ಶಿವಮೊಗ್ಗ: ಜಿಲ್ಲೆಯ ಸಾಗರ ಸಮೀಪದ ಕುಗ್ವೆ ಗ್ರಾಮದ ಇತಿಹಾಸ ಪ್ರಸಿದ್ದ ಈಶ್ವರ, ನಂದೀಶ್ವರ ಹಾಗೂ ಸಪರಿವಾರ ದೇವರ ಪ್ರಾಣ ಪ್ರತಿಷ್ಟಾಪನೆ, ಪುರಾತನ ಧಾರ್ಮಿಕ ಶ್ರದ್ಧಾಕೇಂದ್ರದ ನೂತನ ಶಿಲಾಮಯ ದೇವಾಲಯದ ಪ್ರತಿಷ್ಟಾಪನೆ ಮೇ 3, 4 ಮತ್ತು 5ರಂದು ನಡೆಯಲಿದೆ ಎಂದು ಶ್ರೀ ಈಶ್ವರ ಸೇವಾ ಪ್ರತಿಷ್ಟಾನ ಮತ್ತು ಗ್ರಾಮ ಸುಧಾರಣಾ ಸಮಿತಿ ಮುಖಂಡರು ತಿಳಿಸಿದ್ದಾರೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಮುಖರು, ಈಶ್ವರ ಸೇವಾ ಪ್ರತಿಷ್ಟಾನ ಮತ್ತು ಗ್ರಾಮ ಅಭಿವೃದ್ದಿ ಸಮಿತಿ ಜಂಟೀಯಾಗಿ ಈ ಧಾರ್ಮಿಕ ಕಾರ್ಯಕ್ರಮದ ಮುಂದಾಳತ್ವ ವಹಿಸಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ, ಸುಂದರವಾದ ಶಿಲಾಮಯ ದೇವಸ್ಥಾನ ನಿರ್ಮಿಸಿದೆ ಎಂದರು.
ಮೇ 3ರಂದು ಬೆಳಿಗ್ಗೆ 8ರಿಂದ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸಂಜೆ ಗೋಧೂಳಿ ಮುಹೂರ್ತದಲ್ಲಿ ನೂತನ ದೇವಾಲಯ ಪ್ರವೇಶ ಇನ್ನಿತರೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಸೇಡಿನ ಜ್ವಾಲೆ ಸಾಮಾಜಿಕ ನಾಟಕ ಇರುತ್ತದೆ. ಮೇ 4ರಂದು ಬೆಳಿಗ್ಗೆ ಗಂಗಾಪೂಜೆ ಮೂಲಕ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ನಂಗರ 108 ಗಣಹೋಮ, ರುದ್ರಹೋಮ, ಮೃತ್ಯುಂಜಯ ಹೋಮ ಇನ್ನಿತರೆ ಕಾರ್ಯಕ್ರಮ ಇದ್ದು, ಸಂಜೆ ಅಷ್ಟಬಂಧ ಮಹೋತ್ಸವ ಇರುತ್ತದೆ. ರಾತ್ರಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಿದೆ ಎಂದು ಹೇಳಿದರು.
ಮೇ 5ರಂದು ನೂತನ ದೇವರ ಕಲಾನ್ಯಾಸ, ಜಲಾಧಿವಾಸ, ಮಹಾರುದ್ರಾಭಿಷೇಕ, ಕುಂಬಾಭಿಷೇಕ, ಪ್ರಾಣ ಪ್ರತಿಷ್ಟಾಪನೆ ಪೂರ್ಣಾಹುತಿ, ಗೋಪುರಕ್ಕೆ ಕಳಸರೋಹಣ ಇನ್ನಿತರೆ ಕಾರ್ಯಕ್ರಮ ಇದ್ದು, ಸಂಜೆ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ ಇಂದ್ರಜಿತು ಕಾಳಗ ಮೂಡಲಪಾಯ ಬಯಲಾಟ ಏರ್ಪಡಿಸಿದೆ. ಪ್ರತಿದಿನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗ ರೆಡ್ಡಿ, ಮಧು ಬಂಗಾರಪ್ಪ, ಸಂಸದ ಬಿ.ವೈರಾಘವೇಂದ್ರ, ಶಾಸಕರಾದ ಭೀಮಣ್ಣ ನಾಯ್ಕ್, ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಇದರ ಜೊತೆಗೆ ಸಾಲೂರು ಮಠದ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ, ನಿಟ್ಟೂರು ಮಠದ ರೇಣುಕಾನಂದ ಸ್ವಾಮಿಗಳು ಸೇರಿ ವಿವಿಧ ಗಣ್ಯರು, ಚುನಾಯಿತ ಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸುದ್ಧಿ ಗೋಷ್ಟಿಯಲ್ಲಿ ಪ್ರತಿಷ್ಟಾನದ ಅಧ್ಯಕ್ಷ ಈಶ್ವರನಾಯ್ಕ್ ಕುಗ್ವೆ, ಶಿವಾನಂದ ಕುಗ್ವೆ, ಮಹಾಬಲೇಶ್ವರ ಕುಗ್ವೆ, ಸುಧಾಕರ ಕುಗ್ವೆ ಬಂಡಿ ಈಶ್ವರ ಮಾತನಾಡಿದರು. ವಿಶ್ವನಾಥ ಕುಗ್ವೆ, ಬಸವರಾಜ ಸೈದೂರು, ಇಂದೂಧರ, ಅಣ್ಣಪ್ಪ ಕುಗ್ವೆ ಹಾಜರಿದ್ದರು.