ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಕ್ರಮ ಕಳ್ಳನಾಟ ಸಾಗಾಣಿಕೆ ಹೆಗ್ಗಿಲ್ಲದೆ ನಡೆಯುತ್ತಿರೋದೆ ಎನ್ನಲಾಗಿದೆ. ಹೀಗಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅವಿನಹಳ್ಳಿ ಹೋಬಳಿಯ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣಕಿ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳನಾಟ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ.
ಕೋಳೂರು ಗ್ರಾಮ ಪಂಚಾಯ್ತಿಯ ಕಣಕಿ ಗ್ರಾಮವು ಶರಾವತಿ ಹಿನ್ನೀರು ಸಮೀಪದಲ್ಲಿದ್ದು, ಇಲ್ಲಿ ರಾಜಾರೋಷವಾಗಿ ಮರ ಕಡಿದು, ಅವರಿಗೆ ಬೇಕಾದ ಸೈಜುಗಳಿಗೆ ಸ್ಥಳದಲ್ಲೇ ಕಟ್ ಮಾಡಿಕೊಂಡು ಸಾಗಾಣಿಕೆ ಮಾಡಲಾಗುತ್ತಿದೆ.
ಹೀಗೆ ಅಕ್ರಮ ಕಳ್ಳನಾಟ ಸಾಗಾಣಿಕೆ ನಡೆಯುತ್ತಿದ್ದರೂ ಸಾಗರದ ಉಪ ವಲಯ ಅರಣ್ಯಾಧಿಕಾರಿಗಳು ಗಮನಕ್ಕೆ ಬಂದಿದ್ಯೋ ಇಲ್ಲವೋ ಎನ್ನುವಂತೆ ಸೈಲೆಂಟ್ ಆಗಿದ್ದಾರೆ. ಈ ಕಳ್ಳನಾಟ ಸಾಗಾಣಿಕೆಯಲ್ಲಿ ಅವರು ಶಾಮೀಲಾಗಿರೋ ಶಂಕೆಯನ್ನು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಾಗರ ತಾಲೂಕಿನ ಅವಿನಹಳ್ಳಿ ಹೋಬಳಿಯ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣಕಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವಂತ ಕಳ್ಳನಾಟ ಸಾಗಾಣಿಕೆಯನ್ನು ಕೂಡಲೇ ತಡೆಯಬೇಕು. ಕಳ್ಳನಾಟ ಸಾಗಾಣಿಕೆ ಮಾಡೋರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ಉಮೇಶ್ ಮೊಗವೀರ, ಸಾಗರ
BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ವೃದ್ಧೆ’ಯನ್ನು ತುಂಡು ತುಂಡಾಗಿ ಕತ್ತರಿಸಿ ಬರ್ಬರವಾಗಿ ಹತ್ಯೆ
ಉತ್ತರ ಪ್ರದೇಶದ ‘ಪಟಾಕಿ ಕಾರ್ಖಾನೆ’ಯಲ್ಲಿ ಭೀಕರ ಸ್ಪೋಟ: ‘7 ಮಂದಿ’ ದುರ್ಮರಣ, ಹಲವರಿಗೆ ಗಾಯ