ಶಿವಮೊಗ್ಗ : ಶಿವಗಂಗಾ ಯೋಗ ಕೇಂದ್ರದಲ್ಲಿ ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ,ಪಶು ವೈದ್ಯಕೀಯ ಕಾಲೇಜು, ಕಾಶಿಪುರ, ನೆಹರು ಯುವ ಕೇಂದ್ರ, ಶಿವಮೊಗ್ಗ ಸಹಯೋಗದೊಂದಿಗೆ ದಿನಾಂಕ 19.06.2024 ರಿಂದ 3 ದಿನಗಳ ಕಾಲ ಶಿವಗಂಗಾ ಯೋಗ ಕೇಂದ್ರದಲ್ಲಿ ಯೋಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ತರಬೇತುದಾರರಾಗಿ ವೀಣಾ, ಅನುರಾಧ ರವರು ಶಿಬಿರಾರ್ಥಿಗಳಿಗೆ ಯೋಗದಿಂದ ಮನಸ್ಸಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು, ಯೋಗದಿಂದ ಆಗುವ ಪ್ರಯೋಜನಗಳೇನು, ಯೋಗಾಸನದಲ್ಲಿ ಎಷ್ಟು ಆಸನಗಳಿವೆ ಯಾವ ಆಸನದಿಂದ ಏನು ಪ್ರಯೋಜನವೆಂದು ತಿಳಿಸಿಕೊಡಲಿದ್ದಾರೆ. ಇಂದು ಶಿಬಿರದಲ್ಲಿ ಸುಮಾರು 80 ಜನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.
ಶಿಬಿರದಲ್ಲಿ ಪಶು ವೈದ್ಯಕೀಯ ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿಯಾದ ಡಾ. ರವಿಕುಮಾರ್, ಡಾ. ಯೋಗೇಶ್ , ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಯಾದ ಉಲ್ಲಾಸ್ ಕೆ.ಟಿ.ಕೆ, ಲೆಕ್ಕಾಧಿಕಾರಿಯಾದ ರಮೇಶ್, ಕಾರ್ಯಕರ್ತನಾದ ಶೇಖ್ ಹಸೇನ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯೋಗ ಮಾಡಲು ಆಸಕ್ತಿವುಳ್ಳ ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದ್ದಾರೆ.