ಶಿವಮೊಗ್ಗ: ಕೆಳದಿ ಅರಸರ ಕಾಲದಿಂದಲೂ ಸಾಗರದ ಜೋಯಿಸ್ ಮನೆತನದಲ್ಲಿ ಅರಮನೆ ಗೌರಿ ಕೂರಿಸುವಂತ ಸಂಪ್ರದಾಯವಿದೆ. ಇಂದು ಅದರಂತೆ ಜೋಯಿಸ್ ಮನೆತನದವರಿಂದ ಅರಮನೆ ಗೌರಿ ಪ್ರತಿಷ್ಠಾಪಿಸಿ ವಿಶೇಷ ರೀತಿಯಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೌರಿ ಗಣೇಶ ಹಬ್ಬ ಎಲ್ಲರ ಮನೆಯಲ್ಲೂ ಮನೆ ಮಾಡಿದೆ. ಇದೇ ಹೊತ್ತಿನಲ್ಲಿ ಕೆಳದಿ ಅರಸರ ಕಾಲದಿಂದಲೂ ಜೋಯಿಸ್ ಮನೆತನದಿಂದ ಅರಮನೆ ಗೌರಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆ ನಡೆಸಲಾಯಿತು. 2 ದಿನಗಳ ಕಾಲ ಗೌರಿಯನ್ನು ಪೂಜಿಸಲಾಗುತ್ತದೆ. ಈ ದೇವಿಯನ್ನು ಪ್ರತಿಯೊಬ್ಬ ಭಕ್ತರು ಸ್ಪರ್ಶಿಸಿ, ಪೂಜಿಸುವುದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತ ಸಂಪ್ರದಾಯವಾಗಿದೆ.
ಈ ಕುರಿತಂತೆ ಮಾತನಾಡಿದಂತ ಜೋಯಿಸ್ ಮನೆತನದ ಸದಾಶಿವ ಜೋಯಿಸ್ ಅವರು, ನಮ್ಮ ಕುಟುಂಬದಲ್ಲಿ ಕೆಳದಿ ಅರಸರ ಕಾಲದಿಂದಲೂ ಅರಮನೆಯಲ್ಲಿ ಪೂಜೆಗೊಳ್ಳುತ್ತಿದ್ದಂತ ಗೌರಿಯನ್ನು ಅರಸರ ಆಳ್ವಿಕೆಯ ನಂತ್ರ, ನಮ್ಮ ಮನೆತನದ ಮೂಲಕ ಮನೆಯಲ್ಲಿಯೇ ಇಟ್ಟು ಪೂಜೆ ಮಾಡುವ ಸಂಪ್ರದಾಯವನ್ನು ನಡೆಸಲಾಗುತ್ತಿದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು.
ನಮ್ಮ ಮನೆಯಲ್ಲಿ ಕೂರಿಸುವಂತ ಅರಮನೆ ಗೌರಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ದೇವಿಗೆ ಬಾಗಿನವನ್ನು ಭಕ್ತರು ಅರ್ಪಿಸುತ್ತಾರೆ. ಕೆಳದಿ ಅರಸರ ಕಾಲದಿಂದ ಈ ಸಂಪ್ರದಾಯವನ್ನು ಅನುಚಾನವಾಗಿ ಮುಂದುವರೆಸಿಕೊಂಡು ನಮ್ಮ ಕುಟುಂಬ ಬಂದಿದೆ. ಇಂದು ಕೂಡ ಅದರಂತೆ ಅರಮನೆ ಗೌರಿಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀಲಕಂಠ ಜೋಯಿಸ್, ಗೌರಿಶಂಕರ ಜೋಯಿಸ್, ಭೂಮಿಕಾ, ಗೀತಾ, ಸಹನಾ ಜಿ ಭಟ್, ದೀಪಕ್ ಸಾಗರ್, ವಿದ್ಯಾ ಸೇರಿದಂತೆ ಇತರರು ಹಾಜರಿದ್ದರು.
BREAKING: ಮಾಜಿ ಸಚಿವ ಮುರುಗೇಶ್ ನಿರಾಣಿ ಪುತ್ರನಿಗೆ ಸುಪ್ರೀಂ ಕೋರ್ಟ್ ಶಾಕ್: ವಿಜಯ್ ನಿರಾಣಿ ವಿರುದ್ಧ ತನಿಖೆಗೆ ಆದೇಶ