ಶಿವಮೊಗ್ಗ: ಮಳಲಗದ್ದೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 45 ವರ್ಷಗಳಿಂದ ನಿರಂತರವಾಗಿ ರೈತರಿಗೆ ಸೇವೆ ನೀಡುತ್ತಾ ಬಂದಿದೆ. ಇದರಿಂದಾಗಿ ರೈತರ ಉತ್ತಮ ಬೆಳವಣಿಗೆಯಾಗಿದೆ. ಕೃಷಿಯ ಜೊತೆಗೆ ಹೈನುಗಾರಿಕೆಗೂ ಉತ್ತೇಜನ ನೀಡಿದರೇ ರೈತರಿಗೆ ಅನುಕಾಲವಾಗಲಿದೆ ಎಂಬುದಾಗಿ ಶ್ರೀ ಕ್ಷೇತ್ರ ಸಿಂಗದೂರು ಚೌಡೇಶ್ವರಿ ದೇಗುಲದ ಧರ್ಮದರ್ಶಿ ಡಾ.ರಾಮಪ್ಪ ಅವರು ಅಭಿಪ್ರಾಯ ಪಟ್ಟರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಳೆಕೊಪ್ಪದ ಧನಾಂಜನೇಯ ದೇವಸ್ಥಾನದ ಸಭಾಭವನಲ್ಲಿ ನಡೆದಂತ ಮಳಲಗದ್ದೆ(ಉಳವಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 2024-25ನೇ ಸಾಲಿನ ಆವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಮಳಲಗದ್ದೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 45 ವರ್ಷಗಳ ಕಾಲ ನಿರಂತರವಾಗಿ ರೈತರಿಗೆ ಸೇವೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ರೈತರು ಸಾಲವನ್ನು ನಿಗದಿತ ಅವಧಿಯೊಳೆಗೆ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಗಳು ಕೃಷಿ ಜೊತೆಗೆ ಹೈನುಗಾರಿಕೆಗೆ ಉತ್ತೇಜನ ನೀಡಬೇಕು. ಇದರಿಂದ ರೈತರ ಕುಟುಂಬಗಳು ಆರ್ಥಿಕವಾಗಿ ಸದೃಢವಾಗುತ್ತವೆ. ಆ ನಿಟ್ಟಿನಲ್ಲಿ ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರಿಗೆ ಅಗತ್ಯ ಮಾಹಿತಿ ಜೊತೆಗೆ, ಮಾರ್ಗದರ್ಶನ ನೀಡಬೇಕು ಎಂದರು.
ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದಂತ ಎಂ.ಆರ್. ಅಶೋಕ್ ಹೆಗಡೆ ಮಾತನಾಡಿ, ಸಹಕಾರ ಸಂಘದ ಅಭಿವೃದ್ಧಿಗೆ ರೈತರು ಹಾಗೂ ಷೇರುದಾರರು ಸಹಕಾರ ನೀಡಬೇಕು. ಸಂಘದ ಹೊಸ ಗೋಡೌನ್ ನಿರ್ಮಾಣವಾಗುತ್ತಿದೆ. ರೈತರಿಗೆ ಅನುಕೂಲಕಾರಿಯಾಗುವಂತ ಗೊಬ್ಬರ, ಬೀಜ, ಔಷಧಿ ನೀಡುವಂತ ಕೆಲಸ ಮಾಡಲಾಗುತ್ತದೆ. ಅಲ್ಪಾವಧಿಯ, ಮಧ್ಯಮಾವಧಿಯ ಸಾಲವನನು ರೈತರಿಗೆ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹೀಗಿದೆ ಮಳಲಗದ್ದೆ(ಉಳವಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಆಡಳಿತ ವರದಿ
2024-25 ನೇ ಸಾಲಿನಲ್ಲಿ ಸಂಘವು 16,7000 ರೂಪಾಯಿ ನಿವ್ವಳ ಲಾಭ ಗಳಿಸಿದೆ. ಸಂಘವು ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮತ್ತು ನಬಾರ್ಡನ ಸುತ್ತೋಲೆ ಪ್ರಕಾರ ಶಿವಮೊಗ್ಗ ಜಿಲ್ಲೆಗೆ ಮೊದಲ ಕಂಪ್ಯೂಟರ್ ಆಡಿಟ್ ಆಗಿರುವ ಸಂಘವಾಗಿದೆ. ರೈತರಿಗೆ ಹೊಸದಾಗಿ ಸಾಲ ಕೊಡಲಾಗಿದ್ದು, ಬೆಳೆ ವಿಮೆ, ಯಶಸ್ವಿನಿ ಆರೋಗ್ಯ ವಿಮೆ, ಛಾಪ ಕಾಗದ, ಪಹಣಿ ಹಾಗೂ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಮಳಲಗದ್ದೆ ಕಛೇರಿಯ ಮುಂಭಾಗದಲ್ಲಿ ಗೊಬ್ಬರ, ಔಷಧಿ, ಬೀಜ ಮಾರಟ ಮಾಡಲು ಗೋದಾಮು ಮಾಡಲಾಗುತ್ತಿದೆ. ಅದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಾಲಗುವುದು. ರೈತರ ಎಲ್ಲಾ ಸೇವೆಗಳಿಗೆ ಅಧ್ಯಕ್ಷರು ಮತ್ತು ಅಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸಿದ್ದವಾಗಿರುತ್ತೇವೆ ಎಂದು ಭರವಸೆ ನೀಡಲಾಯಿತು.
ಈ ವೇಳೆ ಕಾರ್ಯ ನಿರ್ವಾಹಕಾಧಿಕಾರಿ ವಿನಯ್ ಎಚ್.ಎಂ.ವಾರ್ಷಿಕ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಬೈರಪ್ಪ ಮೈಸಾವಿ ಸ್ವಾಗತಿಸಿದರು. ನಿರ್ದೇಶಕರಾದ ನಾರಾಯಣ ಹೊಳೆಕೊಪ್ಪ, ಭಾಸ್ಕರ್ ಬರಗಿ, ಪುಟ್ಟಪ್ಪ ಬರಿಗೆ, ಮೋಹನ ಕುಪ್ಪೆ, ನಾಗರತ್ನಮ್ಮ, ಸತ್ಯಪ್ಪ ದೂಗೂರು, ನಾಗರಾಜ್ ಅವಲಗೋಡು, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಶರಣಪ್ಪ, ಕಚೇರಿ ಸಹಾಯಕ ಶ್ರೀಧರ್ ಸೇರಿದಂತೆ ಇತರರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS : ದಸರಾ ಉದ್ಘಾಟನೆ, ಮುಲ್ಲಾಗಳ ಪ್ರಕಾರ ನಡೆಯುತ್ತಿದೆ : ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ