ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಅವಾಂತರವೇ ಉಂಟಾಗಿದೆ. ಸೊರಬ ತಾಲ್ಲೂಕಿನ ಕ್ಯಾಸನೂರಲ್ಲಿ ಮಳೆಯಿಂದಾಗಿ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಕ್ಯಾಸನೂರು ಗ್ರಾಮದ ವಾಸಪ್ಪ ಎಂಬುವವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆ ಮತ್ತು ಕಾರು ನಿಲ್ಲಿಸುವ ಜಾಗದ ಮಧ್ಯಭಾಗ ಮರ ಬಿದ್ದಿದ್ದು ಕಾರಿಗೆ ಯಾವುದೇ ಹಾನಿಯಾಗಿಲ್ಲ. ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದ್ದು ವಿದ್ಯುತ್ ಕೂಡ ಇಲ್ಲದಿದ್ದರಿಂದ ಮನೆಯವರು ನಿಟ್ಟುಸಿರು ಬಿಡುವಂತಾಗಿದೆ.
ಮಳೆಯಿಂದ ಮನೆಗೆ ಹೆಚ್ಚಿನ ಹಾನಿಯಾಗಿದ್ದು ಅಧಿಕಾರಿಗಳು ಮತ್ತು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಮಳೆಹಾನಿ ಪರಿಹಾರ ನಿಧಿಯಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರಾದ ವಿಕಾಸ್ ಕ್ಯಾಸನೂರು ಆಗ್ರಹಿಸಿದ್ದಾರೆ.
ವರದಿ: ವಿಕಾಸ್, ಕ್ಯಾಸನೂರು, ಸೊರಬ
ಕೆಕೆಆರ್‌ಡಿಬಿ 2025- 26ನೇ ಸಾಲಿನ 5,000 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲರ ಅಂಕಿತ
ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ಕೊಡುವುದನ್ನು ‘ಪೊಲೀಸ್ ಇಲಾಖೆ’ ಸಹಿಸುವುದಿಲ್ಲ: ಸಾಗರ ಡಿವೈಎಸ್ಪಿ ಎಚ್ಚರಿಕೆ