ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ವ್ಯಾಪ್ತಿಯ ರೈತರಿಗೆ ಮಹತ್ವದ ಸೂಚನೆಯನ್ನು ಪೊಲೀಸರು ನೀಡಿದ್ದಾರೆ. ಪೊಲೀಸರ ಸೂಚನೆಯನ್ನು ಅನುಸರಿಸಿ ರೈತರು ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಲಾಗಿದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಆನಂದಪುರ ಠಾಣೆಯ PSI ಪ್ರವೀಣ್ ಎಸ್.ಪಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ತಮ್ಮ ಬೆಳೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಕೆಳಕಂಡಂತೆ ಕ್ರಮವಹಿಸಲು ಸೂಚಿಸಿದ್ದಾರೆ.
* ಅಡಿಕೆ/ಶುಂಠಿ ಕೊಯ್ದು ಒಣಗಿಸುವ ರೈತಾಪಿ ಕೆಲಸ ಠಾಣಾ ವ್ಯಾಪ್ತಿಯಲ್ಲಿ ಚಾಲನೆಯಲ್ಲಿರುವುದರಿಂದ ಹೆಚ್ಚಾಗಿ ಅಡಿಕೆ/ಶುಂಠಿ ಒಣಗಿಸುವ ಕಣಗಳ ಬಳಿ CCTV ಕಣ್ಗಾವಲು ಅಳವಡಿಸಲು ಕೋರಿದ್ದಾರೆ.
* ಅಡಿಕೆ/ಶುಂಠಿ ಒಣಗಿಸುವ ಸ್ಥಳದಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದ್ದಾರೆ.
* ಅಡಿಕೆ/ಶುಂಠಿಯ ವ್ಯಾಪಾರ/ಖೇಣಿ ಪದ್ಧತಿಯು ಹೆಚ್ಚಾಗಿ ನಂಬಿಕೆ ಆಧಾರದ ಮೇಲೆ ನಡೆಯುತ್ತಿದ್ದು ಹಲವಾರು ರೈತರು ಮೋಸ ಹೋದಂತ ಘಟನೆಗಳು ನಡೆಯುತಿದ್ದು, ಸಮರ್ಪಕ ದಾಖಲಾತಿಗಳೊಂದಿಗೆ ವ್ಯವಹಾರ ನಡೆಸಲು ಕೋರಿದ್ದಾರೆ.
* ಸಂಪೂರ್ಣ ಪರಿಚಯವಿಲ್ಲದ ಹೊರ ಸ್ಥಳದ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡುವಾಗ ಜಾಗರೂಕತೆಯಿಂದ ವ್ಯವಹರಿಸಿ, ಸಮರ್ಪಕ ದಾಖಲೆಗಳೊಂದಿಗೆ ವ್ಯವಹರಿಸಿರಿ ಎಂಬುದಾಗಿ ಎಚ್ಚರಿಸಿದ್ದಾರೆ.
* ಚೆಕ್ ಪಡೆದು ವ್ಯವಹಾರ ಮಾಡುತ್ತಿದ್ದಲ್ಲಿ, ಚೆಕ್ ನ ಮಾನ್ಯತೆ ಬಗ್ಗೆ ಸಂಬಂಧಿಸಿದ ಬ್ಯಾಂಕ್ ನಲ್ಲಿ ಪರಿಶೀಲನೆ ಮಾಡಿಕೊಳ್ಳಿ ಎಂಬುದಾಗಿ ಮಹತ್ವದ ಸೂಚನೆಯನ್ನು ನೀಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಜ್ವಲಿಸಿದ ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳು ಬೆಂಕಿಗಾಹುತಿ








