ಶಿವಮೊಗ್ಗ: ಸಾಗರ ತಾಲ್ಲೂಕನ್ನು ಜಿಲ್ಲೆಯಾಗಿ ಮಾಡಬೇಕು ಎನ್ನುವ ಹೋರಾಟ ತೀವ್ರಗೊಂಡಿದೆ. ಈ ಸಾಗರ ಜಿಲ್ಲಾ ಹೋರಾಟಕ್ಕೆ ಸೊರಬ ತಾಲ್ಲೂಕಿನ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್ ಬೆಂಬಲ ಘೋಷಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯವರು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ಜಿಲ್ಲೆ ಮಾಡುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಶಿವಮೊಗ್ಗ ಜಿಲ್ಲಾ ಕ್ಷೇತ್ರ ಉಳವಿಯಿಂದ ದೂರವಾಗಲಿದೆ. ಸಾಗರ ಜಿಲ್ಲೆ ಮಾಡಿದರೇ ನಮಗೆ ಅನುಕೂಲವಾಗಲಿದೆ. ಸಾಗರ ಜಿಲ್ಲೆ ಮಾಡುವುದಕ್ಕೆ ಎಲ್ಲಾ ಅನುಕೂಲಗಳಿವೆ ಎಂದರು.
ಸಾಗರ ಜಿಲ್ಲಾ ಹೋರಾಟ ಸಮಿತಿ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ. ನಮ್ಮ ಸಂಪೂರ್ಣ ಸಹಕಾರವಿದೆ. ಜಿಲ್ಲೆಗೆ ಬೇಕಾದಂತ ಎಲ್ಲಾ ಕಚೇರಿಗಳು ಸಾಗರದಲ್ಲಿದ್ದಾವೆ. ಸಾಗರ, ಸೊರಬ, ಹೊಸನಗರ, ಸಿದ್ದಾಪುರ ಸೇರಿಸಿ ಜಿಲ್ಲಾ ಕೇಂದ್ರ ಮಾಡಿದರೇ, ಹತ್ತಿರವಾಗಲಿದೆ. ಅಭಿವೃದ್ಧಿ ಕಾರ್ಯದಲ್ಲೂ ಅನುಕೂಲವಾಗಲಿದೆ. ಸಾಗರ ಜಿಲ್ಲೆಯನ್ನಾಗಿ ಮಾಡುವ ಹೋರಾಟಕ್ಕೆ ಯಾವ ತ್ಯಾಗವನ್ನು ಮಾಡುವುದಕ್ಕೂ ನಾವು ಸಿದ್ಧವಿದ್ದೇವೆ. ಸಾಗರ ಜಿಲ್ಲಾ ಹೋರಾಟಕ್ಕೆ ದೂಗೂರು ಗ್ರಾಮಸ್ಥರ ಸಂಪೂರ್ಣ ಬೆಂಬಲವಿದೆ ಎಂಬುದಾಗಿ ತಿಳಿಸಿದರು.
ಸಾಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ತೀ.ನಾ ಶ್ರೀನಿವಾಸ್ ಮಾತನಾಡಿ, ಸಾಗರ ಈ ಹಿಂದೆಯೇ ಜಿಲ್ಲಾ ಕೇಂದ್ರವಾಗಬೇಕಿತ್ತು. ಸಾಗರದಲ್ಲಿ ಉಪ ವಿಭಾಗೀಯ ಕಚೇರಿಯಿದೆ, ಉಪ ವಲಯ ಸಂರಕ್ಷಣಾಧಿಕಾರಿಗಳ ಕಚೇರಿಯಿದೆ. ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್ ವಿಭಾಗದ ಕಚೇರಿಯಿದೆ. ಆರ್ ಟಿ ಓ ಕಚೇರಿ, ಜಿಲ್ಲಾ ಸತ್ರ ನ್ಯಾಯಾಲಯ, ಜಿಎಸ್ ಟಿ ಕಚೇರಿ ಕೂಡ ಇದೆ ಎಂದರು.
ಸಾಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ಚಾರ್ವಾಕ ರಾಘವೇಂದ್ರ ಮಾತನಾಡಿ, ಇಂದು ಸಾಗರ ಜಿಲ್ಲೆ ಹೋರಾಟ ಸಂಬಂಧ ಸಿದ್ಧಾಪುರದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ 200ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಸೊರಬದಲ್ಲಿ ಭೇಟಿ ಮಾಡಿದ್ದೇವೆ. ಅವರು ಕೂಡ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸೆ.18ರಂದು ಸಾಗರ ಜಿಲ್ಲೆ ಘೋಷಣಗೆ ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಜಾಗ್ರಹ ಪತ್ರ ಹೋರಾಟ ನಡೆಸಲಾಗುತ್ತಿದೆ. ಹೆಚ್ಚು ಹೆಚ್ಚು ಸಂಖ್ಯೆಯ ಜನರು ಭಾಗಿಯಾಗಿ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೂಗೂರು ಗ್ರಾಮ ಪಂಚಾಯ್ತಿ ಸದಸ್ಯ ಪ್ರಶಾಂತ್ ಕೈಸೋಡಿ, ಸಾಗರ ಜಿಲ್ಲಾ ಹೋರಾಟ ಸಂಚಾಲನ ಸಮಿತಿಯ ವೆಂಕಟೇಶ್, ಬಸವರಾಜ ಬಿಳಿಭಾವಿ, ಸಾಗರ ಮಾಜಿ ಪುರಸಭೆ ಉಪಾಧ್ಯಕ್ಷ ಮಹಮ್ಮದ್ ಖಾಸಿಂ, ರೈತ ಬಂಗಾರಪ್ಪ ಕಣ್ಣೂರು, ಉಳವಿಯ ಗ್ರಾಮಸ್ಥರಾದಂತ ನಸರುಲ್ಲಾ, ಉಳವಿ ಸರ್ಕಾರಿ ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಸದಸ್ಯ ಇಲಿಯಾಸ್, ನೂರುಲ್ಲಾ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
ಶಿವಮೊಗ್ಗ: ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ‘ನಾಗೋಡಿ ವಿಶ್ವನಾಥ್’ ನೇಮಕ
ಕಾರು ಪ್ರಿಯರೇ, ಸೆ. 22ರ ಬಳಿಕ ಯಾವ ಕಾರಿನ ಬೆಲೆ ಎಷ್ಟು ಕಡಿಮೆಯಾಗುತ್ತೆ ಗೊತ್ತಾ? ಪೂರ್ಣ ವಿವರ ಇಲ್ಲಿದೆ!