ಶಿವಮೊಗ್ಗ : ಮಾ. 6ರಿಂದ 8ರವರೆಗೆ ಮೂರು ದಿನಗಳ ಚರಕದ ಕೈಮಗ್ಗ, ಕೈಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳವನ್ನು ಬ್ರಾಸಂ ಸಭಾಂಗಣದಲ್ಲಿ ಏರ್ಪಡಿಸಿದೆ ಎಂದು ಚಕರ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಂಘದ ಮಾರಾಟ ವಿಭಾಗದ ಪದ್ಮಶ್ರೀ ತಿಳಿಸಿದರು.
ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚರಕ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಪ್ರದರ್ಶನ ಮತ್ತು ಮಾರಾಟದಲ್ಲಿ ಬೇರೆಬೇರೆ ಭಾಗಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರತಿದಿನ ಬೆಳಿಗ್ಗೆ 10-30ರಿಂದ ರಾತ್ರಿ 8-30ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದೊಂದಿಗೆ ಪವಿತ್ರ ವಸ್ತç ಯೋಜನೆಯಡಿ ಈ ಮೇಳವನ್ನು ಆಯೋಜಿಸಿದೆ. ಮೇಳದಲ್ಲಿ ಒಟ್ಟು ಎಂಟು ಮಳಿಗೆಗಳಲ್ಲಿ ಚರಕ ಕೈಮಗ್ಗದ ಸಿದ್ದ ಉಡುಪುಗಳು, ಬಟ್ಟೆಗಳು, ನೈಸರ್ಗಿಕ ಬಣ್ಣದ ಬೆಡ್‌ಸ್ಟೈಡ್‌ಗಳು, ಜಮ್ದಾನಿ ಬಟ್ಟೆಯಿಂದ ತಯಾರಿಸಿದ ಸೀರೆ, ಖುರ್ತಾ, ಶರ್ಟ್ ಹಾಗೂ ಗೃಹಾಲಂಕಾರ ಉಡುಪಗಳು ಲಭ್ಯವಿದೆ ಎಂದರು.
ಉತ್ತರ ಕರ್ನಾಟಕ ಭಾಗದ ಸೀರೆಗಳು, ಗಜೇಂದ್ರಗಢದ ಸಿದ್ದ ಉಡುಪುಗಳು, ಸಿದ್ದಾಪುರದ ಉಲ್ಲನ್‌ನಿಂದ ತಯಾರಿಸಿದ ಕರಕುಶಲ ವಸ್ತುಗಳು, ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನಗಳು, ನೈಸರ್ಗಿಕ ಸೌಂದರ್ಯವರ್ಧಕಗಳು, ಮಣ್ಣಿನಿಂದ ತಯಾರಿಸಿದ ಟರ‍್ರಾಕೋಟ ಆಭರಣಗಳು, ಕೈನಿಂದ ತಯಾರಿಸಿದ ಆಭರಣ ಸೇರಿ ಹಲವು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಎಂದು ಹೇಳಿದರು.
ವಿಶೇಷವಾಗಿ ಮಲೆನಾಡಿ ಖಾದ್ಯವನ್ನು ಒಳಗೊಂಡ ಆಹಾರ ಮೇಳವನ್ನು ಮಧ್ಯಾಹ್ನ 3 ರಿಂದ ರಾತ್ರಿ 8ರವರೆಗೆ ಆಯೋಜಿಸಿದೆ. ಸಾಂಪ್ರದಾಯಿಕ 50ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಆಹಾರ ಮೇಳದಲ್ಲಿ ಲಭ್ಯವಿರುತ್ತದೆ. ಸ್ಥಳೀಯ ಮಹಿಳಾ ಸಂಘಗಳು, ಮಹಿಳೆಯರು ವಿಶೇಷ ಖಾದ್ಯವನ್ನು ಸ್ಥಳದಲ್ಲಿಯೆ ತಯಾರಿಸಿ ಕೊಡಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಮೊ. 6363885215, 9900257910 ಸಂಪರ್ಕಿಸಬಹುದು ಎಂದು ಹೇಳಿದರು.
ಈ ವೇಳೆ ಚರಕ ಅಧ್ಯಕ್ಷೆ ಮಹಾಲಕ್ಷ್ಮಿ, ರಮೇಶ್ ಹಾಜರಿದ್ದರು.
BREAKING: ಯುದ್ಧದಿಂದ ತೈಲ ದರ ಹೆಚ್ಚಾಗುತ್ತೆ ಎಂಬ ವದಂತಿ ಹಿನ್ನಲೆ: ಪೆಟ್ರೋಲ್, ಡೀಸೆಲ್ ಖರೀದಿಗೆ ಮುಗಿಬಿದ್ದ ಜನರು
SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಪಾಠ ಮಾಡುವಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು!








