ಶಿವಮೊಗ್ಗ : 2023-24 ನೇ ಸಾಲಿನ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭತ್ತ, ಕಬ್ಬು, ಅರೆ ನೀರಾವರಿ ಬೆಳೆ ಮುಂತಾದ ಯಾವುದೇ ರೀತಿಯ ಬೆಳೆಗಳಿಗೆ ನೀರನ್ನು ಹರಿಸದಿರಲು ಹಾಗೂ ಬೆಳೆದು ನಿಂತಿರುವ ಬೆಳೆ, ಜನ-ಜಾನುವಾರು, ಕುಡಿಯುವ ನೀರು ಮತ್ತು ಪರಿಸರ ಸಮತೋಲನ ಕಾಪಾಡಿಕೊಳ್ಳಲು ಆನ್ ಅಂಡ್ ಆಫ್ ಪದ್ದತಿಯಲ್ಲಿ ಬಲದಂಡೆ ನಾಲೆಗೆ ದಿ:15-01-2024 ರಿಂದ ಒಟ್ಟು 53 ದಿನಗಳಿಗೆ ಹಾಗೂ ಎಡದಂಡೆ ನಾಲೆಗೆ ದಿ: 10.01.2024 ರಿಂದ ಒಟ್ಟು 70 ದಿನಗಳಿಗೆ ನೀರು ಹರಿಸಲು ತೀರ್ಮಾನಿಸಲಾಯಿತು.
ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಭದ್ರಾ ಎಡದಂಡೆ ನಾಲೆಯಲ್ಲಿ ಜ.10 ರಿಮದ 25 ರವರೆಗೆ 16 ದಿನ ನೀರು ಹರಿಸುವುದು, ಜ.26 ರಿಂದ ಫೆ.9 ರವರೆಗೆ 15 ದಿನ ನೀರು ನಿಲ್ಲಿಸುವುದು. ಫೆ.10 ರಿಂದ 26 ರವರೆಗೆ 17 ದಿನ ನೀರು ಹರಿಸುವುದು, ಫೆ.27 ರಿಂದ ಮಾ.12 ರವರೆಗೆ 15 ದಿನ ನೀರು ನಿಲ್ಲಿಸುವುದು. ಮಾ.3 ರಿಂದ 30 ರವರೆಗೆ 18 ನೀರು ಹರಿಸುವುದು ಮಾ.31 ರಿಂದ ಏ.14 ರವರೆಗೆ 15 ದಿನ ನೀರು ನಿಲ್ಲಿಸುವುದು. ಏ.15 ರಿಂದ ಮೇ.3 ರವರೆಗೆ 19 ದಿನಗಳ ನೀರು ಹರಿಸಲಾಗುವುದು.
ಭದ್ರಾ ಬಲದಂಡೆ ನಾಲೆಯಲ್ಲಿ ಜ.15 ರಿಂದ 26 ರವರೆಗೆ 12 ದಿನ ನೀರು ಹರಿಸುವುದು, ಜ.27 ರಿಂದ ಫೆ.15 ರವರೆಗೆ 20 ದಿನ ನೀರು ನಿಲ್ಲಿಸುವುದು. ಫೆ.16 ರಿಂದ 28 ರವರೆಗೆ 13 ದಿನ ನೀರು ಹರಿಸುವುದು, ಫೆ.29 ರಿಂದ ಮಾ.19 ರವರೆಗೆ 20 ದಿನ ನೀರು ನಿಲ್ಲಿಸುವುದು. ಮಾ.20 ರಿಂದ ಏ.2 ರವರೆಗೆ 14 ದಿನ ನೀರು ಹರಿಸುವುದು, ಏ.3 ರಿಂದ 22 ರವರೆಗೆ 20 ದಿನಗಳಿಗೆ ನೀರು ನಿಲ್ಲಿಸುವುದು. ಏ.23 ರಿಂದ ಮೇ 5 ರವರೆಗೆ 14 ದಿನಗಳ ನೀರು ಹರಿಸಲಾಗುವುದು ಎಂದು ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
‘ಯುವನಿಧಿ ಯೋಜನೆ’ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ‘ಶಿವಮೊಗ್ಗ ಸಜ್ಜು’
BREAKING : ರಾಮ ಮಂದಿರ ಉದ್ಘಾಟನೆ ವೇಳೆ ಉಗ್ರ ದಾಳಿಗೆ ಸ್ಕೆಚ್ : ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ