ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ದೂಗೂರಲ್ಲಿ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದಂತ ನೀಲಗಿರಿ ಮರಗಳನ್ನು ಕಡಿತಲೆ ಮಾಡಿದಂತ ಇಬ್ಬರ ವಿರುದ್ಧ ಅರಣ್ಯಾಧಿಕಾರಿಗಳು ಕೇಸ್ ದಾಖಲಿಸಿದ್ದಾರೆ. ಅಲ್ಲದೇ ಕಡಿತಲೆ ಮಾಡಿದಂತ ಮರಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವಲಯ ಅರಣ್ಯಾಧಿಕಾರಿ ಶ್ರೀಪಾದ್ ನಾಯ್ಕ್ ಅವರು ಮಾಹಿತಿ ನೀಡಿದ್ದು, ಸೊರಬದ ದೂಗೂರು ಬಳಿಯ ಸರ್ವೆ ನಂಬರ್ 100ರಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದ್ದಂತ ನೀಲಗಿರಿ ಮರಗಳನ್ನು ಕಡಿತಲೆ ಮಾಡಿದ್ದಂತ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿ ಆಧರಿಸಿ ಉಳವಿಯ ಉಪ ವಲಯ ಅರಣ್ಯಾಧಿಕಾರಿ ಯೋಗರಾಜ.ಕೆ.ಈ, ಗಸ್ತು ಅರಣ್ಯ ಪಾಲಕಿ ಸುಮಿತಾ.ಆರ್, ಮೈಸಾವಿ ಗಸ್ತು ಅರಣ್ಯ ಪಾಲಕ ಪ್ರವೀಣ್ ಕುಮಾರ್ ಹಾಗೂ ವಾಚರ್ ಶ್ರೀಕಾಂತ್ ದಾಳಿ ನಡೆಸಿದ್ದರು ಎಂದು ತಿಳಿಸಿದ್ದಾರೆ.
ಈ ದಾಳಿಯ ಸಂದರ್ಭದಲ್ಲಿ ಸೊರಬ ತಾಲ್ಲೂಕಿನ ದೂಗೂರು ಗ್ರಾಮದ ಸರ್ವೆ ನಂಬರ್.100ರಲ್ಲಿ ನೀಲಗಿರಿ ಕಡಿತಲೆ ಮಾಡಿದ್ದು ಕಂಡು ಬಂದಿದೆ. ದೂಗೂರು ಎಂ ಎಫ್ ಅರಣ್ಯದಲ್ಲಿ ಅಕ್ರಮವಾಗಿ ನೀಲಗಿರಿ ಮರಗಳನ್ನು ಕಡಿದು ಬೀಳಿಸಿದನ್ನು ಜಪ್ತಿ ಮಾಡಲಾಗಿದೆ. ಸುಮಾರು 6.000ಎಂ3 ಸಿಪ್ಪೆ ಸಹಿತ ನೀಲಗಿರಿ ಪಲ್ಪವುಡ್ ತಯಾರಿಸಿದ್ದು, ಸದರಿ ಕೃತ್ಯವು ಅರಣ್ಯ ಇಲಾಖೆ ಕಾಯ್ದೆ ಮತ್ತು ಕಾನೂನಿಗೆ ವಿರುದ್ಧವಾಗಿದ್ದರಿಂದ ಸ್ಥಳದಲ್ಲಿದ್ದ ನೀಲಗಿರಿ ಪಲ್ಪು ವುಡ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಸ್ಥಳ ಮಹಜರ್ ನೆಡೆಸಿ, ಸ್ಥಳದಲ್ಲಿದ್ದ ನೀಲಗಿರಿ ಪಲ್ಪವುಡ್ ಗಳನ್ನು ಸುರಕ್ಷತೆಗಾಗಿ ಸಾಗರ ಜಿಟಿಡಿ ಆವರಣಕ್ಕೆ ಸಾಗಿಸಿದ್ದು, ಈ ಸಂಬಂಧ ಇಬ್ಬರ ವಿರುದ್ಧ ಸೊರಬ ನ್ಯಾಯಾಲಯದ ಅನುಮತಿ ಪಡೆದು ಅರಣ್ಯ ಮೊಕದ್ದಮೆ ಸಂಖ್ಯೆ 20/2025-26 ದಿನಾಂಕ 10-10-2025ರ ಅನುಸಾರ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ನಡೆಸಿದಂತ ಸೊರಬ ವಲಯ ಅರಣ್ಯಾಧಿಕಾರಿ ಶ್ರೀಪಾದ ನಾಯ್ಕ್, ಉಳವಿಯ ಉಪ ವಲಯ ಅರಣ್ಯಾಧಿಕಾರಿ ಯೋಗರಾಜ.ಕೆ.ಈ, ಉಳವಿ ಗಸ್ತು ಅರಣ್ಯ ಪಾಲಕಿ ಸುಮಿತಾ.ಆರ್, ಮೈಸಾವಿ ಗಸ್ತು ಅರಣ್ಯ ಪಾಲಕ ಪ್ರವೀಣ್ ಕುಮಾರ್ ಹಾಗೂ ವಾಚರ್ ಶ್ರೀಕಾಂತ್ ಕಾರ್ಯವನ್ನು ಶಿವಮೊಗ್ಗ ಸಿಸಿಎಫ್ ಹನುಮಂತಪ್ಪ, ಸೊರಬ-ಸಾಗರ ತಾಲ್ಲೂಕು DFO ಮೋಹನ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion
CRIME NEWS: ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಮೂವರು ಅರೆಸ್ಟ್