ಶಿವಮೊಗ್ಗ: ಸಾಗರ ಇತಿಹಾಸ ಪ್ರಸಿದ್ದವಾದ ಕೆಳದಿ ಮಠದಲ್ಲಿ ಅ. 2ರಂದು ಇತಿಹಾಸ ಪ್ರಸಿದ್ದ ಪಚ್ಚೆಲಿಂಗು ದರ್ಶನ ಏರ್ಪಡಿಸಿದ್ದು, ಪ್ರಾತಃಕಾಲದಲ್ಲಿ ಪಚ್ಚೆಲಿಂಗಕ್ಕೆ ಅಭಿಷೇಕಾದಿ ವಿಶೇಷ ಪೂಜೆ ನಂತರ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ ಎಂದು ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬಂದಗದ್ದೆ-ಕೆಳದಿ ರಾಜಗುರು ಹಿರೇಮಠದಲ್ಲಿ ಶುಕ್ರವಾರ ವಿಜಯದಶಮಿ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದಂತ ಅವರು, 2019ರಿಂದ ಶ್ರೀಮಠದಲ್ಲಿ ಪಚ್ಚೆಲಿಂಗು ದರ್ಶನಕ್ಕೆ ಅವಕಾಶ ಕಲ್ಪಿಸುತ್ತಾ ಬರಲಾಗುತ್ತಿದೆ. ಈ ವರ್ಷ ಅ. 2ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ದರ್ಶನ ಇರುತ್ತದೆ. ಪಚ್ಚೆಲಿಂಗು ದರ್ಶನದಿಂದ ಭಕ್ತರ ಅಭಿಷ್ಟೆಗಳು ಈಡೇರುತ್ತದೆ. ಕೆಳದಿ ಅರಸರು ಶ್ರೀಮಠಕ್ಕೆ ಪಚ್ಚೆಲಿಂಗು ಉಡುಗೊರೆಯಾಗಿ ನೀಡಿ ಪ್ರತಿವರ್ಷ ವಿಜಯ ದಶಮಿಯಂದು ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವಂತೆ ಸಂಕಲ್ಪಿಸಿದ್ದರ ಮೇರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ನವರಾತ್ರಿ ಅಂಗವಾಗಿ ಶ್ರೀಮಠದಲ್ಲಿ ಪ್ರತಿದಿನ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಅ. 1ರಂದು ಡಾ. ಗುರುಸಿದ್ದದೇವ ಶಿವಾಚಾರ್ಯ ಸ್ವಾಮಿಗಳ 16ನೇ ಪುಣ್ಯಾರಾಧನೆ ಕಾರ್ಯಕ್ರಮ ಇರುತ್ತದೆ. ನಂತರ ಶ್ರೀಮಠದ ಚೌಡೇಶ್ವರಿ ಮಾತೆಗೆ ಸಾವಿರಾರು ಉಡಿ ತುಂಬಿ ಅದನ್ನು ಭಕ್ತರಿಗೆ ನೀಡಲಾಗುತ್ತದೆ. ಅ. 2ರಂದು ಮಧ್ಯಾಹ್ನ 12ಕ್ಕೆ ಶ್ರೀಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳ ಪಲ್ಲಕ್ಕಿ ಉತ್ಸವ ಇರುತ್ತದೆ. ಮಧ್ಯಾಹ್ನ 2ಕ್ಕೆ ಭಾವೈಕ್ಯ ಧರ್ಮ ಸಮ್ಮೇಳನ ಹಾಗೂ ಹಿರಿಯ ಸಾಧಕರಿಗೆ ಕೆಳದಿಶ್ರೀ ಪ್ರಶಸ್ತಿ ಪ್ರದಾನ ಇರುತ್ತದೆ. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಇರುತ್ತದೆ. ಭಕ್ತಾದಿಗಳು ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ರಸ್ತೆ ರಿಪೇರಿ ಮಾಡಿ
ವಿಜಯದಶಮಿ ಜಾತ್ರಾ ಮಹೋತ್ಸವ ಹಾಗೂ ಪಚ್ಚೆಲಿಂಗ ದರ್ಶನಕ್ಕೆ ರಾಜ್ಯದ ಬೇರೆಬೇರೆ ಭಾಗಗಳಿಂದ ಸಹಸ್ರಾರು ಭಕ್ತರು ಮಠಕ್ಕೆ ಬರುತ್ತಿದ್ದಾರೆ. ಆದರೆ ಮಠಕ್ಕೆ ಬರುವ ರಸ್ತೆ ಸಂಪೂರ್ಣ ಹಾಳಾಗಿದ್ದು ಓಡಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ಜನಪ್ರತಿನಿಧಿಗಳು, ತಾಲ್ಲೂಕು ಆಡಳಿತ ರಸ್ತೆ ಅಭಿವೃದ್ದಿಪಡಿಸುವಂತೆ ಶ್ರೀಗಳು ಮನವಿ ಮಾಡಿದರು.
ಈ ವೇಳೆ ಉತ್ಸವ ಸಮಿತಿಯ ಅರುಣ್ ಪಾಟೀಲ್, ಶಶಿಧರ ಗೌಡ, ವಿರೇಂದ್ರ ಪಾಟೀಲ್, ಮಹೇಶ್ ಗೌಡ, ತೇಜಸ್ವಿ ಇನ್ನಿತರರು ಹಾಜರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳು ಸಮಾಜದ ಆಸ್ತಿ: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ
ಶಿವಮೊಗ್ಗ: ಸೆ.29ರಂದು ಸಾಗರದ ಶೃಂಗೇರಿ ಶಂಕರಮಠದಲ್ಲಿ ‘ಶಾರದಾ ಪ್ರಸಾದ ಪುರಸ್ಕಾರ’ ಪ್ರದಾನ