ಶಿವಮೊಗ್ಗ : ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿಯಲ್ಲಿ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ವನ್ನಿಯಕುಲ ಕ್ಷತ್ರೀಯ ಎಂದು ನಮೂದಿಸಲು ರಾಜ್ಯ ವನ್ನಿಯಕುಲ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ್ ಆರ್. ಮನವಿ ಮಾಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಸಾಗರದ ರಾಜ್ಯ ವನ್ನಿಯಕುಲ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ್.ಆರ್ ಅವರು, ರಾಜ್ಯದ ಹಿಂದುಳಿದ ವರ್ಗಗಳ ಆಯೋಗದವರಿಂದ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಜಾತಿಗಣತಿ ಸಂಬಂಧ ನಡೆದ ಸಂಘದ ಸರ್ವಸದಸ್ಯರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ, ಜಾತಿ ಕಾಲಂನಲ್ಲಿ ವನ್ನಿಯಕುಲ ಕ್ಷತ್ರೀಯ, ಉಪ ಜಾತಿ ಕಾಲಂನಲ್ಲಿ ವನ್ನಿಯರು, ವನ್ನಿಯ ಗೌಂಡರ್ ಇನ್ನಿತರೆ ನಮೂದಿಸಲು ತಿಳಿಸಿದ್ದಾರೆ.
ದಿನಾಂಕ 13-06-1929ರಂದು ಗೌರ್ನಮೆಂಟ್ ಆಫ್ ಮಡ್ರಾಸ್ ಸರ್ಕಾರದ ಸಂದರ್ಭದಲ್ಲಿಯೆ ವನ್ನಿಯಕುಲ ಕ್ಷತ್ರಿಯ ಪ್ರಮುಖ ಜಾತಿ ಎಂದು ನಮೂದಾಗಿದೆ. ವನ್ನಿಯಕುಲ ಕ್ಷತ್ರೀಯರನ್ನು ಹಲವು ಉಪನಾಮಗಳಿಂದ ಕರೆಯುತ್ತಾರೆ. ನಮ್ಮ ಕುಲಬಾಂಧವರು ಜಾತಿಗಣತಿಗೆ ಬಂದಾಗ ತನ್ನ ಉಪಜಾತಿ ಹೆಸರನ್ನು ಸರಿಯಾದ ರೀತಿಯಲ್ಲಿ ಬರೆಸ ತಕ್ಕದ್ದು.
ಅಧಿಕಾರಿಗಳು ಬಂದಾಗ ಸಮಾಜ ಬಾಂಧವರು ಸೌಜನ್ಯದಿಂದ ವರ್ತಿಸಿ ಅಗತ್ಯ ಮಾಹಿತಿ ನೀಡಿ. ನಮ್ಮ ಸಮೂದಾಯದ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಮಗೆ ಸಿಗಬೇಕಾದ ಸೌಲಭ್ಯವನ್ನು ಲಪಟಾಯಿಸುವ ಕೆಲವರಿಂದ ಸಹ ಜಾಗೃತಿ ಇರಬೇಕು. ಸಮಾಜ ಬಾಂಧವರು ವನ್ನಿಯಕುಲ ಕ್ಷತ್ರೀಯ ಬದಲು ವಹ್ನಿಕುಲ ಕ್ಷತ್ರೀಯ ಎಂದು ನಮೂದಿಸಿದಲ್ಲಿ ಅದು ತಿಗಳರ ಜಾತಿಯೊಡನೆ ಸೇರುತ್ತದೆ. ಹಿಂದೆ ತಿಗಳರು ಕ್ಷತ್ರಿಯರೆಂದು ತೋರಿಸಿಕೊಳ್ಳಲು ಅಗ್ನಿವಂಶ ಕ್ಷತ್ರೀಯ ಎಂಬ ಹೊಸ ಜಾತಿಯನ್ನೆ ಸೃಷ್ಟಿ ಮಾಡಿದ್ದನ್ನು ಕುಲಬಾಂಧವರು ಮರೆಯಬಾರದು. ಎಚ್ಚರಿಕೆಯಿಂದ ನಮ್ಮ ಜಾತಿ ಮತ್ತು ಉಪಜಾತಿ ನಮೂದಿಸಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ: ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ‘ದೀವರು’ ಎಂದು ಬರೆಸಿ- ಅಭಿಯಾನ ಸಂಚಾಲಕ ವೆಂಕಟೇಶ್ ಮೇಳವರಿಗೆ ಮನವಿ
ಶಿವಮೊಗ್ಗ: ಜಾತಿ ಗಣತಿ ವೇಳೆ ‘ಬಿಲ್ಲವ’ ಎಂದು ಬರೆಸಿ- ಸಂಘದ ಅಧ್ಯಕ್ಷ ಕರ್ಕಿಕೊಪ್ಪ ಚಂದ್ರು ಮನವಿ