ಶಿವಮೊಗ್ಗ: ಜಿಲ್ಲೆಯ ಸೊರಬದ ಕಾನಹಳ್ಳಿಯಲ್ಲಿ ಅದ್ಧೂರಿಯಾಗಿ 70ನೇ ಕನ್ನಡ ರಾಜ್ಯೋತ್ಸವವನ್ನು ಕುವೆಂಪು ಕನ್ನಡ ಯುವಕರ ಸಂಘದಿಂದ ಆಚರಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಹಳ್ಳಿ(ಗಡೆಗದ್ದೆ)ಯಲ್ಲಿ ಗ್ರಾಮದ ಕುವೆಂಪು ರಂಗಮಂದಿರದಲ್ಲಿ ಕುವೆಂಪು ಕನ್ನಡ ಯುವಕ ಸಂಘದ ಅಧ್ಯಕ್ಷರಾದ ಮಂಜಪ್ಪ ಕೆ.ಪಿ ಅವರು ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದರು. ಉಳವಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಗಣಪತಿಯವರು ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಸತತ 32 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ, ವಯೋನಿವೃತ್ತಿಯಾದಂತ ಗೋಪಾಲಮ್ಮ ಅವರ ಸೇವೆಯನ್ನು ಸ್ಮರಿಸಿದಂತ ಕುವೆಂಪು ಕನ್ನಡ ಯುವಕರ ಸಂಘವು, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.
ಇದಲ್ಲದೇ ಕಾನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದಂತ ಶಿಕ್ಷರಾದ ಸಚಿನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾನಹಳ್ಳಿಯ ಕುವೆಂಪು ಕನ್ನಡ ಯುವಕರ ಸಂಘದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ನವದುರ್ಗೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಕೆ.ಇ ಪಾಲ್ಗೊಂಡಿದ್ದರು.
ಈ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ ಮನ ಸೆಳೆದು, ಕನ್ನಡ ಡಿಂಡಿಮ ಮೊಳಗುವಂತೆ ಮಾಡಿತು. ಆ ಮೂಲಕ 70ನೇ ಕನ್ನಡ ರಾಜ್ಯೋತ್ಸವವನ್ನು ಕಾನಹಳ್ಳಿಯ ಕುವೆಂಪು ಕನ್ನಡ ಯುವಕರ ಸಂಘದಿಂದ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಶಿಕ್ಷಕ ಪುಟ್ಟಸ್ವಾಮಿ.ಎಲ್ ನಿರೂಪಿಸಿದರೇ, ಕುವೆಂಪು ಕನ್ನಡ ಯುವಕ ಸಂಘದ ಸದಸ್ಯ ನಿಂಗರಾಜ ಗಣ್ಯರನ್ನು ಸ್ವಾಗತಿಸಿದರೇ, ಪರಶುರಾಮ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸರ್ವರನ್ನು ವಂದಿಸಿದರು.
ಕುವೆಂಪು ಕನ್ನಡ ಯುವಕರ ಸಂಘದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷರಾದಂತ ಕೆ.ಪಿ ಮಂಜಪ್ಪ, ಉಪಾಧ್ಯಕ್ಷ ಕೆ.ಅಶೋಕ, ಕಾರ್ಯದರ್ಶಿ ಆದರ್ಶ್.ಎಂ, ಉಳವಿ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದಂತ ಮಂಜುನಾಥ ಬಿ, ಧನಂಜಯ ಸಿ, ಸಂದೀಪ.ಆರ್, ಅಣ್ಣಪ್ಪ.ಟಿ, ಓಂಕಾರಪ್ಪ.ಕೆ, ಅಶೋಕ.ಸಿ, ಸಂದೀಪ.ಡಿ, ದಿನೇಶ್ ಕೆ.ಎಸ್, ಭರತ್ ಕುಮಾರ್.ಕೆಎನ್, ಪ್ರೇಮ್ ಕುಮಾರ್.ಹೆಚ್.ಜಿ, ನವೀನ್ ಕುಮಾರ್.ಎಂ ಹಾಗೂ ದರ್ಶನ್.ಎನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
SHOCKING: ‘ಮದ್ಯ ಸೇವಿಸಲು ಹಣ’ ಕೊಡಲಿಲ್ಲವೆಂದು ತಂದೆಯನ್ನೇ ‘ಕೊಂದ ಪಾಪಿ ಪುತ್ರ’
ಡಿಜಿಟಲ್ ಅರೆಸ್ಟ್: ದೇಶಾಧ್ಯಂತ ಬರೋಬ್ಬರಿ 3000 ಕೋಟಿ ಸುಲಿಗೆ, ಸುಪ್ರೀಂ ಕೋರ್ಟ್ ಕಳವಳ | Digital Arrest Cases
BIG NEWS: ರಾಜ್ಯದಲ್ಲೊಂದು ‘ಹೃದಯ ವಿದ್ರಾವಕ’ ಘಟನೆ: ಮಾಲೀಕನ ಸಾವಿನಿಂದ ನೊಂದು ‘ಪ್ರಾಣಬಿಟ್ಟ ಶ್ವಾನ’








