ್ಕೂ ಮೊದಲೇ ಕಳೆದ ಫೆಬ್ರವರಿಯಲ್ಲೇ ಉಳ್ಳೂರು ಗ್ರಾಮ ಪಂಚಾಯ್ತಿಯಿಂದಲೂ ಸಾಗರದ ಕೆ ಎಸ್ ಆರ್ ಟಿ ಸಿ ಘಟಕ ವ್ಯವಸ್ಥಾಪಕರಿಗೆ ಇದೇ ಮನವಿ ಮಾಡಲಾಗಿತ್ತು. ಆದರೇ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಹೀಗಾಗಿ ಕೂಡಲೇ ಈ ಬಗ್ಗೆ ಸಾಗರದ ಕೆ ಎಸ್ ಆರ್ ಟಿ ಸಿ ಘಟಕ ವ್ಯವಸ್ಥಾಪಕರು ಸಿಗಂದೂರು ಶಾಲೆಯ ಬದಲಾಗಿ ಉಳ್ಳೂರಲ್ಲಿ ಬಸ್ ನಿಲುಗಡೆ ಮಾಡುವಂತೆ ಉಳ್ಳೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಇದನ್ನು ಜರೂರಾಗಿ ಮಾಡದಿದ್ದರೇ ಕೆ ಎಸ್ ಆರ್ ಟಿ ಸಿ ಡಿಪೋ ಬಳಿಯಲ್ಲಿ ಹೋರಾಟ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ಒಂದು ಬಾರಿಗೆ ವಯೋಮಿತಿ 2 ವರ್ಷ ಸಡಿಲಿಸಿ ರಾಜ್ಯ ಸರ್ಕಾರ ಆದೇಶ

BREAKING: ಅತ್ಯಾಚಾರ ಪ್ರಕರಣದಲ್ಲಿ ಲಲಿತ್ ಮೋದಿ ಸಹೋದರ ಸಮೀರ್ ಮೋದಿ ಅರೆಸ್ಟ್ | Samir Modi Arrest

Share. Facebook Twitter LinkedIn WhatsApp Email

Related Posts

ಬೆಳಗಾವಿ : ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಪತಿ!

05/02/2026 12:09 PM1 Min Read

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ : ಕಾರಿನ ಮಿರರ್ ಮುರಿದು ಬೈಕ್ ಸವಾರ ಅಸಭ್ಯ ವರ್ತನೆ

05/02/2026 12:07 PM1 Min Read

Chicken Prices: ಚಿಕನ್ ಪ್ರಿಯರಿಗೆ ಸಿಹಿಸುದ್ದಿ : ಕೋಳಿ ಮಾಂಸದ ಬೆಲೆ ಇದ್ದಕ್ಕಿದ್ದಂತೆ ಕುಸಿತ

05/02/2026 12:07 PM2 Mins Read
Recent News

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : `8ನೇ ವೇತನ ಆಯೋಗ’ದ ವೇತನ ಹೆಚ್ಚಳದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

05/02/2026 12:12 PM

ಬೆಳಗಾವಿ : ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಪತಿ!

05/02/2026 12:09 PM

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ : ಕಾರಿನ ಮಿರರ್ ಮುರಿದು ಬೈಕ್ ಸವಾರ ಅಸಭ್ಯ ವರ್ತನೆ

05/02/2026 12:07 PM

Chicken Prices: ಚಿಕನ್ ಪ್ರಿಯರಿಗೆ ಸಿಹಿಸುದ್ದಿ : ಕೋಳಿ ಮಾಂಸದ ಬೆಲೆ ಇದ್ದಕ್ಕಿದ್ದಂತೆ ಕುಸಿತ

05/02/2026 12:07 PM
State News
KARNATAKA

ಬೆಳಗಾವಿ : ಪತ್ನಿಗಾಗಿ ಕೈಯಲ್ಲಿ ಆಕ್ಸಿಜನ್ ಹಿಡಿದುಕೊಂಡು ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಪತಿ!

By kannadanewsnow0505/02/2026 12:09 PM KARNATAKA 1 Min Read

ಬೆಳಗಾವಿ : ಬೆಳಗಾವಿಯ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ದಂಪತಿಗಳು ಆಕ್ಸಿಜನ್ ಸಿಲೆಂಡರ್ ಸಮೇತ ಬಂದು ಮಾಯಕ್ಕ ದೇವಿಯ ದರ್ಶನ…

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ : ಕಾರಿನ ಮಿರರ್ ಮುರಿದು ಬೈಕ್ ಸವಾರ ಅಸಭ್ಯ ವರ್ತನೆ

05/02/2026 12:07 PM

Chicken Prices: ಚಿಕನ್ ಪ್ರಿಯರಿಗೆ ಸಿಹಿಸುದ್ದಿ : ಕೋಳಿ ಮಾಂಸದ ಬೆಲೆ ಇದ್ದಕ್ಕಿದ್ದಂತೆ ಕುಸಿತ

05/02/2026 12:07 PM

ಅಮ್ಮ ಬೈದರೆಂದು ಮನೆಬಿಟ್ಟ ಅಕ್ಕ-ತಮ್ಮ: ಆಧಾರ್ ಕಾರ್ಡ್ ಹಿಡಿದು ಫ್ರೀ ಬಸ್‌ನಲ್ಲಿ ಊರೂರು ಸುತ್ತಿದ ಬಾಲಕಿ!

05/02/2026 11:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.