ಶಿವಮೊಗ್ಗ: ಜಿಲ್ಲೆಯಲ್ಲಿ ಎಡಬಿಡದೇ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಇಂದು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಕೂಡ ಘೋಷಣೆ ಮಾಡಲಾಗಿದೆ. ಇದರ ನಡುವೆ ಮಳೆಯಿಂದಾಗಿ ಸೊರಬ ತಾಲ್ಲೂಕಿನ ತಳೇಬೈಲಿನಲ್ಲಿ ವಾಸದ ಮನೆಯೊಂದು ಬಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತಳೇಬೈಲಿನಲ್ಲಿ ಭಾರೀ ಮಳೆಯಿಂದಾಗಿ ಬಸಪ್ಪ ಕೋಂ ಮುತ್ತಪ್ಪ ಎಂಬುವರ ಮನೆಯ ಗೋಡೆ ಪಕ್ಕದ ಮನೆಯ ಹಾಲಮ್ಮ ಎಂಬುವರ ಮನೆಯ ಮೇಲೆ ಬಿದ್ದ ಪರಿಣಾಮ, ಒಂದು ಭಾಗದ ಗೋಡೆ ಸಂಪೂರ್ಣವಾಗಿ ಕುಸಿತಗೊಂಡಿದೆ.
ಇಂದು ಬೆಳಗ್ಗೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ಮನೆ ಬಿದ್ದಂತ ಸಂದರ್ಭದಲ್ಲೇ ಹಾಲಮ್ಮ, ಮಗಳು, ಮೊಮ್ಮಕ್ಕಳು ವಾಸವಾಗಿದ್ದರು. ಆದರೇ ಮನೆಯ ಎಡಭಾಗದಲ್ಲಿ ಮಲಗಿದ್ದು. ಬಲಭಾಗದಲ್ಲಿನ ಮನೆಯ ಗೋಡೆ ಕುಸಿದು ಬಿದ್ದಿರುವ ಪರಿಣಾಮ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಗೋಡೆ ಕುಸಿತಗೊಂಡ ಪರಿಣಾಮ ಮಳೆಯ ನೀರು ಮನೆಯೊಳಗೆ ನುಗ್ಗಿದ್ದರಿಂದಾಗಿ ಮನೆಯಲ್ಲಿದ್ದಂತ ವಸ್ತುಗಳೆಲ್ಲ ಹಾನಿಗೊಂಡಿದ್ದಾವೆ. ಶೇಖರಿಸಿದ್ದಂತ ಪಾತ್ರೆ, ದವಸ-ಧಾನ್ಯಗಳು ಹಾಳಾಗಿದ್ದಾವೆ. ಹಾಲಮ್ಮ ಅವರ ಇಡೀ ಕುಟುಂಬವೇ ಬೀದಿಗೆ ಬಿದ್ದಂತೆ ಆಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ವಿಎ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಹಾಲಮ್ಮ ಅವರ ಪತಿ ಮೃತಪಟ್ಟಿದ್ದರು. ಮಗಳನ್ನು ತಾನೇ ದುಡಿದು ಮದುವೆ ಮಾಡಿದ್ದರು. ಇದೀಗ ಭಾರೀ ಮಳೆಯಿಂದಾಗಿ ಮನೆ ಕುಸಿತಗೊಂಡ ಪರಿಣಾಮ, ಹಾಲಮ್ಮ ಮತ್ತು ಮಗಳು, ಮೊಮ್ಮಕ್ಕಳು ಬೀದಿಗೆ ಬಿದ್ದಂತೆ ಆಗಿದೆ. ಕೂಡಲೇ ಸರ್ಕಾರ ಇವರ ನೆರವಿಗೆ ಧಾವಿಸಿ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು, ಮನೆ ಪುನರ್ ನಿರ್ಮಾಣಕ್ಕೆ ತುರ್ತಾಗಿ ಪರಿಹಾರದ ನೆರವು ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
BREAKING: ಧರ್ಮಸ್ಥಳ ಕೇಸ್: ಉತ್ಖನನದ ವೇಳೆ 2 ಜಾಗದಲ್ಲಿ ಅಸ್ಥಿಪಂಜರ, ಮೂಳೆ, ಬುರುಡೆ ಪತ್ತೆ – ಗೃಹ ಸಚಿವರು
FSL ವರದಿ ಬರುವವರೆಗೆ ಧರ್ಮಸ್ಥಳದಲ್ಲಿ ಉತ್ಖನನ ತಾತ್ಕಾಲಿಕವಾಗಿ ಸ್ಥಗಿತ: ಗೃಹ ಸಚಿವ ಡಾ.ಜಿ ಪರಮೇಶ್ವರ್