ಶಿವಮೊಗ್ಗ : ಸಹಕಾರಿ ಸಂಸ್ಥೆಗಳಿಗೆ ನಂಬಿಕೆ ಜೀವಾಳ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ರಕ್ಷಣೆ ಮಾಡಬೇಕು. ರೈತರ ಮೊಗದಲ್ಲಿ ಸಂತಸವಿದ್ದಾಗ ಮಾತ್ರ ದೇಶ ಸುಭೀಕ್ಷವಾಗಿರುತ್ತದೆ. ಒಂದು ವೇಳೆ ಸಹಕಾರಿ ಸಂಸ್ಥೆಗಳನ್ನು ಉಳಿಸಿಕೊಳ್ಳದಿದ್ದರೇ ರೈತರ ಬದುಕೇ ಬರಡಾಗಲಿದೆ ಎಂಬುದಾಗಿ ಶಾಸಕ ಹಾಗೂ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಶೃಂಗೇರಿ ಶಂಕರಮಠದಲ್ಲಿ ಮಂಗಳವಾರ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಮಹಾಮಂಡಲ ಸೇರಿ ವಿವಿಧ ಸಹಕಾರಿ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಪ್ರಪಂಚದಲ್ಲಿ ಭಾರತ ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಸಶಕ್ತವಾಗಿದೆ. ರಾಜ್ಯದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಂ. 1 ಸ್ಥಾನ ಗಳಿಸಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಸಂಸ್ಥೆ ಅತಿಹೆಚ್ಚು ಲಾಭ ಗಳಿಸುತ್ತಿದೆ. ತಾಲ್ಲೂಕಿನಲ್ಲಿ ಅನೇಕ ಸಹಕಾರಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ. ಹೊಸ ಕಟ್ಟಡ ನಿರ್ಮಾಣ, ರಿಪೇರಿಗೆ ಡಿಸಿಸಿ ಬ್ಯಾಂಕ್‌ನಿಂದ ಕಡಿಮೆ ಅನುದಾನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನ ಅನುದಾನದಲ್ಲಿ ಸಹಕಾರಿ ಸಂಸ್ಥೆಗಳ ಕಟ್ಟಡಕ್ಕೆ ಅನುದಾನ ನೀಡಲಾಗುತ್ತಿದೆ. ಈಗಾಗಲೆ ಆನಂದಪುರ ಬ್ಯಾಕೋಡು, ನಂದಿತೆಳೆ, ಕೆಳದಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.

ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಎರಡು ತಿಂಗಳು ಆಗಿತ್ತು. ಆಗ ಕಲ್ಮನೆ ಸೊಸೈಟಿಯಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತು. ರೈತರು ತೀವೃ ಸಂಕಷ್ಟದಲ್ಲಿದ್ದಾಗ ಡಿಸಿಸಿ ಬ್ಯಾಂಕ್‌ನಿoದ 3.50 ಕೋಟಿ ರೂ. ಸಾಲಸೌಲಭ್ಯವನ್ನು ರೈತರಿಗೆ ನೀಡಿ ಅವರ ಬದುಕು ಹಸನುಗೊಳಿಸುವ ಕೆಲಸ ಮಾಡಲಾಗಿದೆ. ರೈತರು ಸಹಕಾರಿ ಸಂಸ್ಥೆಗಳ ಮೂಲಕ ತಮ್ಮ ಫಸಲು ಮಾರಾಟ ಮಾಡಬೇಕು. ಜೊತೆಗೆ ಖಾಸಗಿ ಫೈನಾನ್ಸ್ಗಳಲ್ಲಿ ಹಣ ತೊಡಗಿಸುವ ಬದಲು ನಿಮ್ಮ ಸಮೀಪದ ಸಹಕಾರಿ ಸಂಸ್ಥೆಗಳಲ್ಲಿ ಹಣ ತೊಡಗಿಸಿ ಎಂದು ಸಲಹೆ ನೀಡಿದರು.
ರೈತರ ಸಂಪರ್ಕಕ್ಕಾಗಿ ನಾನು ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಸಹಕಾರಿ ಕ್ಷೇತ್ರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸಹಕಾರಿ ಸಂಘಗಗಳ ಕಟ್ಟಡ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಅನುದಾನ ಒದಗಿಸುವಂತ ಕೆಲಸವನ್ನು ಮಾಡಿದ್ದೇನೆ. ರಾಜಕೀಯ ಹೊರತಾಗಿಯೂ ಸಹಕಾರಿ ಸಂಸ್ಥೆಗಳಿಗೆ ನೆರವಾಗುತ್ತಿರುವುದಾಗಿ ತಿಳಿಸಿದರು.
ಸಾಗರ ತಾಲ್ಲೂಕಿನ ಕರೂರು ಭಾರಂಗಿ ಹೋಬಳಿಯಲ್ಲಿ ಅಡಿಕೆ ಮರಕ್ಕೆ ಎಲೆಚುಕ್ಕೆ ರೋಗ ಬಂದಿರುವುದರಿoದ ರೈತರು ತೀವೃ ನಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ರೈತರ ಸಂಕಷ್ಟಗಳಿಗೆ ಸರ್ಕಾರಗಳು ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮoಜುನಾಥ ಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ನೆಹರುರವರು ಸಹಕಾರಿ ಸಂಸ್ಥೆಗಳನ್ನು ಬಲಿಷ್ಠ ಗೊಳಿಸಬೇಕು ಆರ್ಥಿಕ ಸಬಲೀಕರಣಕ್ಕೆ ಅದು ಬಹು ಮುಖ್ಯವಾದದ್ದು ಎಂಬುದನ್ನು ಪ್ರತಿಪಾದಿಸಿದರು, ದೇಶಾದ್ಯಂತ 8.45 ಲಕ್ಷ ಸಹಕಾರಿ ಸಂಸ್ಥೆಗಳಿದ್ದು, 40 ಕೋಟಿಗೂ ಹೆಚ್ಚು ಸಹಕಾರಿ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 60 ರಿಂದ 70ಸಾವಿರ ಸಹಕಾರಿ ಸದಸ್ಯರು ಇದ್ದಾರೆ. ಸಹಕಾರಿ ಚಳುವಳಿ ಜನರ ಚಳುವಳಿಯಾಗಿದೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಾಗಬಾರದು. 2013ರ ನಂತರ ಸಹಕಾರಿ ಕ್ಷೇತ್ರವನ್ನು ಸರ್ಕಾರಗಳು ವ್ಯಾಪಿಸಿಕೊಳ್ಳುವ ಪ್ರಯತ್ನ ನಡೆಸಿವೆ. ಜಿಲ್ಲೆಯಲ್ಲಿ ರೈತರಿಗೆ 1300 ಕೋಟಿ ರೂ. ಬೆಳೆಸಾಲವನ್ನು ನೀಡಲಾಗಿದೆ. ಸಾವಯವ ಹೆಸರಿನಲ್ಲಿ ಯೂರಿಯಾ ಬೆರೆಸಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರೈತರ ಮಣ್ಣು ಸಾಯುತ್ತಿದೆ. ಮಣ್ಣು ಸತ್ತು ಹೋದರೆ ನಾವೆಲ್ಲಿಗೆ ಹೋಗಬೇಕು ಎನ್ನುವ ಚಿಂತನೆ ಅಗತ್ಯ. ರೈತರು ತೋಟಗಳಿಗೆ ಕೊಟ್ಟಿಗೆ ಹಾಗೂ ಸೆಗಣಿ ಗೊಬ್ಬರ ಬಳಕೆ ಮಾಡಬೇಕು. ತಾಲ್ಲೂಕಿನಲ್ಲಿ ಒಂದು ಗ್ರಾಮ ಪಂಚಾಯ್ತಿ ಸಹಕಾರಿ ಸಂಸ್ಥೆಯೊoದನ್ನು ಆಯ್ದುಕೊಂಡು ಅದನ್ನು ಸಹಕಾರಿ ಗ್ರಾಮವಾಗಿ ರೂಪಿಸುವ ಯೋಜನೆ ಜಾರಿಯಲ್ಲಿದ್ದು, ಈ ಬಗ್ಗೆ ಶಾಸಕರು ಸ್ಥಳೀಯರು ಗಮನ ಹರಿಸಬೇಕು ಸಹಕಾರಿ ಸಂಸ್ಥೆಗಳು ಬರಿ ನಾಮಪಾಲಕಕ್ಕೆ ಸೀಮಿತವಾಗದೆ ತನ್ನ ಪ್ರಮುಖ ಉದ್ದೇಶವನ್ನು ಪೂರೈಸಬೇಕು ಎಂದು ಹೇಳಿದರು.
ಸಾಗರ ತಾಲೂಕಿನಲ್ಲಿ ಸಹಕಾರಿ ಸಂಘಟನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದವರು ತೋಟಗಾರಸ ಸಂಸ್ಥೆಯ ಅಧ್ಯಕ್ಷರಾದ ಕೆ ಸಿ ದ್ಯಾವಪ್ಪನವರ ಕಾರ್ಯ ವೈಖರಿಯನ್ನು ಸ್ಥಾಪಿಸಿ ಸಭೆಯಲ್ಲಿ ಪ್ರಸ್ತಾಪಿಸಿದರು ಅಂತೆಯೇ ಸಾಗರದಲ್ಲಿ ಸಾಕಷ್ಟು ಸಹಕಾರಿ ಸಂಸ್ಥೆಗಳು ಮಾದರಿಯಾಗಿ ಮುನ್ನಡೆದಿದೆ ಎಂದರು.
ಸಹಕಾರಿ ಯೂನಿಯನ್ ಅಧ್ಯಕ್ಷ ಅಮೃತೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಇಲಾಖೆಯ ರೋಹಿಣಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶಿಮುಲ್ ಅಧ್ಯಕ್ಷ ವಿದ್ಯಾಧರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಬಿ.ಎ.ಇಂದೂಧರ ಬೇಸೂರು, ಕೃಷ್ಣಮೂರ್ತಿ ಭಂಡಾರಿ, ಜಿ.ಎನ್.ಸುಧೀರ್, ತಿಮ್ಮಪ್ಪ, ಭರ್ಮಪ್ಪ, ಕೆ.ಸಿ.ದೇವಪ್ಪ, ಆರ್.ಶ್ರೀನಿವಾಸ್, ಅಶೋಕ ಬೇಳೂರು, ಲೋಕನಾಥ ಬಿಳಿಸಿರಿ, ಗಣಪತಿ ಹೊನಗಲು, ಲೋಕೇಶ ಕುಮಾರ್, ಈಶ್ವರ ನಾಯ್ಕ್, ನೇತ್ರಾವತಿ ಜಿ. ಭಟ. ಸುಧಾ . ಚಂದ್ರಶೇಖರ್. ದಿನೇಶ್ ಬರದವಳ್ಳಿ, ಸಂತೋಷ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಿಯಾಂಕ್ ಖರ್ಗೆ ಸುಳ್ಳುಗಳನ್ನು ಹೇಳುವುದರಲ್ಲಿ ನಿಸ್ಸೀಮ: ಛಲವಾದಿ ನಾರಾಯಣಸ್ವಾಮಿ








