ಬೆಂಗಳೂರು: ಶಿವಮೊಗ್ಗ ಸಿಸಿಎಫ್ ಡಾ.ಹನುಮಂತಪ್ಪ ಅವರನ್ನು ಜುಲೈ.29ರಂದು ವರ್ಗಾವಣೆಗೊಳಿಸಿ ಆದೇಶಿಸಲಾಗಿತ್ತು. ಇಂದು ಶಿವಮೊಗ್ಗ ಸಿಸಿಎಫ್ ಡಾ.ಹನುಮಂತಪ್ಪ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ದಿನಾಂಕ: 29.07.2025 ರ ಅಧಿಸೂಚನೆ ಸಂಖ್ಯೆ e-DPAR 151 SFP 2025 ರ ಮೂಲಕ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ಟಿ ಹೀರಾಲಾಲ್, IFS (KN:2002) ಅವರನ್ನು ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿರುವ ಆದೇಶವನ್ನು ಈ ಮೂಲಕ ರದ್ದುಗೊಳಿಸಲಾಗಿದೆ ಎಂದಿದೆ.
ಇನ್ನೂ ದಿನಾಂಕ: 29.07.2025 ರ ಅಧಿಸೂಚನೆ ಸಂಖ್ಯೆ e-DPAR 151 SFP 2025 ರ ಮೂಲಕ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಡಾ. ಕೆ.ಟಿ. ಹನುಮಂತಪ್ಪ, IFS (KN:2005) ಅವರನ್ನು ವರ್ಗಾವಣೆ ಮಾಡಿರುವ ಆದೇಶವನ್ನು ಈ ಮೂಲಕ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಡಾ.ಕೆ.ಟಿ ಹನುಮಂತಪ್ಪ ಅವರ ವರ್ಗಾವಣೆ ರದ್ದಾಗಿರುವ ಹಿನ್ನಲೆಯಲ್ಲಿ ಅವರು ಶಿವಮೊಗ್ಗ ಸಿಸಿಎಫ್ ಆಗಿಯೇ ಮುಂದುವರೆಯಲಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ
BREAKING: ಅಮಾನತು ರದ್ದಾದ ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ ರಾಜ್ಯ ಸರ್ಕಾರ ಆದೇಶ
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು