ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಮರಸ ಗ್ರಾಮದಲ್ಲಿ ಅಂಗಡಿಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ, ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಬಕಾರಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಮರಸ ಗ್ರಾಮದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಂತ ಮಾಹಿತಿ ಆಧರಿಸಿ ಅಬಕಾರಿ ಇನ್ಸ್ ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ.
ಈ ದಾಳಿಯ ವೇಳೆಯಲ್ಲಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಇರಿಸಲಾಗಿದ್ದಂತ 22 ಟೆಟ್ರಾ ಪ್ಯಾಕೇಟ್ ಅಂದರೆ 1.8 ಲೀಟರ್ ಮದ್ಯವನ್ನು ಸೀಜ್ ಮಾಡಿದ್ದಾರೆ.
ಈ ಸಂಬಂಧ ಅಂಗಡಿಯ ಮಾಲೀಕರನ್ನು ವಶಕ್ಕೆ ಪಡೆದು, ಆ ಬಳಿಕ ವಿಚಾರಣೆ ನಡೆಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಮರಸ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರಿಗೆ ಬಿಗ್ ಶಾಕ್ ಅನ್ನು ಸಾಗರ ತಾಲ್ಲೂಕಿನ ಅಬಕಾರಿ ಇನ್ಸ್ ಪೆಕ್ಟರ್ ಸಂದೀಪ್ ಕುಮಾರ್ ನೀಡಿದ್ದಾರೆ.
ಇಂದು ನಡೆದಂತ ಈ ದಾಳಿಯಲ್ಲಿ ಅಬಕಾರಿ ಕಾನ್ಸ್ ಸ್ಟೇಬಲ್ ಮುದಾಸೀರ್ ಅಹ್ಮದ್, ಪುಟ್ಟಪ್ಪ ಹಾಜರಿದ್ದರು.
ಅಂದಹಾಗೇ ಸಾಗರ ತಾಲ್ಲೂಕಿನ ಇನ್ನೂ ಕೆಲವು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆಯೂ ಅಬಕಾರಿ ಇಲಾಖೆ ಕ್ರಮವಹಿಸಿ, ಅಕ್ರಮ ಮದ್ಯ ಮಾರಾಟ ದಂಧೆಗೆ ಬ್ರೇಕ್ ಹಾಕುವಂತೆ ಆಗಲಿ ಎಂಬುದು ತಾಲ್ಲೂಕಿನ ಜನತೆಯ ಮನವಿಯಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಮಹಿಳೆಯ ಒಪ್ಪಿಗೆಯೊಂದಿಗಿನ ಲೈಂಗಿಕ ಸಂಬಂಧವು ಭಯದಲ್ಲಿದ್ದರೆ, ಅತ್ಯಾಚಾರಕ್ಕೆ ಸಮ: ಹೈಕೋರ್ಟ್ ಮಹತ್ವದ ತೀರ್ಪು
BIG UPDATE: ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗ ಮುಟ್ಟಿ ದೌರ್ಜನ್ಯವೆಸಗಿದ್ದ ಶಿಕ್ಷಕ ಅರೆಸ್ಟ್: ಸೇವೆಯಿಂದ ಅಮಾನತು
ಬೆಂಗಳೂರಲ್ಲಿ ಬೈಕ್-ಲಾರಿ ನಡುವೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು
‘ಪ್ರಜಾಪ್ರಭುತ್ವ’ ಆದರ್ಶವಾದ ಸಾರ್ವತ್ರಿಕ ಮೌಲ್ಯ: ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ